ಬೆಂಗಳೂರು: ಹಾಲಿನ ದರ ಪ್ರತಿ ಲೀಟರ್ ಗೆ 2 ರಿಂದ 3 ರೂ. ಏರಿಕೆ ಮಾಡಲು KMF ಚಿಂತನೆ ನಡೆಸುತ್ತಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದರು.
ವಾಸ್ತವವಾಗಿ, ಕರ್ನಾಟಕ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ದರ ಏರಿಕೆ ಬಗ್ಗೆ ಪ್ರಸ್ತಾಪ ಮುಂದಿಡಲಾಗಿದೆ. ಹಾಲಿನ ದರವನ್ನು (Milk Price) 2 ರಿಂದ 3 ರೂ.ವರೆಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ- ಹೋಂ ಐಸೋಲೇಷನ್ ಅವಧಿಯಲ್ಲಿ ಕಡಿತ; covid ಸೋಂಕಿತರು ಹೆಚ್ಚಿನ ಪ್ರಮಾಣದ ಔಷಧಿಯನ್ನು ಬಳಸದಂತೆ ಸೂಚನೆ
ಒಕ್ಕೂಟಗಳ ಸಭೆ ಬಳಿಕ ಸಿಎಂ ಜೊತೆ ಚರ್ಚಿಸೋದಾಗಿ ಹೇಳಿದ್ದ KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (KMF President Balachandra Jarakihioli), ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ, ನಂದಿನಿ ಹಾಲಿನ ದರ ರಾಜ್ಯದಲ್ಲಿ ಅತಿ ಕಡಿಮೆ ಇದೆ. ಪ್ರತಿ ಲೀಟರ್ ಗೆ 3 ರೂ. ದರ ಏರಿಕೆ ಮಾಡುವಂತೆ KMF ಅಧ್ಯಕ್ಷರಿಗೆ 14 ಹಾಲು ಒಕ್ಕೂಟಗಳಿಂದ KMF ಗೆ ಮನವಿ ಮಾಡಿದ್ದಾರೆ.
ಈ ಹಿನ್ನಲೆ, ಹಾಲಿನ ದರ ಏರಿಕೆ ಮಾಡುವ ಕುರಿತು ಸಿಎಂ ಜೊತೆ ಚರ್ಚಿಸಿ, ದರ ಪರಿಷ್ಕರಣೆ ಆಗಲಿದೆಸಿಎಂ ರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ರೆ, ಹಾಲಿನ ದರ ಏರಿಕೆ (Milk Price Hike) ಮಾಡಲಾಗುವುದು.
ಇದನ್ನೂ ಓದಿ- ಪೆಡ್ಲರ್ ಗಳ ಮೂಲಕ ಗಾಂಜಾ ತರಿಸಿ ಮಾರಾಟಕ್ಕೆ ಯತ್ನ: ಸಿಎಂ ಮನೆ ಭದ್ರತೆಯಲ್ಲಿದ್ದ ಇಬ್ಬರು ಪೊಲೀಸರ ಬಂಧನ
ಹಾಲಿನ ದರ ಏರಿಕೆಗೆ KMF ನೋಡ್ತಿರೋ ಕಾರಣಗಳೇನು..?
- ನಿರ್ವಹಣೆ, ಉತ್ಪಾದನಾ ವೆಚ್ಚ, ನೌಕರರ ಸಂಬಳ
- ಸಾಗಾಣೆ ವೆಚ್ಚ ಹೆಚ್ಚಿದೆ ಅಂತ ಅನ್ನೊ ಕಾರಣ
ಕಳೆದ 3 ವರ್ಷಗಳಿಂದ ಹಾಲಿನ ದರ ನಿರಂತರ ಏರಿಕೆ:
2019ರ ಫೆಬ್ರವರಿಯಲ್ಲಿ ಹಾಲಿನ ದರವನ್ನು 1.50 ರೂ. ಹೆಚ್ಚಿಸಲಾಗಿತ್ತು. ಇದರ ನಂತರ, ಆಗಸ್ಟ್ ನಲ್ಲಿ 1.50ರೂ. ಏರಿಕೆ ಮಾಡಲಾಗಿತ್ತು. ಅದೇ ವರ್ಷ ನವೆಂಬರ್ ನಲ್ಲಿ ಹಾಲಿನ ದರವನ್ನು 1 ರೂ. ಹೆಚ್ಚಿಸಲಾಗಿದೆ.
2020ರಲ್ಲೂ ಸಹ ಹಾಲಿನ ಬೆಲೆಯನ್ನು 1.50ರೂ. ಹೆಚ್ಚಿಸಲಾಗಿದೆ. ಹೀಗೆ ಒಟ್ಟಾರೆಯಾಗಿ ಹಾಲಿನ ದರದಲ್ಲಿ 7.50 ರೂ. ಹೆಚ್ಚಳವಾಗಿದೆ.
2021 ಫೆ. ತಿಂಗಳಿನಲ್ಲಿ ಹಾಲಿನ ದರವನ್ನು ಪ್ರತೀ ಲೀ. 2 ರೂ. ಏರಿಕೆಮಾಡಲಾಗಿದೆ. ಈಗ ಮತ್ತೆ 2 ರಿಂದ 3 ರೂ. ದರ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.