ನವದೆಹಲಿ: ಕೂದಲಿನ ಆರೋಗ್ಯ (Healthy Hair) ಮತ್ತು ಸೌಂದರ್ಯಕ್ಕಾಗಿ ಅನೇಕ ಜನರು ಬಿಸಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ನೀವು ಬಿಸಿ ಎಣ್ಣೆಯಿಂದ (Hot oil) ಕೂದಲಿಗೆ ಮಸಾಜ್ ಮಾಡಿದರೆ, ಎಚ್ಚರಿಕೆಯಿಂದಿರಿ ಏಕೆಂದರೆ ಈ ಉಪಾಯವು ಕೂದಲಿಗೆ ಪ್ರಯೋಜನಕಾರಿಯಾಗುವ ಬದಲಿಗೆ ಹಾನಿಯನ್ನುಂಟುಮಾಡುತ್ತದೆ.
ನಿಮ್ಮ ಕೂದಲು ಮೃದು ಮತ್ತು ಬಲಶಾಲಿಯಾಗುವ ಬದಲು ಕ್ರಮೇಣ ಹಾಳಾಗಲು ಪ್ರಾರಂಭಿಸುತ್ತದೆ. ಆದಾಗ್ಯೂ, ಕೂದಲಿಗೆ ಉಗುರುಬೆಚ್ಚನೆಯ ಎಣ್ಣೆಯನ್ನು ಸಾಂದರ್ಭಿಕವಾಗಿ ಬಳಸುವುದು ಪ್ರಯೋಜನಕಾರಿಯಾಗಿದೆ. ಆದರೆ ಬಿಸಿ ಎಣ್ಣೆಯು ಪ್ರಯೋಜನವನ್ನು ನೀಡುವ ಬದಲು ಹಾನಿ ಮಾಡುತ್ತದೆ. ಹಾಗಾದರೆ ಬಿಸಿ ಎಣ್ಣೆ ಮಸಾಜ್ ಕೂದಲಿನ ಆರೋಗ್ಯ ಮತ್ತು ಸೌಂದರ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.
ಬಿಸಿ ಎಣ್ಣೆಯಿಂದ ಪೋಷಕಾಂಶಗಳು ನಾಶವಾಗುತ್ತವೆ:
ಬಿಸಿ ಎಣ್ಣೆಯನ್ನು ಕೂದಲಿಗೆ ಮಸಾಜ್ (head massage) ಮಾಡುವುದರಿಂದ ನಮ್ಮ ನೆತ್ತಿಯಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಆದರೆ ಬಿಸಿ ಮಾಡಿದಾಗ ಎಣ್ಣೆಯಲ್ಲಿರುವ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ. ಇದರಿಂದಾಗಿ ಎಣ್ಣೆಯನ್ನು ಬಿಸಿ ಮಾಡದೆ ಅಥವಾ ಕೇವಲ ಉಗುರು ಬೆಚ್ಚಗಾಗಿ ಹಚ್ಚಿದಾಗ ಕೂದಲಿಗೆ ಸಿಗುವ ಪೋಷಣೆ ಸಿಗುವುದಿಲ್ಲ. ಆದ್ದರಿಂದ ಬಿಸಿ ಎಣ್ಣೆಯನ್ನು ತಲೆಗೆ ಹಚ್ಚಬಾರದು.
ತುರಿಕೆ ಮತ್ತು ತಲೆಹೊಟ್ಟು ಸಮಸ್ಯೆ ಹೆಚ್ಚಾಗುತ್ತದೆ:
ಇದಲ್ಲದೆ, ತಲೆಯಲ್ಲಿ ತುರಿಕೆ ಮತ್ತು ತಲೆಹೊಟ್ಟು (Dandruff) ಮುಂತಾದ ಸಮಸ್ಯೆಗಳು ಉದ್ಭವಿಸಬಹುದು. ಏಕೆಂದರೆ ನಮ್ಮ ತಲೆಯ ಕೂದಲಿನ ರಂಧ್ರಗಳು ಬಿಸಿ ಎಣ್ಣೆಯಿಂದ ಮುಚ್ಚಿ ಹೋಗುತ್ತದೆ. ನಮ್ಮ ನೆತ್ತಿಯಲ್ಲಿ ಶುಷ್ಕತೆಯ ಸಮಸ್ಯೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಬಿಸಿ ಎಣ್ಣೆಯು ನಮ್ಮ ನೆತ್ತಿಯಿಂದ ನೈಸರ್ಗಿಕ ತೇವಾಂಶವನ್ನು ಕದಿಯುತ್ತದೆ ಎಂದು ನಂಬಲಾಗಿದೆ.
ಕೂದಲು ಉದುರುವಿಕೆ ಪ್ರಾರಂಭವಾಗುತ್ತದೆ:
ಬಿಸಿ ಎಣ್ಣೆಯಿಂದ ಕೂದಲು ಉದುರುವ (hair fall) ದೂರು ಕೂಡ ಮುನ್ನೆಲೆಗೆ ಬರುತ್ತದೆ. ತಲೆಹೊಟ್ಟು ಮತ್ತು ತಲೆಯಲ್ಲಿ ತುರಿಕೆ ಜೊತೆಗೆ, ನೆತ್ತಿಯ ಶುಷ್ಕತೆಯಿಂದಾಗಿ ಕೂದಲು ಉದುರುವಿಕೆಯೂ ಪ್ರಾರಂಭವಾಗುತ್ತದೆ. ಅಂದರೆ ಬಿಸಿ ಎಣ್ಣೆಯನ್ನು ಹಚ್ಚುವುದರಿಂದ ನಮ್ಮ ತಲೆ ಕೂದಲು ಹಾಳಾಗುವ ಹಂತ ತಲುಪುತ್ತದೆ.
ಅಲರ್ಜಿಯ ಸಮಸ್ಯೆ ಹೆಚ್ಚುತ್ತಿದೆ:
ಇದರೊಂದಿಗೆ ಬಿಸಿ ಎಣ್ಣೆಯಿಂದ ಅಲರ್ಜಿ (allergy) ಸಮಸ್ಯೆಯೂ ಕಾಡಬಹುದು. ಕೆಲವರಿಗೆ ಈ ಸಮಸ್ಯೆ ಹೆಚ್ಚು, ಕೆಲವರಿಗೆ ಕಡಿಮೆ. ಏಕೆಂದರೆ ಹೆಚ್ಚಿನವರ ತಲೆಬುರುಡೆ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವಿಶೇಷವಾಗಿ ತಲೆಗೆ ಬಿಸಿ ಎಣ್ಣೆಯನ್ನು ಅನ್ವಯಿಸುವುದನ್ನು ತಡೆಯುವ ಅವಶ್ಯಕತೆಯಿದೆ.
ಇದನ್ನೂ ಓದಿ: Long Hair Tips : ಉದ್ದ ಕೂದಲಿಗೆ ಬಳಸಿ ಅಕ್ಕಿ ಮತ್ತು ಮೆಂತ್ಯ : ಬಳಸುವುದು ಹೇಗೆ ಇಲ್ಲಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.