Arthika Rashifal 2022: ಹೊಸ ವರ್ಷದ ಆರಂಭಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. 2021 ರಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿರುವ ಜನರು ಹೊಸ ವರ್ಷವು ತಮಗೆ ಒಳ್ಳೆಯದನ್ನು ಹೊತ್ತು ತರಲಿದೆ ಎಂದು ವಿಶ್ವಾಸದಿಂದ ಕಾಯುತ್ತಿದ್ದಾರೆ. ಜನರ ನಿರೀಕ್ಷೆಗಳು ಮತ್ತು ಕುತೂಹಲವು ಅತ್ಯಧಿಕವಾಗಿದೆ, ವಿಶೇಷವಾಗಿ ಹಣ ಮತ್ತು ಪ್ರಗತಿಯ ಬಗ್ಗೆ ಎಲ್ಲರಲ್ಲೂ ಒಂದು ರೀತಿಯ ಕುತೂಹಲದ ಜೊತೆಗೆ, ಮುಂಬರುವ ವರ್ಷದಲ್ಲಿ ತಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು, ತಾವು ಸಾಕಷ್ಟು ಪ್ರಗತಿ ಹೊಂದಬೇಕು ಎಂಬ ಆಸೆಯೂ ಇದ್ದೆ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ (Astrology) ಲೆಕ್ಕಾಚಾರದ ಪ್ರಕಾರ, ಈ ವರ್ಷವು ಕೆಲವು ಜನರ ಭರವಸೆಗಳನ್ನು ಪೂರೈಸುತ್ತದೆ, ಆದರೆ ಕೆಲವರಿಗೆ ನಿರಾಶೆಯಾಗುತ್ತದೆ. ಎಲ್ಲಾ 12 ರಾಶಿಚಕ್ರ ಚಿಹ್ನೆಗಳಿಗೆ ಈ ವರ್ಷ ಆರ್ಥಿಕವಾಗಿ ಹೇಗಿರುತ್ತದೆ ಎಂದು ತಿಳಿಯಿರಿ.
ಮೇಷ ರಾಶಿ (Aries) : ಮೇಷ ರಾಶಿಯವರಿಗೆ 2022ನೇ ವರ್ಷ ಹಣದ ವಿಷಯದಲ್ಲಿ (Money Horoscope 2022) ಉತ್ತಮವಾಗಿರುತ್ತದೆ. ಆದಾಯ ಹೆಚ್ಚಲಿದೆ. ಈ ಹಣವನ್ನು ಸೌಕರ್ಯಗಳನ್ನು ಹೆಚ್ಚಿಸಲು ಹಾಗೂ ಉಳಿತಾಯಕ್ಕೆ ಬಳಸಲಾಗುವುದು. ಹೂಡಿಕೆಯಿಂದ ಲಾಭವಾಗಲಿದೆ. ಆಸ್ತಿಯಿಂದ ಲಾಭವಾಗಲಿದೆ.
ವೃಷಭ ರಾಶಿ (Taurus): ವೃಷಭ ರಾಶಿಯವರಿಗೆ ಹೊಸ ವರ್ಷ ಕಳೆದ ವರ್ಷಕ್ಕಿಂತ ಉತ್ತಮವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ. ವರ್ಷ ಕಳೆದಂತೆ ಆರ್ಥಿಕ ಸ್ಥಿತಿ (Financial Status) ಉತ್ತಮಗೊಳ್ಳುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಕೆಲವು ಶುಭ ಕಾರ್ಯಗಳು ಅಥವಾ ಹಬ್ಬಗಳಲ್ಲಿ ಹಣವನ್ನು ಖರ್ಚು ಮಾಡುವಿರಿ.
ಮಿಥುನ ರಾಶಿ (Gemini): ಹಳೆಯ ಹೂಡಿಕೆಗಳು ಮಿಥುನ ರಾಶಿಯವರಿಗೆ ಉತ್ತಮ ಲಾಭವನ್ನು ತರುತ್ತವೆ. ಅಲ್ಲದೆ, ಈ ವರ್ಷ ಮಾಡಿದ ಹೂಡಿಕೆಯು ಭವಿಷ್ಯದಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ. ವಿದೇಶದಿಂದ ಧನ ಲಾಭವಾಗಲಿದೆ. ವೃತ್ತಿಯಲ್ಲಿ ಉಜ್ವಲವಾಗಲಿದೆ. ಸ್ವಲ್ಪ ಪ್ರಯತ್ನ ಕೂಡ ದೊಡ್ಡ ಲಾಭವನ್ನು ನೀಡುತ್ತದೆ.
ಕರ್ಕ ರಾಶಿ (Cancer) : ಕರ್ಕಾಟಕ ರಾಶಿಯ ಜನರು ಹಣದ ಲಾಭವನ್ನು ಪಡೆಯುತ್ತಾರೆ ಮತ್ತು ಅವರು ಉಳಿತಾಯದತ್ತ ಗಮನ ಹರಿಸಬೇಕು. ಉದ್ಯಮಿಗಳು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಕೌಟುಂಬಿಕ ಕಾರ್ಯಕ್ರಮಗಳಿಗೆ ಖರ್ಚು ಮಾಡಬಹುದು.
ಇದನ್ನೂ ಓದಿ- Tuesday Remedies: ಇಂದು ಮಾಡುವ ಈ ಕೆಲಸದಿಂದ ಕೊನೆಗೊಳ್ಳಲಿದೆ 2 ಅಶುಭ ಗ್ರಹಗಳ ಪ್ರಭಾವ
ಸಿಂಹ ರಾಶಿ (Leo): ಸಿಂಹ ರಾಶಿಯವರಿಗೆ ಉದ್ಯೋಗ-ವ್ಯವಹಾರ (Business) ಎರಡರಲ್ಲೂ ಲಾಭವಾಗಲಿದೆ. ವರ್ಷದ ಆರಂಭದಲ್ಲಿಯೇ ಗಳಿಕೆ ಹೆಚ್ಚಾಗುತ್ತದೆ. ಸ್ಮರಣೀಯ ಪ್ರವಾಸಗಳಲ್ಲಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು, ಆದರೆ ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಕೆಟ್ಟದಾಗಿ ಪರಿಣಾಮ ಬೀರುವುದಿಲ್ಲ.
ಕನ್ಯಾ ರಾಶಿ (Virgo): ಕನ್ಯಾ ರಾಶಿಯವರಿಗೆ ಇತರರ ಸಹಾಯದಿಂದ ಉತ್ತಮ ಲಾಭ ದೊರೆಯಲಿದೆ. ಈ ವರ್ಷ ವೆಚ್ಚಗಳು ತುಲನಾತ್ಮಕವಾಗಿ ಕಡಿಮೆ ಇರುತ್ತದೆ. ಭವಿಷ್ಯಕ್ಕಾಗಿ ಈ ಹಣವನ್ನು ಉಳಿಸಿ. ನೀವು ಹೂಡಿಕೆಯೆಂದು ಸಾಬೀತುಪಡಿಸುವ ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು.
ತುಲಾ ರಾಶಿ (Libra): ಏಪ್ರಿಲ್ 2022 ರ ನಂತರ ಆರ್ಥಿಕ (Finance) ಸ್ಥಿರತೆ ಬರಲಿದೆ. ಆದರೂ ಎಚ್ಚರಿಕೆ ವಹಿಸುವುದು ಉತ್ತಮ. ಹೊಸ ಆದಾಯದ ಮೂಲವಾಗಲು ಯಾವುದೇ ಅವಕಾಶವಿಲ್ಲದ ಕಾರಣ, ಬಜೆಟ್ ಮತ್ತು ವೆಚ್ಚಗಳನ್ನು ನಿಯಂತ್ರಿಸುವ ಮೂಲಕ ಮುಂದುವರಿಯಿರಿ. ಇಲ್ಲದಿದ್ದರೆ ನೀವು ಸಾಲವನ್ನು ತೆಗೆದುಕೊಳ್ಳಬೇಕಾಗಬಹುದು.
ವೃಶ್ಚಿಕ ರಾಶಿ (Scorpio): ವೃಶ್ಚಿಕ ರಾಶಿಯ ಜನರು ಬಹಳಷ್ಟು ಗಳಿಸುವರು ಮತ್ತು ತೀವ್ರವಾಗಿ ಖರ್ಚು ಮಾಡುವರು. ಆದ್ದರಿಂದ ಹೆಚ್ಚು ಗಳಿಸಿದ ನಂತರವೂ ನೀವು ಉಳಿಸುವ ಸ್ಥಿತಿಯಲ್ಲಿರುವುದಿಲ್ಲ. ಹಳೆಯ ಸಾಲವನ್ನು (Loan) ಮರುಪಾವತಿ ಮಾಡುವುದು ಮತ್ತು ಹೊಸ ಸಾಲವನ್ನು ತೆಗೆದುಕೊಳ್ಳದಿರಲು ಪ್ರಯತ್ನಿಸುವುದು ಉತ್ತಮ. ಮಂಗಳ ಕಾರ್ಯಗಳಿಗೂ ಕೂಡಾ ಖರ್ಚಾಗುತ್ತದೆ.
ಧನು ರಾಶಿ (Sagittarius): ಧನು ರಾಶಿಯವರಿಗೆ 2022ರ ವರ್ಷವು ಆರ್ಥಿಕವಾಗಿ (Arthika Rashifal 2022) ಸಾಮಾನ್ಯವಾಗಿ ಇರುತ್ತದೆ. ನೀವು ಉತ್ತಮ ಉಳಿತಾಯವನ್ನು ಮಾಡಲು ಸಾಧ್ಯವಾಗುತ್ತದೆ, ಆದರೆ ನಿಮ್ಮ ಎಲ್ಲಾ ಉಳಿತಾಯವನ್ನು ನೀವು ಹೂಡಿಕೆ ಮಾಡುವ ಉತ್ತಮ ಲಾಭಗಲಿಸಾಬಹುದು. ಆಸ್ತಿ ಖರೀದಿಯಿಂದಲೂ ಲಾಭವಾಗುತ್ತದೆ.
ಮಕರ ರಾಶಿ (Capricorn) : ಮಕರ ರಾಶಿಯ ಜನರು ಈ ವರ್ಷ ಆರ್ಥಿಕವಾಗಿ ತುಂಬಾ ಸಬಲರಾಗಿರುತ್ತಾರೆ. ಅವರು ಗಳಿಕೆ ಮತ್ತು ಖರ್ಚಿನ ನಡುವೆ ಉತ್ತಮ ಸಮತೋಲನವನ್ನು ಸಾಧಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಹೊಸ ಮೂಲಗಳಿಂದಲೂ ಹಣದ ಲಾಭವಾಗುತ್ತದೆ. ಈ ಹೆಚ್ಚುವರಿ ಹಣವನ್ನು ಭೂಮಿ ಮತ್ತು ವಾಹನಗಳನ್ನು ಖರೀದಿಸಲು ಬಳಸಬಹುದು.
ಇದನ್ನೂ ಓದಿ- Luckiest Zodiac Signs: ಡಿಸೆಂಬರ್ 30 ರಿಂದ ಈ ರಾಶಿಗಳ ಜನರ ಭಾಗ್ಯದ ಬಾಗಿಲು ತೆರೆಯಲಿದೆ, ನಿಮ್ಮ ರಾಶಿ ಇದೆಯಾ ಇದರಲ್ಲಿ
ಕುಂಭ ರಾಶಿ (Aquarius): ಕುಂಭ ರಾಶಿಯವರಿಗೆ 2022 ಹಣದ ವಿಷಯದಲ್ಲಿ ಸಾಮಾನ್ಯವಾಗಿರುತ್ತದೆ. ಆದಾಯವು ಸಾಮಾನ್ಯವಾಗಿರುತ್ತದೆ ಆದರೆ ವೆಚ್ಚಗಳು ಹೆಚ್ಚಾಗುತ್ತವೆ. ಇದರಿಂದ ಉಳಿಸಲು ಕಷ್ಟವಾಗುತ್ತದೆ. ಬೆಲೆಬಾಳುವ ಆಭರಣ ಖರೀದಿಗೆ ಹಣ ವ್ಯಯವಾಗಲಿದೆ.
ಮೀನ ರಾಶಿ (Pisces): 2022 ಮೀನ ರಾಶಿಯವರಿಗೆ ಆರ್ಥಿಕ ಲಾಭ ತರಲಿದೆ. ವರ್ಷದ ಮಧ್ಯದಲ್ಲಿ ಮಾತ್ರ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಹೂಡಿಕೆ ಲಾಭವನ್ನು ನೀಡುತ್ತದೆ. ಅಷ್ಟೇ ಅಲ್ಲ ಇಷ್ಟುದಿನ ಬೇರೆಡೆ ಸಿಲುಕಿದ್ದ ಹಣವೂ ನಿಮ್ಮ ಕೈ ಸೇರಲಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.