Offline Digital Payments: ಈಗ ಇಂಟರ್ನೆಟ್ ಇಲ್ಲದೆ ಸಾಧ್ಯ ಹಣ ವರ್ಗಾವಣೆ! ಪಾವತಿ ಮಿತಿಯನ್ನು ನಿಗದಿಪಡಿಸಿದ RBI

Offline Digital Payments: ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ, ಆರ್‌ಬಿಐ ಆಫ್‌ಲೈನ್ ಡಿಜಿಟಲ್ ಪಾವತಿಗಳಿಗೆ ರೂಪುರೇಷೆ ಬಿಡುಗಡೆ ಮಾಡಿದೆ.

Written by - Yashaswini V | Last Updated : Jan 4, 2022, 11:02 AM IST
  • ಆರ್‌ಬಿಐ ಆಫ್‌ಲೈನ್ ಡಿಜಿಟಲ್ ಪಾವತಿಯನ್ನು ಅನುಮೋದಿಸಿದೆ
  • ಈಗ ಇಂಟರ್ನೆಟ್ ಮತ್ತು ಮೊಬೈಲ್ ನೆಟ್‌ವರ್ಕ್ ಇಲ್ಲದೆ ಪಾವತಿ ಸಾಧ್ಯವಾಗುತ್ತದೆ
  • ಡಿಜಿಟಲ್ ಪಾವತಿ ಮಾರ್ಗಸೂಚಿ
Offline Digital Payments: ಈಗ ಇಂಟರ್ನೆಟ್ ಇಲ್ಲದೆ ಸಾಧ್ಯ ಹಣ ವರ್ಗಾವಣೆ! ಪಾವತಿ ಮಿತಿಯನ್ನು ನಿಗದಿಪಡಿಸಿದ RBI title=
Offline Digital Payments

Offline Digital Payments: ಭಾರತದಲ್ಲಿ ಇಂದಿಗೂ ಇಂಟರ್‌ನೆಟ್ ಸೌಲಭ್ಯ ಇಲ್ಲದ ಹಲವು ಗ್ರಾಮಗಳು ಮತ್ತು ಪ್ರದೇಶಗಳಿವೆ. ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ, ಡಿಜಿಟಲ್ ಪಾವತಿಯನ್ನು ಅನುಮೋದಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೋಮವಾರ ಆಫ್‌ಲೈನ್ ಡಿಜಿಟಲ್ ಪಾವತಿಗಳ ರೂಪುರೇಷೆಯನ್ನು ಬಿಡುಗಡೆ ಮಾಡಿದೆ. 

ನಿಯಮಗಳು ಮತ್ತು ಷರತ್ತುಗಳನ್ನು ತಿಳಿಯಿರಿ:
ಪ್ರಸ್ತುತ, ಆಫ್‌ಲೈನ್ ಪಾವತಿ (Offline Digital Payments) ಅಡಿಯಲ್ಲಿ 200 ರೂ.ವರೆಗಿನ ವಹಿವಾಟುಗಳನ್ನು ಅನುಮತಿಸಲಾಗಿದೆ. ಇದರಲ್ಲಿ, ಗರಿಷ್ಠ 10 ವಹಿವಾಟುಗಳು ಅಂದರೆ ಒಟ್ಟು 2,000 ರೂ.ವರೆಗೆ ಆಫ್‌ಲೈನ್‌ನಲ್ಲಿ ಅನುಮತಿಸಲಾಗುತ್ತದೆ. ಆಫ್‌ಲೈನ್ ಡಿಜಿಟಲ್ ಪಾವತಿಗಳು ಅಂದರೆ ಇದರಲ್ಲಿ ಇಂಟರ್ನೆಟ್ ಅಥವಾ ಮೊಬೈಲ್ ನೆಟ್‌ವರ್ಕ್ ಅಗತ್ಯವಿಲ್ಲ. ಈ ಆಫ್‌ಲೈನ್‌ನಲ್ಲಿ ಕಾರ್ಡ್, ವ್ಯಾಲೆಟ್ ಮತ್ತು ಮೊಬೈಲ್ ಸೇರಿದಂತೆ ಯಾವುದೇ ವಿಧಾನದಿಂದ ನೇರವಾಗಿ ಪಾವತಿ ಮಾಡಬಹುದು.

ಇದನ್ನೂ ಓದಿ- SBI Alert: ಎಸ್‌ಬಿಐನ ಎಲ್ಲಾ ಶಾಖೆಗಳಲ್ಲಿ ವಿಶೇಷ ಸೌಲಭ್ಯ ಆರಂಭ; ಲಕ್ಷಾಂತರ ಗ್ರಾಹಕರಿಗೆ ಪ್ರಯೋಜನ

AFA ಅಗತ್ಯವಿಲ್ಲ:
ಅಂತಹ ವಹಿವಾಟುಗಳಿಗೆ 'ಅಡಿಷನ್ ಫ್ಯಾಕ್ಟರ್ ಆಫ್ ಅಥೆಂಟಿಕೇಶನ್ (AFA )' ಅಗತ್ಯವಿರುವುದಿಲ್ಲ ಎಂದು ಆರ್‌ಬಿಐ (RBI) ಹೇಳಿದೆ. ಇವುಗಳಲ್ಲಿ ಪಾವತಿ ಆಫ್‌ಲೈನ್ ಆಗಿರುವುದರಿಂದ ಗ್ರಾಹಕರಿಗೆ ಅಲ್ಪಾವಧಿಯ ನಂತರ ಎಸ್‌ಎಂಎಸ್ ಅಥವಾ ಇ-ಮೇಲ್ ಮೂಲಕ 'ಎಚ್ಚರಿಕೆ' ಸಿಗುತ್ತದೆ. 

ಡಿಜಿಟಲ್ ಪಾವತಿ ಚೌಕಟ್ಟು :
ಆರ್‌ಬಿಐ (RBI) ನೀಡಿರುವ ಚೌಕಟ್ಟಿನ ಪ್ರಕಾರ, 'ಇದರಲ್ಲಿ ಪ್ರತಿ ವಹಿವಾಟಿನ ಮಿತಿ 200 ರೂ. ಇದರ ಒಟ್ಟು ಮಿತಿಯು 2,000 ರೂ ಆಗಿರುತ್ತದೆ, ದೇಶದ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್ 2020 ರಿಂದ ಜೂನ್ 2021 ರ ಅವಧಿಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಆಫ್‌ಲೈನ್ ಪಾವತಿಯನ್ನು ಪ್ರಾರಂಭಿಸಲಾಗಿದೆ. ಸ್ವೀಕರಿಸಿದ ಪ್ರತಿಕ್ರಿಯೆಯನ್ನು ಆಧರಿಸಿ, ಈ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ- SBI New Year Offer: ಎಸ್‌ಬಿಐ ಗ್ರಾಹಕರಿಗೆ ವಿಶೇಷ ಕೊಡುಗೆ, ಕಡಿಮೆ ಬಡ್ಡಿ ದರದಲ್ಲಿ ಪಡೆಯಿರಿ ಪರ್ಸನಲ್ ಲೋನ್

ಆಫ್‌ಲೈನ್ ಪಾವತಿಗಳು ದುರ್ಬಲ ಇಂಟರ್ನೆಟ್ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುತ್ತದೆ. ವಿಶೇಷವಾಗಿ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ. ಈ ವ್ಯವಸ್ಥೆ ತಕ್ಷಣದಿಂದಲೇ ಜಾರಿಗೆ ಬಂದಿದೆ. ಆದರೆ, ಗ್ರಾಹಕರ ಅನುಮತಿಯ ನಂತರವೇ ಆಫ್‌ಲೈನ್ ಪಾವತಿಯನ್ನು ಬಳಸಬಹುದು ಎಂದು ಕೇಂದ್ರ ಬ್ಯಾಂಕ್ ಸ್ಪಷ್ಟವಾಗಿ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News