Omicron in India: ದೇಶದ 16 ರಾಜ್ಯಗಳಿಗೆ ಲಗ್ಗೆ ಇಟ್ಟ ಓಮಿಕ್ರಾನ್, ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣ ದಾಖಲು

Omicron in India: ವಿಶ್ವದ ಹಲವು ದೇಶಗಳಲ್ಲಿ ಓಮಿಕ್ರಾನ್ ಸಮಸ್ಯೆಯಾಗಿ ಮಾರ್ಪಟ್ಟಿದೆ, ಈಗ ಅದು ಭಾರತದ 16 ರಾಜ್ಯಗಳಿಗೆ ತಲುಪಿದೆ.

Written by - Yashaswini V | Last Updated : Dec 23, 2021, 12:35 PM IST
  • ದೇಶದಲ್ಲಿ ಹೆಚ್ಚಾಗುತ್ತಿರುವ ಓಮಿಕ್ರಾನ್ ಬೆದರಿಕೆ
  • ಕೋವಿಡ್-19 ಮಾರ್ಗಸೂಚಿಗಳ ಬದಲಾವಣೆಗೆ ಮುಂದಾದ ಹಲವು ರಾಜ್ಯ ಸರ್ಕಾರಗಳು
  • ಹಲವೆಡೆ ನೈಟ್ ಕರ್ಫೂ ಜಾರಿಗೆ ತರಲಾಗಿದೆ
Omicron in India: ದೇಶದ 16 ರಾಜ್ಯಗಳಿಗೆ ಲಗ್ಗೆ ಇಟ್ಟ ಓಮಿಕ್ರಾನ್, ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣ ದಾಖಲು title=
Omicron in India

Omicron in India: ಪ್ರಪಂಚದ ಹಲವು ದೇಶಗಳಲ್ಲಿ ಆತಂಕ ಸೃಷ್ಟಿಸಿರುವ ಕರೋನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಈಗ ಭಾರತದ 16 ರಾಜ್ಯಗಳಲ್ಲಿ ಲಗ್ಗೆ ಇಟ್ಟಿದೆ. ಕರೋನಾ ವೈರಸ್‌ನ ಓಮಿಕ್ರಾನ್ ರೂಪಾಂತರದ (Omicron in India) ರೋಗಿಗಳು 16 ರಾಜ್ಯಗಳಲ್ಲಿ ಕಂಡುಬಂದಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಮಿಕ್ರಾನ್ ರೋಗಿಗಳ ಸಂಖ್ಯೆ 236 ಕ್ಕೆ ಏರಿಕೆಯಾಗಿದೆ. ಆತಂಕಕಾರಿ ವಿಷಯವೆಂದರೆ ಪ್ರತಿ ದಿನ ಹೊಸ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಮಹಾರಾಷ್ಟ್ರ ಮತ್ತು ದೆಹಲಿ  (Omicron in Maharashtra Delhi) ಒಮಿಕ್ರಾನ್ ಅತಿ ಹೆಚ್ಚು ರೋಗಿಗಳನ್ನು ಹೊಂದಿರುವ ರಾಜ್ಯಗಳಾಗಿವೆ. ಮಹಾರಾಷ್ಟ್ರದಲ್ಲಿ 65 ಓಮಿಕ್ರಾನ್ ರೋಗಿಗಳಿದ್ದು, ದೆಹಲಿಯಲ್ಲಿ 64 ರೋಗಿಗಳು ಪತ್ತೆಯಾಗಿದ್ದಾರೆ. ಪ್ರಸ್ತುತ ತೆಲಂಗಾಣದಲ್ಲಿ 24, ರಾಜಸ್ಥಾನದಲ್ಲಿ 21, ಕರ್ನಾಟಕದಲ್ಲಿ 19, ಕೇರಳದಲ್ಲಿ 15 ಮತ್ತು ಗುಜರಾತ್‌ನಲ್ಲಿ 14  ಓಮಿಕ್ರಾನ್ ಪ್ರಕರಣಗಳು ಬೆಳಕಿಗೆ ಬಂದಿವೆ.

ಇದನ್ನೂ ಓದಿ- Gold Smuggling: ಜ್ಯೂಸರ್ ಒಳಗೆ ಚಿನ್ನದ ರಾಡ್..! ಸಿಕ್ಕಿಬಿದ್ದ ಖದೀಮ

ಈ ರಾಜ್ಯಗಳ ಜೊತೆಗೆ, ಇತರ ರಾಜ್ಯಗಳಲ್ಲಿ ಓಮಿಕ್ರಾನ್  (Omicron) ರೋಗಿಗಳ ಸಂಖ್ಯೆ 10 ಕ್ಕಿಂತ ಕಡಿಮೆ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 3, ಆಂಧ್ರಪ್ರದೇಶದಲ್ಲಿ 2, ಒಡಿಶಾದಲ್ಲಿ 2, ಉತ್ತರ ಪ್ರದೇಶದಲ್ಲಿ 2, ಚಂಡೀಗಢದಲ್ಲಿ ಒಬ್ಬರು, ಲಡಾಖ್‌ನಲ್ಲಿ ಒಬ್ಬರು, ತಮಿಳುನಾಡಿನಲ್ಲಿ 1, ಉತ್ತರಾಖಂಡದಲ್ಲಿ 1 ಮತ್ತು ಪಶ್ಚಿಮ ಬಂಗಾಳದಲ್ಲಿ ಒಬ್ಬರು ಓಮಿಕ್ರಾನ್ ರೋಗಿ ಪತ್ತೆಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 236ಕ್ಕೆ ತಲುಪಿದೆ. ಈ ರಾಜ್ಯಗಳಲ್ಲಿ ಗುಣಮುಖರಾದ ರೋಗಿಗಳ ಸಂಖ್ಯೆ 104. 

ಇದನ್ನೂ ಓದಿ- Omicron: ಒಮಿಕ್ರಾನ್' ಭೀತಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಹೈಅಲರ್ಟ್..!

ನಿನ್ನೆ (ಡಿಸೆಂಬರ್ 22 ರಂದು), ದೇಶದಲ್ಲಿ ಒಮಿಕ್ರಾನ್ ರೋಗಿಗಳ ಸಂಖ್ಯೆ 213 ಆಗಿತ್ತು.  ದೇಶದಲ್ಲಿ ಹೆಚ್ಚಾಗುತ್ತಿರುವ ಓಮಿಕ್ರಾನ್ ಬೆದರಿಕೆ ದೃಷ್ಟಿಯಿಂದ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. ಹಲವು ರಾಜ್ಯ ಸರ್ಕಾರಗಳು ಕೋವಿಡ್-19 ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿದ್ದು, ಹಲವೆಡೆ ನೈಟ್ ಕರ್ಫೂ ಜಾರಿಗೆ ತರಲಾಗಿದೆ. ಇದಲ್ಲದೆ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆ (New Year Restrictions) ಹಿನ್ನಲೆಯಲ್ಲಿ ರಾಜ್ಯ ಸರ್ಕಾರಗಳು ಹಲವು ರೀತಿಯ ನಿರ್ಬಂಧಗಳನ್ನು ಘೋಷಣೆ ಮಾಡುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News