South Africa vs India, 1st ODI : ವ್ಯಾನ್ ಡೆರ್ ಡುಸೇನ್, ಬವುಮಾ, ಭರ್ಜರಿ ಶತಕ ಹರಿಣಗಳಿಗೆ ಜಯ

ಬೋಲ್ಯಾಂಡ್ ಪಾರ್ಕ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡವು ಹೀನಾಯ ಸೋಲನ್ನು ಅನುಭವಿಸಿದೆ.

Last Updated : Jan 20, 2022, 12:07 AM IST
  • ಬೋಲ್ಯಾಂಡ್ ಪಾರ್ಕ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡವು ಹೀನಾಯ ಸೋಲನ್ನು ಅನುಭವಿಸಿದೆ.
South Africa vs India, 1st ODI : ವ್ಯಾನ್ ಡೆರ್ ಡುಸೇನ್, ಬವುಮಾ, ಭರ್ಜರಿ ಶತಕ ಹರಿಣಗಳಿಗೆ ಜಯ   title=
Photo Courtsey: ICC

ನವದೆಹಲಿ: ಬೋಲ್ಯಾಂಡ್ ಪಾರ್ಕ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡವು ಹೀನಾಯ ಸೋಲನ್ನು ಅನುಭವಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡವು ವ್ಯಾನ್ ಡೆರ್ ಡುಸೇನ್ (129) , ಬವುಮಾ, (110) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ನಾಲ್ಕು ವಿಕೆಟ್ ನಷ್ಟಕ್ಕೆ 50 ಓವರ್ ಗಳಲ್ಲಿ 296 ರನ್ ಗಳಿಸಿತು.ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು  ಒಂದು ಹಂತದಲ್ಲಿ ಉತ್ತಮ ಆರಂಭವನ್ನು ಕಂಡರೂ ಸಹಿತ ಗೆಲುವಿನ ದಡವನ್ನು ಸೇರುವಲ್ಲಿ ವಿಫಲವಾಯಿತು.

One wicket in each of the last three overs 👀

Shreyas Iyer, Rishabh Pant and Venkatesh Iyer gone in quick succession 😯

India are 188/6 after 36 overs.

Watch the series live on https://t.co/CPDKNxoJ9v (in select regions)#SAvIND | https://t.co/P4UbRkIzIW pic.twitter.com/jap2wTi6vo

— ICC (@ICC) January 19, 2022

ಇದನ್ನೂ ಓದಿ: ಸಾನಿಯಾ ಮಿರ್ಜಾ ಅಭಿಮಾನಿಗಳಿಗೆ ಶಾಕ್! ನಿವೃತ್ತಿಯ ನಿರ್ಧಾರ ಪ್ರಕಟಿಸಿದ ಟೆನಿಸ್ ತಾರೆ

ತಂಡದ ಮೊತ್ತ 46 ರನ್ ಗಳಾಗಿದ್ದಾಗ ಕೆ.ಎಲ್.ರಾಹುಲ್ 12 ರನ್ ಗಳಿಸಿ ಹೊರ ನಡೆದರು.ಇದಾದ ನಂತರ ಜೊತೆಗೂಡಿದ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 79, 51, ರನ್ ಗಳಿಸುವ ಮೂಲಕ ತಂಡವನ್ನು ಸುಸ್ಥಿತಿಗೆ ತಂದಿದ್ದರು. ಆದರೆ ಅವರ ವಿಕೆಟ್ ಪತನದೊಂದಿಗೆ ಭಾರತ ತಂಡವು ಧಿಡಿರ್ ಕುಸಿತವನ್ನು ಕಂಡಿತು.ಕೊನೆಯಲ್ಲಿ ಶಾರ್ಧುಲ್ ಟಾಕೂರ್ ಅವರು ಏಕಾಂಗಿ ಹೋರಾಟ ನಡೆಸಿ ಅರ್ಧ ಶತಕಗಳಿಸಿದರು ಸಹಿತ ಭಾರತ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 265 ರನ್ ಗಳನ್ನು ಗಳಿಸಲು ಸಾಧ್ಯವಾಯಿತು.

ಇದನ್ನೂ ಓದಿ: Viral Video: ‘ಪುಷ್ಪ’ ಸಿನಿಮಾದ ಮತ್ತೊಂದು ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ ತಾಂಜಾನಿಯಾದ ಯುವಕ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News