SBI Special Current Account ವಹಿವಾಟು ಸೇರಿದಂತೆ ಸಿಗಲಿದೆ ಅನೇಕ ಪ್ರಯೋಜನ

SBI ಅಕೌಂಟ್ ನಲ್ಲಿ, ಎಸ್ ಬಿಐ ಗೋಲ್ಡ್ ಕರೆಂಟ್ ಅಕೌಂಟ್  ಕೂಡಾ ಮುಖ್ಯವಾದುದು. ಇದರಲ್ಲಿ ಬ್ಯಾಂಕ್ ತನ್ನ ಗ್ರಾಹಕರಿಗೆ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಈ ಖಾತೆಯನ್ನು ತೆರೆಯಲು ಬಯಸುವುದಾದರೆ ಸಿಗಲಿದೆ ಅನೇಕ ಪ್ರಯೋಜನಗಳು.

Written by - Ranjitha R K | Last Updated : Dec 13, 2021, 12:23 PM IST
  • SBI ಗೋಲ್ಡ್ ಕರೆಂಟ್ ಅಕೌಂಟ್ ಪ್ರಯೋಜನಗಳು
  • ವಹಿವಾಟು ಸೇರಿದಂತೆ ಸಿಗಲಿದೆ ಅನೇಕ ಪ್ರಯೋಜನ
  • ನಾನ್ ಹೋಂ ಬ್ರಾಂಚ್ ನಲ್ಲಿ ನಗದು ಠೇವಣಿ ಸೌಲಭ್ಯ
SBI Special Current Account ವಹಿವಾಟು ಸೇರಿದಂತೆ ಸಿಗಲಿದೆ ಅನೇಕ ಪ್ರಯೋಜನ  title=
SBI ಗೋಲ್ಡ್ ಕರೆಂಟ್ ಅಕೌಂಟ್ ಪ್ರಯೋಜನಗಳು (file photo)

ನವದೆಹಲಿ : SBI Current Account benefits : ನೀವು ವ್ಯಾಪಾರ ಮಾಡುತ್ತಿದ್ದರೆ, ಅಥವಾ ಪ್ರತಿದಿನ ವಹಿವಾಟುಗಳನ್ನು ಮಾಡುತ್ತಿದ್ದರೆ, SBI Current Account ಹೊಂದುವ ಅಗತ್ಯವಿರುತ್ತದೆ. ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕರೆಂಟ್ ಅಕೌಂಟ್ ತೆರೆಯುವಾಗ ಅನೇಕ ಉತ್ತಮ ಪ್ರಯೋಜನಗಳನ್ನು (SBI Current Account benefits) ನೀಡುತ್ತಿದೆ.

 SBI ಅಕೌಂಟ್ ನಲ್ಲಿ, ಎಸ್ ಬಿಐ ಗೋಲ್ಡ್ ಕರೆಂಟ್ ಅಕೌಂಟ್ (GOLD Current Account) ಕೂಡಾ ಮುಖ್ಯವಾದುದು. ಇದರಲ್ಲಿ ಬ್ಯಾಂಕ್ (Bank) ತನ್ನ ಗ್ರಾಹಕರಿಗೆ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಈ ಖಾತೆಯನ್ನು ತೆರೆಯಲು ಬಯಸುವುದಾದರೆ ಸಿಗಲಿದೆ ಅನೇಕ ಪ್ರಯೋಜನಗಳು. 

ಇದನ್ನೂ ಓದಿ : Renault Offers: ಈ ಕಂಪನಿಯ ಕಾರುಗಳ ಮೇಲೆ 1.30 ಲಕ್ಷ ರೂ.ವರೆಗಿನ ಭರ್ಜರಿ ಆಫರ್‌

SBI ಗೋಲ್ಡ್ ಕರೆಂಟ್ ಅಕೌಂಟ್ ಪ್ರಯೋಜನ :
1. ಸ್ಟೇಟ್ ಬ್ಯಾಂಕ್ ಆಫ್ (State bank of India) ಇಂಡಿಯಾದಲ್ಲಿನ ಗೋಲ್ಡ್ ಕರೆಂಟ್ ಅಕೌಂಟ್ ನಲ್ಲಿ, ಮಾಸಿಕ ಸರಾಸರಿ ಬ್ಯಾಲೆನ್ಸ್ 1,00,000 ರೂ.
2. ಈ ಖಾತೆಯಲ್ಲಿ ಪ್ರತಿ ತಿಂಗಳು ಉಚಿತವಾಗಿ 25 ಲಕ್ಷ ರೂ. ಡಿಪೋಸಿಟ್ ಮಾಡಬಹುದು. 
3.  ಪ್ರತಿ ತಿಂಗಳು 300 ಮಲ್ಟಿಸಿಟಿ ಪೇಜ್ ಚೆಕ್ ಬುಕ್ ಅನ್ನು ಒದಗಿಸಲಾಗುತ್ತದೆ.
4. ಆನ್‌ಲೈನ್‌ನಲ್ಲಿ ಹಣವನ್ನು ವರ್ಗಾಯಿಸಬೇಕಾದರೆ ಉಚಿತವಾಗಿ RTGS ಮತ್ತು NEFT ಮಾಡಬಹುದು.
5. ಪ್ರತಿ ತಿಂಗಳು 50 ಉಚಿತ ಡಿಮ್ಯಾಂಡ್ ಡ್ರಾಫ್ಟ್ ಸೌಲಭ್ಯವನ್ನು ಸಿಗಬಹುದು.
6. ಯಾವುದೇ ಶುಲ್ಕವಿಲ್ಲದೆ ಹೋಮ್ ಬ್ರಾಂಚ್ ನಿಂದ ಹಣವನ್ನು ಹಿಂಪಡೆಯಬಹುದು.
7. ಎಲ್ಲಾ 22,000 SBI ಶಾಖೆಗಳಲ್ಲಿಯೂ ಹಣವನ್ನು ವಿಡ್ರಾ ಮಾಡುವುದು ಮತ್ತು ಠೇವಣಿ ಮಾಡಬಹುದು.
8. ಇಲ್ಲಿ ಅತ್ಯಂತ ಸುರಕ್ಷಿತ ಮತ್ತು ವೇಗದ ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ (Internet banking) ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.
9. ಇದರಲ್ಲಿ ಕರೆಂಟ್ ಅಕೌಂಟ್ ನ ಮಾಸಿಕ ಸ್ಟೇಟ್ ಮೆಂಟ್ ಅನ್ನು ಉಚಿತವಾಗಿ ಪಡೆಯಬಹುದು.
10. ಅಗತ್ಯವಿದ್ದರೆ ಪ್ರಸ್ತುತ ಖಾತೆಯನ್ನು ಬೇರೆ ಯಾವುದೇ ಶಾಖೆಗೆ ವರ್ಗಾಯಿಸಬಹುದು.

ಇದನ್ನೂ ಓದಿ :  Small Business Idea: ಸರ್ಕಾರದ ಸಹಾಯದಿಂದ ಈ ಲಾಭದಾಯಕ ವ್ಯವಹಾರ ಪ್ರಾರಂಭಿಸಿ, ಲಕ್ಷ ಲಕ್ಷ ಗಳಿಸಿ

ಗೃಹೇತರ ಶಾಖೆಯಲ್ಲಿ ನಗದು ಠೇವಣಿ ಸೌಲಭ್ಯ :
ಈ ವಿಶೇಷ ಖಾತೆಯನ್ನು ತೆರೆಯುವ ಮೂಲಕ, ನಾನ್ ಹೋಂ ಬ್ರಾಂಚ್ ನಲ್ಲಿ (non home bramnch) ಪ್ರತಿದಿನ 5 ಲಕ್ಷದವರೆಗೆ ಠೇವಣಿ ಇಡುವುದು  ಸಾಧ್ಯವಾಗುತ್ತದೆ. ಹೋಮ್ ಶಾಖೆಯಲ್ಲಿ ಅನ್ಲಿಮಿಟೆಡ್ ಫ್ರೀ ಕ್ಯಾಶ್ ಪಡೆಯುವುದು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿ, ಖಾತೆದಾರನು ನಾನ್ ಹೋಂ ಬ್ರಾಂಚ್ ನಿಂದ ಪ್ರತಿದಿನ ಒಂದು ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು. ಗೋಲ್ಡ್ ಕರೆಂಟ್ ಅಕೌಂಟ್  ನಲ್ಲಿ 550 + GST ​​ಅನ್ನು ಪಾವತಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News