WATCH:ಹಿಂದಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ ನಟಿ ರಾಧಿಕಾ ಕುಮಾರಸ್ವಾಮಿ, ಅಭಿಮಾನಿಗಳ ದಿಲ್ ಖುಷ್

Radhika Kumarswamy: ಸೋಮವಾರ ರಾಧಿಕಾ ಅವರ ಡ್ಯಾನ್ಸ್‌ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ.   

Edited by - Chetana Devarmani | Last Updated : Jan 18, 2022, 05:02 PM IST
  • ಕನ್ನಡ ಚಿತ್ರರಂಗದ ನಟಿ ರಾಧಿಕಾ ಕುಮಾರಸ್ವಾಮಿ
  • ಹಿಂದಿ ಹಾಡಿಗೆ ಸಖತ್ ಸ್ಟೆಪ್ ನಟಿ ರಾಧಿಕಾ
  • ನೆಟ್ಟಿಗರ ಗಮನ ಸೆಳೆದ ಡ್ಯಾನ್ಸ್‌ ವಿಡಿಯೋ
WATCH:ಹಿಂದಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ ನಟಿ ರಾಧಿಕಾ ಕುಮಾರಸ್ವಾಮಿ, ಅಭಿಮಾನಿಗಳ ದಿಲ್ ಖುಷ್  title=
ನಟಿ ರಾಧಿಕಾ ಕುಮಾರಸ್ವಾಮಿ

ಕನ್ನಡ ಚಿತ್ರರಂಗದ ನಟಿ ರಾಧಿಕಾ ಕುಮಾರಸ್ವಾಮಿ (Radhika Kumarswamy) ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. 

ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಫೋಟೊ, ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ರಂಜಿಸುತ್ತಿದ್ದಾರೆ. 

ಸೋಮವಾರ ರಾಧಿಕಾ ಅವರ ಡ್ಯಾನ್ಸ್‌ (Radhika Dance) ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ.  ಈ ವಿಡಿಯೋದಲ್ಲಿ ಸಖತ್ ಸ್ಟೈಲಿಶ್‌ ಆಗಿ ಕಾಣುವ ರಾಧಿಕಾ ಕುಮಾರಸ್ವಾಮಿ, ಫುಲ್ ಎನರ್ಜಿಯಿಂದ ಹಿಂದಿ ಹಾಡಿಗೆ ಡಾನ್ಸ್ ಮಾಡಿದ್ದಾರೆ. 

 

 

ಹಿಂದಿ ಹಾಡು 'ಮೇರಾ ಯಾರಾ'ದ ಕವರ್​ ಸಾಂಗ್​ಗೆ ಹೆಜ್ಜೆ ಹಾಕಿದ್ದಾರೆ. ಅವರ ಈ instagram ರೀಲ್ ಸದ್ಯ ವೈರಲ್ ಆಗಿದ್ದು, ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. 

ಇತ್ತೀಚೆಗಷ್ಟೇ ರಾಧಿಕಾ ಸಮುದ್ರ ತಟದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದರು. ನಟಿ ರಾಧಿಕಾ ಕುಮಾರಸ್ವಾಮಿ ಸದ್ಯ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

ಕಾಂಟ್ರಾಕ್ಟ್, ಭೈರಾದೇವಿ ಹಾಗೂ ರಾಜೇಂದ್ರ ಪೊನ್ನಪ್ಪ ಚಿತ್ರಗಳ ಕೆಲಸಗಳು ನಡೆಯುತ್ತಿದೇ. ಮೂರೂ ಸಿನಿಮಾಗಳು ಈ ವರ್ಷ ತೆರೆಕಾಣುವ ನಿರೀಕ್ಷೆ ಇದೆ.

ಇದನ್ನೂ ಓದಿ: ರಾಜ್ ಬಿ ಶೆಟ್ಟಿಗೆ ‘RGV’ ಶಹಬ್ಬಾಸ್ ಗಿರಿ: ‘ಗರುಡ ಗಮನ ವೃಷಭ ವಾಹನ’ ನೋಡಿ ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News