Death By Selfie: ಸೆಲ್ಫಿ ಹುಚ್ಚು, ಹೊಗೆನಕಲ್ ಜಲಪಾತದಲ್ಲಿ ವಿದ್ಯಾರ್ಥಿ ನೀರುಪಾಲು

ಮೈಸೂರು ಮೂಲದ ಉಮಾಶಂಕರ್(19) ವರ್ಷದ ನರ್ಸಿಂಗ್ ವಿದ್ಯಾರ್ಥಿ ಮೃತ ದುರ್ದೈವಿ. ಗುರುವಾರ ಸ್ನೇಹಿತರೊಟ್ಟಿಗೆ  ರಜೆಯ ಮಜಾ ಅನುಭವಿಸಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ.

Written by - Zee Kannada News Desk | Last Updated : Jan 27, 2022, 01:31 PM IST
  • ಸೆಲ್ಫಿ ಹುಚ್ಚಿನಿಂದಾಗಿ ವಿದ್ಯಾರ್ಥಿ ನೀರು ಪಾಲು
  • ಮೈಸೂರು ಮೂಲದ ಉಮಾಶಂಕರ್(19) ವರ್ಷದ ನರ್ಸಿಂಗ್ ವಿದ್ಯಾರ್ಥಿ ಮೃತ ದುರ್ದೈವಿ
  • ಗುರುವಾರ ಸ್ನೇಹಿತರೊಟ್ಟಿಗೆ ರಜೆಯ ಮಜಾ ಅನುಭವಿಸಲು ತೆರಳಿದ್ದ ವೇಳೆ ನಡೆದಿರುವ ದುರ್ಘಟನೆ
Death By Selfie: ಸೆಲ್ಫಿ ಹುಚ್ಚು, ಹೊಗೆನಕಲ್ ಜಲಪಾತದಲ್ಲಿ ವಿದ್ಯಾರ್ಥಿ ನೀರುಪಾಲು  title=
Death By Selfie

ಚಾಮರಾಜನಗರ: ಸೆಲ್ಫಿ ಹುಚ್ಚಿನಿಂದಾಗಿ ಫೋಟೋ ಕ್ಲಿಕ್ಕಿಸಿಕೊಳ್ಳುವ ವೇಳೆ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ನಡೆದಿದೆ.

ಮೈಸೂರು ಮೂಲದ  ಸಂಗಮೇಶ್ ಎಂಬುವರ ಮಗ ಉಮಾಶಂಕರ್(19)  ಎಂಬ ನರ್ಸಿಂಗ್ ವಿದ್ಯಾರ್ಥಿ ಸೆಲ್ಫಿ (Death By Selfie) ಕ್ಲಿಕ್ಕಿಸುವ ವೇಳೆ ಮೃತಪಟ್ಟ ದುರ್ದೈವಿ . ಗುರುವಾರ ಸ್ನೇಹಿತರಾದ  ರವಿಕುಮಾರ್, ಶಿವಪ್ರಸಾದ್ ಎಂಬವರೊಟ್ಟಿವೆ  ರಜೆಯ ಮಜಾ ಅನುಭವಿಸಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ- Anand Singh : 'ಕಾಂಗ್ರೆಸ್ ಪಕ್ಷ ಇಂದು ಆಕ್ಸಿಜನ್ ಮೇಲೆ ICU ನಲ್ಲಿದೆ'

ಆರಂಭದಿಂದಲೂ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ ಉಮಾಶಂಕರ್ ಬೇಡವೆಂದರೂ ಜಲಪಾತದ ತುದಿಯೊಂದರ ಬಳಿ ತೆರಳಿ ತನ್ನ ಸ್ನೇಹಿತರನ್ನು ಫೋಟೋ ತೆಗೆಯುವಂತೆ ಹೇಳಿದ್ದಾನೆ‌. ಸ್ನೇಹಿತರು ಪೋಟೋಗಳನ್ನು ತೆಗೆದ ಬಳಿಕ ಜಲಪಾತದ (Falls) ಕೊರಕಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವೇಳೆ ಮೃತ ದುರ್ದೈವಿ ಕಾಲುಜಾರಿ  ನೀರಿಗೆ ಬಿದ್ದಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.

80 ಅಡಿಗಳಿಗಿಂತಲೂ ಆಳವಾದ ಜಾಗದಲ್ಲಿ ಉಮಾಶಂಕರ್ ಜಾರಿ ಬಿದ್ದಿದ್ದು, ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ತೆರಳಿ ಗೋಪಿನಾಥಂನ ನುರಿತ ಈಜುಗಾರರಿಂದ ಶವ ಹುಡುಕಾಟದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 

ಇದನ್ನೂ ಓದಿ- Padmashri Award: ಬೆಳಗಾವಿ ಜಿಲ್ಲೆಯ ಹೆಮ್ಮೆಯ ಪುತ್ರನಿಗೂ ಪದ್ಮಶ್ರೀ

ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು  ಇನ್ನು ಈ ಸಂಬಂಧ ಯಾವುದೇ ದೂರುಗಳು ದಾಖಲಾಗಿಲ್ಲ. ವಿದ್ಯಾರ್ಥಿ ಪಾಲಕರು, ಸ್ನೇಹಿತರು ಸ್ಥಳದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News