ಬೆಂಗಳೂರು: ಮೇಕೆದಾಟು ಕುಡಿಯುವ ನೀರಿನ ಯೋಜನೆ(Mekedatu Project Dispute)ಗಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜ.9ರಿಂದ 10 ದಿನಗಳ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆ ಪ್ರತಿದಿನ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ವಾಕಿಂಗ್ ಅಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆಶಿ ಪ್ರತಿದಿನ 6-7 ಕಿಲೋ ಮೀಟರ್ ವಾಕಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ ವಾಕಿಂಗ್ ಮೂಲಕ ಪಾದಯಾತ್ರೆಯ ಸಿದ್ದತೆ ನಡೆಸುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ(Mekedatu Yatra)ಯಲ್ಲಿ ಪ್ರತಿನಿತ್ಯ 15 ಕಿಲೋ ಮೀಟರ್ ಕ್ರಮಿಸುವ ಉದ್ದೇಶ ಇದೆ ಎಂದು ಮಾಹಿತಿ ತಿಳಿದುಬಂದಿದೆ. ಡಿಕೆಶಿ ಅವರ ಈ ನಡೆಯನ್ನು ಟ್ವೀಟ್ ಮೂಲಕ ಬಿಜೆಪಿ ವ್ಯಂಗ್ಯವಾಡಿದೆ.
#ಸುಳ್ಳಿನಜಾತ್ರೆ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ(Karnataka BJP), ‘ಡಿಕೆಶಿ ಅವರೇ ನೀವು ಆಯೋಜಿಸಿರುವ ಮೇಕೆದಾಟು ಪಾದಯಾತ್ರೆ ಒಂದು ಶೋ ಅಪ್ ಕಾರ್ಯಕ್ರಮ. ಪಾದಯಾತ್ರೆಗಾಗಿ ನೀವು ನಡಿಗೆ ತಾಲೀಮು ನಡೆಸುವುದನ್ನು ಕಂಡಾಗ ಅಯ್ಯೋ ಎನ್ನಿಸುತ್ತಿದೆ’ ಅಂತಾ ಕುಟುಕಿದೆ.
ಮಾನ್ಯ ಡಿಕೆಶಿ ಅವರೇ,
ನೀವು ಆಯೋಜಿಸಿರುವ ಮೇಕೆದಾಟು ಪಾದಯಾತ್ರೆ ಒಂದು ಶೋ ಅಪ್ ಕಾರ್ಯಕ್ರಮ.
ಪಾದಯಾತ್ರೆಗಾಗಿ ನೀವು ನಡಿಗೆ ತಾಲೀಮು ನಡೆಸುವುದನ್ನು ಕಂಡಾಗ ಅಯ್ಯೋ ಎನ್ನಿಸುತ್ತಿದೆ.#ಸುಳ್ಳಿನಜಾತ್ರೆ pic.twitter.com/pP4oKvnXuQ
— BJP Karnataka (@BJP4Karnataka) January 1, 2022
‘ಡಿಕೆಶಿ ಅವರೇ ಜನಪರ ಪಾದಯಾತ್ರೆ(Mekedatu Project)ಗೆ ಹೃದಯ ಸ್ಪಂದನೆ ಇರಬೇಕು. ಅಧಿಕಾರ ಹಿಡಿಯುವುದಕ್ಕೆ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಹೇಳಿಕೊಡುವ ಸರ್ಕಸ್ಗಳು ಯಾವತ್ತಿದ್ದರೂ ಅಪಹಾಸ್ಯದ ವಸ್ತುವಾಗಿರುತ್ತದೆ’ ಅಂತಾ ಬಿಜೆಪಿ ಮತ್ತೊಂದು ಟ್ವೀಟ್ ನಲ್ಲಿ ಟೀಕಿಸಿದೆ.
ಇದನ್ನೂ ಓದಿ: Basavaraj Bommai : ಮಾಜಿ ಸಿಎಂ ಬಿಎಸ್ವೈ ಭೇಟಿ ಮಾಡಿದ ಸಿಎಂ ಬೊಮ್ಮಾಯಿ!
ಡಿಕೆಶಿ ಅವರೇ ಜನಪರ ಪಾದಯಾತ್ರೆಗೆ ಹೃದಯ ಸ್ಪಂದನೆ ಇರಬೇಕು.
ಅಧಿಕಾರ ಹಿಡಿಯುವುದಕ್ಕೆ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಹೇಳಿಕೊಡುವ ಸರ್ಕಸ್ಗಳು ಯಾವತ್ತಿದ್ದರೂ ಅಪಹಾಸ್ಯದ ವಸ್ತುವಾಗಿರುತ್ತದೆ.#ಸುಳ್ಳಿನಜಾತ್ರೆ
— BJP Karnataka (@BJP4Karnataka) January 1, 2022
ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ನಾಟಕ
ಮೇಕೆದಾಟು ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ನಾಟಕವಾಡುತ್ತಿದೆ. ಕಾಂಗ್ರೆಸ್ ನಾಯಕರು ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯು ಈ ನಾಟಕದ ಒಂದು ಭಾಗವಷ್ಟೆ ಅಂತಾ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ(CN Ashwath Narayan) ಟೀಕಿಸಿದ್ದಾರೆ.
ಮೇಕೆದಾಟು ವಿಚಾರದಲ್ಲಿ ಸರ್ಕಾರದ ನಿಲುವನ್ನು ಸದನದಲ್ಲೇ ಸ್ಪಷ್ಟವಾಗಿ ತಿಳಿಸಲಾಗಿದೆ. ಅಧಿಕಾರದಲ್ಲಿದ್ದಾಗ ಏನನ್ನೂ ಮಾಡದ ಕಾಂಗ್ರೆಸ್, ಈಗ ಗದ್ದಲ ಮಾಡುತ್ತಿರುವುದು ಹಾಸ್ಯಾಸ್ಪದ. ಕಾಂಗ್ರೆಸ್ ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದು, ಜನರನ್ನು ದಿಕ್ಕು ತಪ್ಪಿಸುತ್ತಿದೆ. ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ಅನುಕೂಲವಾಗಲಿದ್ದು, ಸರ್ಕಾರವು ಇದನ್ನು ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 40 ಕೋಟಿ ಮೌಲ್ಯದ ಆಸ್ತಿಗಾಗಿ ಪತ್ನಿಯ ಮರ್ಡರ್..! ಕೊಲೆಗೆ ಸಾಥ್ ನೀಡಿದ್ದಳಾ ಪುತ್ರಿ ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.