/kannada/photo-gallery/anjeer-fruit-for-high-blood-sugar-control-249311 ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! 249311

Salman Khan ಫಾರ್ಮ್ ಹೌಸ್ ಕೆಳಗಡೆ ಫಿಲ್ಮ್ ಸ್ಟಾರ್ಸ್ ಗಳ ಶವಗಳನ್ನು ಹೂಳಲಾಗಿದೆಯಂತೆ!

Salman Khan  'ಡಿ ಗ್ಯಾಂಗ್' ಗೆ ಫ್ರಂಟ್ ಮ್ಯಾನ್ ಆಗಿದ್ದಾರೆ ಎಂದು ಸಲ್ಮಾನ್ ಖಾನ್ ಪಕ್ಕದ ಮನೆ ವ್ಯಕ್ತಿ Ketan Kakkad ಆರೋಪಿಸಿದ್ದಾರೆ.

Written by - Nitin Tabib | Last Updated : Jan 24, 2022, 10:59 AM IST
  • ಸಲ್ಮಾನ್ ಅವರ ಪನ್ವೇಲ್ ಫಾರ್ಮ್ ಹೌಸ್ ನಲ್ಲಿ ಚಿತ್ರ ತಾರೆಯರ ಶವ ಹೂಳಲಾಗಿದೆಯಂತೆ!
  • ಅಷ್ಟೇ ಅಲ್ಲ ಸಲ್ಮಾನ್ 'ಡಿ ಗ್ಯಾಂಗ್' ಮುಂದಾಳತ್ವ ವಹಿಸಿದ್ದಾರೆಯಂತೆ!
  • ಮಕ್ಕಳ ಕಳ್ಳಸಾಗಾಣಿಕೆಯಲ್ಲೂ ಕೂಡ ಸಲ್ಮಾನ್ ತೊಡಗಿದ್ದಾರಂತೆ!
Salman Khan ಫಾರ್ಮ್ ಹೌಸ್ ಕೆಳಗಡೆ ಫಿಲ್ಮ್ ಸ್ಟಾರ್ಸ್ ಗಳ ಶವಗಳನ್ನು ಹೂಳಲಾಗಿದೆಯಂತೆ! title=
Salman Khan (File Photo)

ನವದೆಹಲಿ: ಕೆಲ ದಿನಗಳ ಹಿಂದೆ ಖ್ಯಾತ ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್ (Salman Khan) ತನ್ನ ಪಕ್ಕದ ಮನೆಯ ವ್ಯಕ್ತಿ ಕೇತನ್ ಕಕ್ಕಡ್ (Ketan Kakkad) ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಸಿಟಿ ಸಿವಿಲ್ ಕೋರ್ಟ್ ನಡೆಸಿದೆ. ಈ ಸಂದರ್ಭದಲ್ಲಿ ಕೇತನ್ ಕಕ್ಕಡ್ ಅನಗತ್ಯವಾಗಿ ತಮ್ಮ ಧಾರ್ಮಿಕ ಗುರುತನ್ನು ವಿವಾದದ ನಡುವೆ ತಂದಿದ್ದಾರೆ ಎಂದು ಸಲ್ಮಾನ್ ಆರೊಪಿಸಿದ್ದಾರೆ. ಇದಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕೇತನ್ ಕಕ್ಕಡ್, ಸಲ್ಮಾನ್ ಖಾನ್ ಫಾರ್ಮ್ ಹೌಸ್ ನಲ್ಲಿ ಹಲವು ಚಲನಚಿತ್ರ ತಾರೆಯರ ಶವಗಳನ್ನು ಹೂಳಲಾಗಿದೆ ಎಂದಿದ್ದರು.

ವರದಿಯ ಪ್ರಕಾರ, ಸಲ್ಮಾನ್ ಖಾನ್ (Salman Khan) ಅವರ ವಕೀಲ ಪ್ರದೀಪ್ ಗಾಂಧಿ ಅವರು ಕೇತನ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಮತ್ತು ಸಂದರ್ಶನಗಳನ್ನು ನ್ಯಾಯಾಲಯದ ಮುಂದೆ ವಿಚಾರಣೆಯ ಸಮಯದಲ್ಲಿ ಓದಿದ್ದಾರೆ. ಸಲ್ಮಾನ್ ಖಾನ್ ಅವರು 'ಡಿ ಗ್ಯಾಂಗ್'ನ ಮುಂಚೂಣಿಯಲ್ಲಿದ್ದಾರೆ (D Gang Frontman), ಧಾರ್ಮಿಕ ಗುರುತಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಆಡಳಿತಾರೂಢ ಪಕ್ಷಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಕೇತನ್ ಕಕ್ಕಡ್ ಆರೋಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ. 

ಸಲ್ಮಾನ್ ಮಕ್ಕಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಮತ್ತು ಹಲವು ಚಲನಚಿತ್ರ ತಾರೆಯರ ಶವಗಳನ್ನು ಅವರ ತೋಟದ ಮನೆಯಲ್ಲಿ ಹೂಳಲಾಗಿದೆ ಎಂದು ಕೇತನ್ ಹೇಳಿದ್ದಾರೆ. ಕೇತನ್ ಅವರ ವಿಡಿಯೋಗಳು ಹೆಚ್ಚು ಶೇರ್ ಆಗುತ್ತಿವೆ. ಇದೇ ವೇಳೆ ಸಲ್ಮಾನ್, ಕೇತನ್ ಅವರನ್ನು ತಮ್ಮ ಮಾನಹಾನಿ ಮಾಡುವುದನ್ನು ನಿಲ್ಲಿಸುವಂತೆ ಮತ್ತು ಅವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಕೇಳಿಕೊಂಡಿದ್ದಾರೆ.

ಸಲ್ಮಾನ್ ಪರವಾಗಿ ಮಾತನಾಡಿದ ಅವರ ವಕೀಲ ಪ್ರದೀಪ್ ಗಾಂಧಿ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಎಲ್ಲಾ ಆರೋಪಗಳನ್ನು ಮಾಡಲಾಗುತ್ತಿದೆ. ಇದು ಕೇವಲ ಸಲ್ಮಾನ್ ಇಮೇಜ್ ಹಾಳು ಮಾಡುವ ಪ್ರಯತ್ನವಾಗಿದೆ. ಸಲ್ಮಾನ್ ತಮ್ಮ ವಕೀಲರ ಮೂಲಕ, ಆಸ್ತಿ ವಿವಾದದಲ್ಲಿ ನನ್ನ ಇಮೇಜ್ ಅನ್ನು ಏಕೆ ಹಾಳು ಮಾಡುತ್ತಿದ್ದೀರಿ? ಈ ವಿವಾದದ ಮಧ್ಯೆ ನನ್ನ ಧರ್ಮವನ್ನು ಏಕೆ ತರುತ್ತಿದ್ದೀರಿ? ನನ್ನ ತಾಯಿ ಹಿಂದೂ, ತಂದೆ ಮುಸ್ಲಿಂ ಮತ್ತು ನನ್ನ ಸಹೋದರರು ಕೂಡ ಹಿಂದೂ ಹುಡುಗಿಯರನ್ನು ಮದುವೆಯಾಗಿದ್ದಾರೆ. ನಾವೆಲ್ಲರೂ ಒಟ್ಟಾಗಿ ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಆಚರಿಸುತ್ತೇವೆ ಎಂದಿದ್ದಾರೆ.

'ನೀವು ವಿದ್ಯಾವಂತರು, ಇಂತಹ ಆರೋಪಗಳನ್ನು ಮಾಡಲು ನೀವು ಗೂಂಡಾ ಛಾಪ್ ಅಲ್ಲ. ಇತ್ತೀಚಿನ ದಿನಗಳಲ್ಲಿ  ಕೆಲವು ಜನರನ್ನು ಒಂದುಗೂಡಿಸಿ, ಸಾಮಾಜಿಕ ಮಾಧ್ಯಮದಲ್ಲಿ ಬಂದು ತಮ್ಮೆಲ್ಲಾ ಕೋಪವನ್ನು ಹೊರಹಾಕುವುದು ಅತ್ಯಂತ ಸುಲಭವಾದ ವಿಷಯವಾಗಿದೆ. ಇದಲ್ಲದೆ ರಾಜಕೀಯಕ್ಕೆ ಬರುವ ತಮ್ಮ ಯಾವ ಉದ್ದೇಶವೂ ಇಲ್ಲ' ಎಂದು ಸಲ್ಮಾನ್ ಹೇಳಿದ್ದಾರೆ.

ಇದನ್ನೂ ಓದಿ-Puneeth Rajkumar : 'ಜೇಮ್ಸ್ ಸಿನಿಮಾ'ದ ಶೂಟಿಂಗ್ ಕಂಪ್ಲೀಟ್ ಮಾಡಿದ ಚಿತ್ರ ತಂಡ

ವಿಷಯ ಏನು?
ಮಾನಹಾನಿ ಪ್ರಕರಣದಲ್ಲಿ, ಸಲ್ಮಾನ್ ಖಾನ್ ಅವರು, ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಪಕ್ಕದ ಮನೆ ವ್ಯಕ್ತಿ ಕೇತನ್ ಕಕ್ಕರ್ ತಮ್ಮ  ಮಾನಹಾನಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಲ್ಮಾನ್ ಸಲ್ಲಿಸಿರುವ ಅರ್ಜಿಯ ಪ್ರಕಾರ, ಯೂಟ್ಯೂಬರ್‌ಗೆ ನೀಡಿದ ಸಂದರ್ಶನದಲ್ಲಿ ಕೇತನ್ ಕಕ್ಕರ್ ನಟನ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ್ದಾರೆ. 

ಇದನ್ನೂ ಓದಿ-Amazon Prime Offer: ಪವರ್ ಸ್ಟಾರ್ ಪುನೀತ್ ಸ್ಮರಣೆಗಾಗಿ ಉಚಿತ ಸಿನಿಮಾ ನೋಡುವ ಅವಕಾಶ

ಕೇತನ್ ಪನ್ವೇಲ್‌ನಲ್ಲಿರುವ ಸಲ್ಮಾನ್‌ ಖಾನ್ ಅವರ ಫಾರ್ಮ್‌ಹೌಸ್ ಬಳಿಯ ಜಮೀನು ಖರೀದಿಸಲು ಯೋಚಿಸಿದ್ದ. ಆದರೆ, ಅದು ಅಕ್ರಮ ಎಂದು ಹೇಳಿದ್ದ ಅಧಿಕಾರಿಗಳು ನಿರಾಕರಿಸಿದ್ದರು. ಈ ಹಿಂದೆಯೂ ಕೂಡ ಸಲ್ಮಾನ್ ಖಾನ್ ಕೈವಾಡ ಇದೆ ಎಂಬುದು ಕೇತನ್ ಕಕ್ಕರ್ ಆರೋಪವಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ-ನಿಕ್ ದಂಪತಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.