ನವದೆಹಲಿ: ಲವಂಗ ಸೇವನೆಯಿಂದ ನಮಗೆ ಅನೇಕ ಆರೋಗ್ಯಕಾರಿ ಪ್ರಯೋಜನ(Cloves Health Benefits)ಗಳಿವೆ. ಪ್ರತಿದಿನವೂ ನಾವು ಸೇವಿಸುವ ಆಹಾರದ ಜೊತೆಗೆ ಲವಂಗವನ್ನು ತಿನ್ನುವುದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಅತಿಯಾದರೆ ಅಮೃತವೂ ವಿಷವೆಂಬಂತೆ ಲವಂಗದ ಸೇವನೆಯು ಕೂಡ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಆಗಿರುತ್ತದೆ. ಹೀಗಾಗಿ ಲವಂಗವನ್ನು ಇತಿಮಿತಿಯಾಗಿ ಸೇವಿಸುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ.
ದಿನವಿಡೀ ಲವಂಗವನ್ನು ಅಗಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ(Cloves Disadvantages). ಏಕೆಂದರೆ ಲವಂಗವು ಉಷ್ಣ ಗುಣವನ್ನು ಹೊಂದಿದೆ. ಇದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಲವಂಗದಲ್ಲಿ ಮೆಗ್ನೀಷಿಯಮ್, ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಷಿಯಮ್, ಸೋಡಿಯಂ, ಸತು ಇತ್ಯಾದಿಗಳು ಹೆಚ್ಚಿನ ಪ್ರಮಾಣದಲ್ಲಿವೆ. ಲವಂಗದ ಎಣ್ಣೆ ಕೂಡ ಅನೇಕ ರೋಗಗಳನ್ನು ತಡೆಯು ಗುಣ ಹೊಂದಿದೆ.
ಇದನ್ನೂ ಓದಿ: Obesity: ಈ ರೀತಿ ತೂಕ ಹೆಚ್ಚಿಸುವುದು ಮಾರಕ, ಈ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ
ಅತಿಯಾಗಿ ಲವಂಗ ಸೇವಿಸುವುದರಿಂದ ಏನಾಗುತ್ತದೆ..?
- ಲವಂಗ(Cloves)ವನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರಪಿಂಡ ಮತ್ತು ಕರುಳಿನ ತೊಂದರೆ ಹೆಚ್ಚಾಗುತ್ತವೆ.
- ಮೂತ್ರಪಿಂಡ, ಪಿತ್ತಜನಕಾಂಗ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರು ಇದನ್ನು ಸೇವಿಸಬಾರದು. ಇದು ಮೂತ್ರಪಿಂಡ ವೈಫಲ್ಯ ಮತ್ತು ಪಿತ್ತಜನಕಾಂಗದ ಹಾನಿಗೆ ಕಾರಣವಾಗಬಹುದು.
- ಲವಂಗವನ್ನು ಹೆಚ್ಚಾಗಿ ಸೇವಿಸಿದರೆ ಉರಿಯೂತ, ಉಸಿರಾಟದ ತೊಂದರೆ, ಚರ್ಮದಲ್ಲಿ ತುರಿಕೆ ಮುಂತಾದ ಸಮಸ್ಯೆಗಳು ಬರುತ್ತವೆ.
- ದೇಹದಲ್ಲಿ ಗ್ಲೂಕೋಸ್ ಮಟ್ಟ(Glucose Level) ತುಂಬಾ ಕಡಿಮೆಯಾಗಿದ್ದರೆ ಲವಂಗ ಸೇವನೆ ತಪ್ಪಿಸಬೇಕು. ಲವಂಗವನ್ನು ಸೇವಿಸಿದರೆ 1-2ಕ್ಕಿಂತ ಹೆಚ್ಚು ತಿನ್ನಬಾರದು.
- ಆಹಾರದಲ್ಲಿಯೂ ಕೂಡ ಲವಂಗವನ್ನು ಕಡಿಮೆ ಬಳಸಬೇಕು. ಮಧುಮೇಹ ರೋಗಿಗಳಿಗೆ ಅತಿಯಾದ ಗ್ಲೂಕೋಸ್ ಮಟ್ಟ ಹಾನಿಕಾರಕ. ಹೀಗಾಗಿ ಇಂತವರು ಸಾಧ್ಯವಾದಷ್ಟು ಲವಂಗದಿಂದ ದೂರವಿರುವುದು ಒಳ್ಳೆಯದು.
- ಲವಂಗವು ರಕ್ತ ತೆಳುಗೊಳಿಸುವ ಸಾಮರ್ಥ್ಯ ಹೊಂದಿರುವ ಕೆಲ ಸಂಯುಕ್ತಗಳನ್ನು ಹೊಂದಿದೆ. ಇದನ್ನು ಹೆಚ್ಚಾಗಿ ಸೇವಿಸಿದರೆ ಹೆಚ್ಚು ರಕ್ತಸ್ರಾವವಾಗುವ ಅಪಾಯವಿರುತ್ತದೆ.
- ಮಗುವಿಗೆ ಎದೆ ಹಾಲು ನೀಡುತ್ತಿದ್ದರೆ ಲವಂಗ(Cloves)ವನ್ನು ನೇರವಾಗಿ ಅಗಿಯಬಾರದು. ಅದನ್ನು ತರಕಾರಿ ಅಥವಾ ಯಾವುದೇ ರೀತಿಯ ಆಹಾರದಲ್ಲಿ ಬೇಯಿಸಿ ಸೇವಿಸುವುದು ಉತ್ತಮ.
- ಅತಿಯಾದ ಲವಂಗ ಸೇವನೆಯಿಂದ ಗರ್ಭಾವಸ್ಥೆಯಲ್ಲಿ ಅಲರ್ಜಿಯ ಪ್ರತಿಕ್ರಿಯೆ ಉಂಟಾಗುತ್ತದೆ. ಇದರಿಂದ ಹುಟ್ಟಲಿರುವ ಮಗುವಿಗೆ ಹಾನಿಕಾರಕವಾಗಬಹುದು.
- ಲವಂಗದ ರುಚಿಯನ್ನು ಹಾಲಿನೊಂದಿಗೆ ಬೆರೆಸಿದರೆ ಅದು ಅಲರ್ಜಿಯನ್ನುಂಟು ಮಾಡುತ್ತದೆ. ಇದು ಮಗುವಿಗೆ ಯಾವುದೇ ರೀತಿಯಲ್ಲಿ ಸರಿಹೊಂದುವುದಿಲ್ಲ.
ಇದನ್ನೂ ಓದಿ: Benefits of Ghee : ಹಸು ಅಥವಾ ಎಮ್ಮೆ ಯಾವ ತುಪ್ಪ ಆರೋಗ್ಯಕ್ಕೆ ಪ್ರಯೋಜನಕಾರಿ? ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.