Inviting Ideas And Suggestions For Union Budget 2022 - 2023: ಕೇಂದ್ರ ಸರ್ಕಾರವು (Government Of India) 2022-23ನೇ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಲಿದೆ. ಈ ಬಾರಿಯ ಬಜೆಟ್ ಮಂಡನೆಗೆ ಇನ್ನು ಕೇವಲ ಒಂದು ತಿಂಗಳು ಮತ್ತು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹ ಪರಿಸ್ಥಿತಿಯಲ್ಲಿ ಬಜೆಟ್ನಲ್ಲಿ ಏನಿರಬೇಕು ಎಂಬ ಬಗ್ಗೆ ಸರ್ಕಾರ ಸಾರ್ವಜನಿಕ ಅಭಿಪ್ರಾಯ ಕೇಳಿದೆ. ಒಂದು ವೇಳೆ ಸರ್ಕಾರಕ್ಕೆ ನೀವು ನೀಡಿದ ಸಲಹೆ ಅಥವಾ ಐಡಿಯಾ ಇಷ್ಟವಾದರೆ, ಕೇಂದ್ರ ಬಜೆಟ್ ನಲ್ಲಿ ಸರ್ಕಾರ ನಿಮ್ಮ ಸಲಹೆಗೆ ಸ್ಥಾನ ನೀಡಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್ಗೂ (Union Budget 2022-23) ಮುನ್ನ ಹಲವು ಸಭೆಗಳು ಮತ್ತು ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದಾಯ ತೆರಿಗೆ ಸ್ಲ್ಯಾಬ್ಗಳನ್ನು ತರ್ಕಬದ್ಧಗೊಳಿಸಲು, ಡಿಜಿಟಲ್ ಸೇವೆಗಳಿಗೆ ಮೂಲಸೌಕರ್ಯ ಸ್ಥಾನಮಾನವನ್ನು ನೀಡಲು ಮತ್ತು ಮುಂದಿನ ಬಜೆಟ್ನಲ್ಲಿ ಹೈಡ್ರೋಜನ್ ಸಂಗ್ರಹವನ್ನು ಉತ್ತೇಜಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಇತ್ತೀಚೆಗೆ ಉದ್ಯಮವು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕೋರಿತ್ತು. ಇದೀಗ ಸರ್ಕಾರವು ಸಾಮಾನ್ಯ ನಾಗರಿಕರಿಂದ ಬಜೆಟ್ಗೆ ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಕೇಳಿದೆ.
MyGov.in ಪ್ಲಾಟ್ಫಾರ್ಮ್ ಮೂಲಕ ನೀವು ಜನವರಿ 7 ರವರೆಗೆ ಸಲಹೆಗಳನ್ನು ನೀಡಬಹುದು
MyGov.in ಪ್ಲಾಟ್ಫಾರ್ಮ್ನಲ್ಲಿ ಬಜೆಟ್ಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಸರ್ಕಾರ ಜನರನ್ನು ಕೋರಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಕಲ್ಪನೆಯನ್ನು ಆನ್ಲೈನ್ನಲ್ಲಿ ಸರ್ಕಾರದೊಂದಿಗೆ ಹಂಚಿಕೊಳ್ಳಬಹುದು. ಬಜೆಟ್ ಮೇಲಿನ ಸಾರ್ವಜನಿಕ ಅಭಿಪ್ರಾಯವು ಸರ್ಕಾರಕ್ಕೆ ಪ್ರಯೋಜನಕಾರಿಯಾಗಿದೆ. ಜನವರಿ 7 ರೊಳಗೆ ಈ ವಿಷಯದ ಬಗ್ಗೆ ಸರ್ಕಾರದ ಮುಂದೆ ತಮ್ಮ ಅಭಿಪ್ರಾಯವನ್ನು ಮಂಡಿಸಲು ಹೆಚ್ಚು ಹೆಚ್ಚು ಜನರು ಈ ಅದ್ಭುತ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದೇ ವೇಳೆ ಈ ಸೌಲಭ್ಯದ ಮೂಲಕ ಸಾಮಾನ್ಯ ಜನರ ವಿಷಯಗಳನ್ನು ಬಜೆಟ್ನಲ್ಲಿ ಸೇರಿಸಲು ಸರ್ಕಾರ ಪ್ರಯತ್ನಿಸಲಿದೆ.
ಇದನ್ನೂ ಓದಿ-Paytm user: ಪೇಟಿಎಂ ಬಳಕೆದಾರರೇ ಎಚ್ಚರ ಈ ಒಂದು ಸಂದೇಶ ನಿಮ್ಮ ಹಣವನ್ನು ಕದಿಯಬಹುದು.!
ನಿಮ್ಮ ಸಲಹೆಗಳನ್ನು ನೀವು ಈ ರೀತಿ ಕಳುಹಿಸಬಹುದು
>> ಬಜೆಟ್ 2021 ಕ್ಕೆ ಸಲಹೆಗಳನ್ನು ನೀಡಲು ನೀವು https://www.mygov.in/mygov-survey/inviting-suggestions-budget-2022-23/ ಗೆ ಭೇಟಿ ನೀಡಬೇಕು.
>> ನಿಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯೊಂದಿಗೆ ನೀವು ಮೊದಲು ಲಾಗಿನ್ ಆಗಬೇಕು.
>> ಈ ಪ್ರಕ್ರಿಯೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
>> ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಾದ Facebook, Twitter, LinkedIn ಮೂಲಕವೂ ನೀವು ಲಾಗ್ ಇನ್ ಮಾಡಬಹುದು.
>> ಲಾಗಿನ್ ಆದ ನಂತರ, ನೀವು ಅಲ್ಲಿ ಬಜೆಟ್ಗೆ ಸಂಬಂಧಿಸಿದ ಯಾವುದೇ ಕಲ್ಪನೆಯನ್ನು ಹಂಚಿಕೊಳ್ಳಲು ಸಾಧ್ಯವಾಗಲಿದೆ.
ಇದನ್ನೂ ಓದಿ-ಪತ್ನಿಯ ಹೆಸರಿನಲ್ಲಿ ಈ ವಿಶೇಷ ಖಾತೆ ತೆರೆಯಿರಿ: ಪ್ರತಿ ತಿಂಗಳು ಪಡೆಯಿರಿ ಸುಮಾರು 45,000 ರೂ. ಪಿಂಚಣಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.