UPI Payment Alert! ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಆನ್ಲೈನ್ ಅಥವಾ ಡಿಜಿಟಲ್ ವಹಿವಾಟುಗಳು ಹಲವು ಪಟ್ಟು ಹೆಚ್ಚಾಗಿದೆ. ಸ್ಮಾರ್ಟ್ಫೋನ್ ಮೂಲಕ ಡಿಜಿಟಲ್ ಪಾವತಿ ಮಾಡಿಲ್ಲ ಎನ್ನುವವರ ಸಂಖ್ಯೆ ತೀರಾ ಕಮ್ಮಿಯಾಗಿದೆ. ಆದರೆ, ಡಿಜಿಟಲ್ ಮೂಲಕ ಹಣ ಪಾವತಿ (Digital Payment) ಕಂಡಷ್ಟು ಸುಲಭದ ಮಾತಲ್ಲ, ಕೆಲವೊಮ್ಮೆ ಅದು ನಿಮ್ಮ ಪಾಲಿಗೆ ಅಷ್ಟೇ ಅಪಾಯಕಾರಿ ಸಾಬೀತಾಗಬಹುದು. UPI ಪಾವತಿ ಅನುಕೂಲಗಳು ಮತ್ತು ಅನಾನುಕೂಲತೆ ಎರಡನ್ನು ಹೊಂದಿದೆ. ಹೀಗಂತ ನೀವು ಭಯಪಡಬೇಕಾಗಿಲ್ಲ. ಕೇವಲ ಎಚ್ಚರಿಕೆ ವಹಿಸಿದತೆ ಸಾಕು. ಏಕೆಂದರೆ ಈ ವಿಷಯವು ನಿಮ್ಮ ಕಷ್ಟಪಟ್ಟು ಗಳಿಸಿದ ಹಣಕ್ಕೆ ಸಂಬಂಧಿಸಿದೆ.
ಆನ್ಲೈನ್ ವಹಿವಾಟು (Online Transaction) ಹೆಚ್ಚಾದಂತೆ ಸೈಬರ್ ವಂಚನೆಗಳೂ (Cyber Crime) ಹೆಚ್ಚಾಗಿರುವುದು ನಮಗೆಲ್ಲ ಗೊತ್ತೇ ಇದೆ. ಇದು ಸ್ಥಳೀಯ ಕಿರಾಣಿ ಅಂಗಡಿಯಾಗಿರಲಿ, ತರಕಾರಿ ಕಾರ್ಟ್ ಅಥವಾ ದೊಡ್ಡ ಮಾಲ್ ಆಗಿರಲಿ, ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪಾವತಿ ಸೌಲಭ್ಯವು ಎಲ್ಲೆಡೆ ಲಭ್ಯವಿದೆ. ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತು ತಕ್ಷಣವೇ ಪಾವತಿಯನ್ನು ಮಾಡಿ, ಆದರೆ ನೀವು ಯಾವುದೇ ಡಿಜಿಟಲ್ ಪಾವತಿ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರೆ (ಅದು Google Pay ಅಥವಾ PhonePe ಅಥವಾ Paytm ಆಗಿರಬಹುದು), ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಬ್ಯಾಂಕ್ ಖಾತೆ ಖಾಲಿಯಾಗಲು ಸಮಯ ಬೇಕಾಗುವುದಿಲ್ಲ.
UPI ಪಾವತಿಗಳನ್ನು ಮಾಡುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಐದು ಸುರಕ್ಷತಾ ಸಲಹೆಗಳು ಇಲ್ಲಿವೆ...
1. UPI ವಿಳಾಸವನ್ನು ಎಂದಿಗೂ ಹಂಚಿಕೊಳ್ಳಬೇಡಿ
UPI ಖಾತೆ/ವಿಳಾಸವನ್ನು ಸುರಕ್ಷಿತವಾಗಿರಿಸುವುದು ಅತ್ಯಂತ ಪ್ರಮುಖವಾದ ಸುರಕ್ಷತಾ ಸಲಹೆಯಾಗಿದೆ. ನಿಮ್ಮ UPI ಐಡಿ/ವಿಳಾಸವನ್ನು ನೀವು ಯಾರೊಂದಿಗೂ ಹಂಚಿಕೊಳ್ಳಬಾರದು. ನಿಮ್ಮ UPI ವಿಳಾಸವು ನಿಮ್ಮ ಫೋನ್ ಸಂಖ್ಯೆ, QR ಕೋಡ್ ಅಥವಾ ವರ್ಚುವಲ್ ಪಾವತಿ ವಿಳಾಸ (VPA) ನಡುವೆ ಯಾವುದಾದರೂ ಆಗಿರಬಹುದು. ಯಾವುದೇ ಪಾವತಿ ಅಥವಾ ಬ್ಯಾಂಕ್ ಅಪ್ಲಿಕೇಶನ್ ಮೂಲಕ ನಿಮ್ಮ UPI ಖಾತೆಯನ್ನು ಪ್ರವೇಶಿಸಲು ನೀವು ಯಾರಿಗೂ ಅನುಮತಿಸಬಾರದು.
2. ಸ್ಟ್ರಾಂಗ್ ಸ್ಕ್ರೀನ್ ಲಾಕ್ ಅನ್ನು ಹೊಂದಿಸಿ
ಎಲ್ಲಾ ಪಾವತಿ ಅಥವಾ ಹಣಕಾಸು ವಹಿವಾಟು ಅಪ್ಲಿಕೇಶನ್ಗಳಿಗೆ ಬಲವಾದ ಸ್ಕ್ರೀನ್ ಲಾಕ್ ಅನ್ನು ಹೊಂದಿಸಬೇಕು. ನೀವು Google Pay, PhonePe, Paytm ಅಥವಾ ಯಾವುದೇ ಇತರ ಪ್ಲಾಟ್ಫಾರ್ಮ್ ಅನ್ನು ಬಳಸುತ್ತಿದ್ದರೆ, ಬಲವಾದ PIN ಅನ್ನು ಹೊಂದಿಸುವುದು ಮುಖ್ಯವಾಗಿದೆ, ಅದು ನಿಮ್ಮ ದಿನಾಂಕ ಅಥವಾ ಹುಟ್ಟಿದ ವರ್ಷ, ಮೊಬೈಲ್ ಸಂಖ್ಯೆಯ ಅಂಕೆಗಳು ಅಥವಾ ಇನ್ನಾವುದೇ ಆಗಿರಬಾರದು. ನಿಮ್ಮ ಪಿನ್ ಅನ್ನು ನೀವು ಯಾರೊಂದಿಗೂ ಹಂಚಿಕೊಳ್ಳಬಾರದು ಮತ್ತು ನಿಮ್ಮ ಪಿನ್ ಬಹಿರಂಗಗೊಂಡಿದೆ ಎಂದು ನಿಮಗೆ ಅನುಮಾನ ಬಂದರೆ ತಕ್ಷಣ ಅದನ್ನು ಬದಲಾಯಿಸಿ.
3. ಪರಿಶೀಲಿಸದ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ನಕಲಿ ಕರೆಗಳಿಗೆ ಹಾಜರಾಗಬೇಡಿ
UPI ಸ್ಕ್ಯಾಮ್ಗಳು (UPI Scam) ಬಳಕೆದಾರರನ್ನು ಬಲೆಗೆ ಬೀಳಿಸಲು ಹ್ಯಾಕರ್ಗಳು ಬಳಸುವ ಸಾಮಾನ್ಯ ತಂತ್ರವಾಗಿದೆ. ಹ್ಯಾಕರ್ಗಳು ಸಾಮಾನ್ಯವಾಗಿ ಲಿಂಕ್ಗಳನ್ನು ಹಂಚಿಕೊಳ್ಳುತ್ತಾರೆ ಅಥವಾ ಕರೆಗಳನ್ನು ಮಾಡುತ್ತಾರೆ ಮತ್ತು ಪರಿಶೀಲನೆಗಾಗಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಲು ಬಳಕೆದಾರರನ್ನು ಕೇಳುತ್ತಾರೆ ಎಂಬುದನ್ನು ಗಮನಿಸಬೇಕು. ನೀವು ಅಂತಹ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬಾರದು ಅಥವಾ ಯಾರೊಂದಿಗೂ ಪಿನ್ ಅಥವಾ ಯಾವುದೇ ಇತರ ಮಾಹಿತಿಯನ್ನು ಹಂಚಿಕೊಳ್ಳಬಾರದು. ಬ್ಯಾಂಕ್ಗಳು ಎಂದಿಗೂ PIN, OTP ಅಥವಾ ಯಾವುದೇ ಇತರ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ, ಆದ್ದರಿಂದ, ಸಂದೇಶ ಅಥವಾ ಕರೆ ಮೂಲಕ ಇಂತಹ ಮಾಹಿತಿಯನ್ನು ಹುಡುಕುವ ಯಾವುದೇ ವ್ಯಕ್ತಿ ನಿಮ್ಮ ವಿವರಗಳು ಮತ್ತು ಹಣವನ್ನು ಕದಿಯಲು ಬಯಸುತ್ತಾರೆ. ಇಂತಹ ಸಂದರ್ಭಗಳಲ್ಲಿ ನೀವು ಜಾಗರೂಕರಾಗಿರಬೇಕು.
ಇದನ್ನೂ ಓದಿ-Online Shoppingನಲ್ಲಿ ಸಹಾಯ ಮಾಡಲಿದೆ Google Chrome! ಹೇಗೆ ತಿಳಿಯಲು ಸುದ್ದಿ ಓದಿ
4. ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್ ಬಳಸುವುದನ್ನು ತಪ್ಪಿಸಿ
ಒಂದಕ್ಕಿಂತ ಹೆಚ್ಚು UPI ಅಥವಾ ಆನ್ಲೈನ್ ಪಾವತಿ ಅಪ್ಲಿಕೇಶನ್ ಅನ್ನು ಬಳಸದಂತೆ ಸಲಹೆ ನೀಡಲಾಗಿದೆ. UPI ವಹಿವಾಟುಗಳನ್ನು ಅನುಮತಿಸುವ ಅನೇಕ ಡಿಜಿಟಲ್ ಪಾವತಿ ಅಪ್ಲಿಕೇಶನ್ಗಳಿವೆ, ಆದ್ದರಿಂದ, ಕ್ಯಾಶ್ಬ್ಯಾಕ್ ಮತ್ತು ಬಹುಮಾನಗಳಂತಹ ಉತ್ತಮ ಪ್ರಯೋಜನಗಳನ್ನು ಯಾವುದು ನೀಡುತ್ತದೆ ಎಂಬುದನ್ನು ನೀವು ನೋಡಬೇಕು ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಆಯ್ಕೆಯನ್ನು ಮಾಡಬೇಕು.
ಇದನ್ನೂ ಓದಿ-Jio ಗ್ರಾಹಕರ ಗಮನಕ್ಕೆ : 1 ರೂ. ರಿಚಾರ್ಜ್ ಪ್ಲಾನ್ ನಲ್ಲಿ ಭಾರಿ ಬದಲಾವಣೆ!
5. UPI ಅಪ್ಲಿಕೇಶನ್ (UPI App) ಅನ್ನು ನಿಯಮಿತವಾಗಿ ನವೀಕರಿಸಿ
ಸಾಮಾನ್ಯವಾಗಿ ಎಲ್ಲಾ ಅಪ್ಲಿಕೇಶನ್ ಗಳಿಗೆ ನವೀಕರಣ ಕೇಳಲಾಗುತ್ತದೆ. ಹೊಸ ನವೀಕರಣಗಳು ಉತ್ತಮ UI ಮತ್ತು ಹೊಸ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ತರುವುದರಿಂದ UPI ಪಾವತಿ ಅಪ್ಲಿಕೇಶನ್ ಸೇರಿದಂತೆ ಪ್ರತಿಯೊಂದು ಅಪ್ಲಿಕೇಶನ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಗ್ರೇಡ್ ಮಾಡಬೇಕು. ನವೀಕರಣಗಳು ಸಾಮಾನ್ಯವಾಗಿ ದೋಷ ಪರಿಹಾರಗಳನ್ನು ತರುತ್ತವೆ. ಇತ್ತೀಚಿನ ಆವೃತ್ತಿಗೆ ಅಪ್ಲಿಕೇಶನ್ಗಳನ್ನು ಅಪ್ಗ್ರೇಡ್ ಮಾಡುವುದರಿಂದ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ಭದ್ರತಾ ಉಲ್ಲಂಘನೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತವೆ.
ಇದನ್ನೂ ಓದಿ-ಕೇವಲ 713 ರೂ.ಯಲ್ಲಿ ಮನೆಗೆ ತನ್ನಿ 25 ಲೀಟರ್ ನ Havells Geyser, ರಿಮೋಟ್ ಮೂಲಕ ನಿಮಿಷಗಳಲ್ಲಿ ಬಿಸಿಯಾಗಲಿದೆ ನೀರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.