ನವದೆಹಲಿ : ಇನ್ನು ಮುಂದೆ, ವಾಹನ ಚಾಲನೆ ಮಾಡುವ ವೇಳೆ ಚಾಲಕರು ಮೊಬೈಲ್ನಲ್ಲಿ (Mobile) ಮಾತನಾಡುತ್ತಿದ್ದರೆ, ಟ್ರಾಫಿಕ್ ಪೊಲೀಸರು (Traffic police) ತಡೆದು ದಂಡ ಹಾಕುವಂತಿಲ್ಲ. ಒಂದು ವೇಳೆ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದಲ್ಲಿ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ. ಆದರೆ ಇಲ್ಲಿಯೂ ಸಹ ಗಮನಿಸಬೇಕಾದ ಅಂಶವೊಂದಿದೆ. ಅದೆಂದರೆ, ಮೊಬೈಲ್ ಅನ್ನು ಜೇಬಿನಲ್ಲಿಟ್ಟು ಅನದರೆ ಹ್ಯಾಂಡ್ಸ್ಫ್ರೀ ಸಾಧನವನ್ನು (Handsfree device) ಬಳಸಬಹುದು. ಚಾಲನೆ ವೇಳೆ ನೇರವಾಗಿ ಕಿವಿಯಲ್ಲಿ ಇಟ್ಟುಕೊಂಡು ಮೊಬೈಲ್ ನಲ್ಲಿ ಮಾತನಾಡುವಂತಿಲ್ಲ. ನೇರವಾಗಿ ಮೊಬೈಲ್ ಬಳಸಿದರೆ, ದಂಡ ಹಾಕುವ ಹಕ್ಕು ಸಂಚಾರಿ ಪೊಲೀಸರಿಗೆ ಇರುತ್ತದೆ.
ದಂಡ ಹಾಕಿದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು :
ಈ ಮಾಹಿತಿಯನ್ನು ಸ್ವತಃ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಲೋಕಸಭೆಯಲ್ಲಿ ತಿಳಿಸಿದ್ದಾರೆ. ಚಾಲಕರು ಹ್ಯಾಂಡ್ಸ್ ಫ್ರೀ ಸಾಧನವನ್ನು ಬಳಸಿ, ಫೋನ್ನಲ್ಲಿ ಮಾತನಾಡುತ್ತಿದ್ದರೆ, ಸಂಚಾರ ನಿಯಮಗಳ ಪ್ರಕಾರ (Traffic rules) ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ, ಟ್ರಾಫಿಕ್ ಪೊಲೀಸರು (Traffic police) ಯಾವುದೇ ರೀತಿಯ ದಂಡವನ್ನು ವಿಧಿಸಲು ಸಾಧ್ಯವಿಲ್ಲ, ಒಂದೊಮ್ಮೆ ದಂಡ ವಿಧಿಸಿದರೆ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.
ಇದನ್ನೂ ಓದಿ : ಭಾರತದ ವಿರುದ್ಧ ಸಂಚು ರೂಪಿಸುತ್ತಿರುವ ಪಾಕಿಸ್ತಾನ, ಗುಪ್ತಚರ ಸಂಸ್ಥೆಗಳಿಂದ ಎಚ್ಚರಿಕೆ
ದಂಡ ಪಾವತಿಸುವಂತಿಲ್ಲ :
ಮೋಟಾರು ವಾಹನ ಕಾಯ್ದೆ 2019 ರ ಸೆಕ್ಷನ್ 84 ರ ಅಡಿಯಲ್ಲಿ ಚಾಲನೆ ಮಾಡುವಾಗ ಹ್ಯಾಂಡ್ಸ್ ಫ್ರೀ ಸಾಧನದೊಂದಿಗೆ ಮೊಬೈಲ್ನಲ್ಲಿ (Mobile) ಮಾತನಾಡುವುದು ಶಿಕ್ಷಾರ್ಹ ಅಪರಾಧವೇ ಎಂದು ಕೇರಳ ಕಾಂಗ್ರೆಸ್ ಸಂಸದ ಹಿಬಿ ಈಡನ್ (Hebi Eden) ಲೋಕಸಭೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮುಖ್ಯಸ್ಥ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ನಿತಿನ್ ಗಡ್ಕರಿ (Nitin Gadkari) , ಚಾಲನೆ ಮಾಡುವಾಗ ಹ್ಯಾಂಡ್ಸ್-ಫ್ರೀ ಸಂವಹನ ಸಾಧನವನ್ನು ಬಳಸಿ ಮಾತನಾಡುವುದು ಈ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಲ್ಲ ಎಂದು ಹೇಳಿದ್ದಾರೆ. ಆದರೆ, ಕೈಯಲ್ಲಿ ಹಿಡಿದು ಮೊಬೈಲ್ ನಲ್ಲಿ ಮಾತನಾಡಿದರೆ ಆಗ ದಂಡ ವಿಧಿಸಲಾಗುತ್ತದೆ ಎಂದು ಗಡ್ಕರಿ ಸ್ಪಷ್ಟ ಪಡಿಸಿದ್ದಾರೆ.
ಇದನ್ನೂ ಓದಿ : ಪರಿಕ್ಕರ್ ಪುತ್ರನಿಗೆ ಬಿಜೆಪಿ ಟಿಕೆಟ್ ನಿರಾಕರಣೆ, ಕೇಜ್ರಿವಾಲ್ ರಿಂದ ಆಪ್ ಗೆ ವೆಲ್ ಕಮ್ ಆಫರ್..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.