Horoscope 2022 : 2022 ರಲ್ಲಿ ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ ಈ ನಾಲ್ಕು ರಾಶಿಯವರು

Horoscope 2022 : 2022 ವರ್ಷ ಪ್ರಾರಂಭವಾಗಲು ಕೇವಲ ಒಂದು ತಿಂಗಳು ಮಾತ್ರ ಉಳಿದಿದೆ. ಮುಂಬರುವ ವರ್ಷ ಅವರ ವೃತ್ತಿ, ಆರ್ಥಿಕ ಸ್ಥಿತಿ ಮತ್ತು ಜೀವನ ಹೇಗಿರುತ್ತದೆ ಎಂಬ ಕುತೂಹಲ ಈಗ ಎಲ್ಲರಿಗೂ ಇರುತ್ತದೆ.

Written by - Ranjitha R K | Last Updated : Nov 28, 2021, 02:59 PM IST
  • ಹೊಸ ವರ್ಷ 4 ರಾಶಿಚಕ್ರ ಚಿಹ್ನೆಗಳ ವೃತ್ತಿಜೀವನವನ್ನು ಬೆಳಗಿಸುತ್ತದೆ
  • ಈ ರಾಶಿಯ ಜನರು ಭಾರೀ ಅದೃಷ್ಟ ಹೊಂದಲಿದ್ದಾರೆ
  • ವರ್ಷವಿಡೀ ಉತ್ತಮ ಅವಕಾಶಗಳು ಲಭ್ಯವಿರುತ್ತವೆ
Horoscope 2022 : 2022 ರಲ್ಲಿ ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ ಈ ನಾಲ್ಕು ರಾಶಿಯವರು  title=
ಹೊಸ ವರ್ಷ 4 ರಾಶಿಚಕ್ರ ಚಿಹ್ನೆಗಳ ವೃತ್ತಿಜೀವನವನ್ನು ಬೆಳಗಿಸುತ್ತದೆ (photo zee news)

ನವದೆಹಲಿ : ಮುಂಬರುವ 2022ರ ವರ್ಷ ವೃತ್ತಿ ಜೀವನ ಹೇಗಿರಲಿದೆ (Career Horoscope 2022) ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇರುತ್ತದೆ. ಈ ವರ್ಷವು 4 ರಾಶಿಚಕ್ರದ ಚಿಹ್ನೆಗಳ (Zodiac sign) ವೃತ್ತಿಜೀವನದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಲಿದ್ದಾರೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಜೊತೆಗೆ ಗೌರವ , ಕೈತುಂಬಾ ಹಣವೂ ಸಿಗುತ್ತದೆ. ಇಷ್ಟದ ಕೆಲಸ, ವ್ಯಾಪಾರ ಮಾಡಬೇಕೆಂದುಕೊಂಡಿದ್ದವರ ಆಸೆಯು ಈಡೇರುತ್ತದೆ.  

ವೃಷಭ ರಾಶಿ  (Taurus) : 2022 ರ ವರ್ಷವು ವೃಷಭ ರಾಶಿಯ  (Taurus) ಜನರ ವೃತ್ತಿಜೀವನ ಅದ್ಭುತವಾಗಿರುತ್ತದೆ.  ಹೊಸ ವರ್ಷದಲ್ಲಿ ವರ್ಷವೃಷಭ ರಾಶಿಯವರ ಅದೃಷ್ಟ ಜಾಗೃತಗೊಳ್ಳಲಿದೆ. ವೃತ್ತಿಜೀವನದಲ್ಲಿ ಅವರು ಉತ್ತಮ ಅವಕಾಶಗಳನ್ನು ಪಡೆಯಲಿದ್ದಾರೆ. ಕೆಲಸ ಅಥವಾ ವ್ಯವಹಾರ ಎರಡರಲ್ಲೂ ಸಮಯ ಉತ್ತಮವಾಗಿರುತ್ತದೆ. ಹೊಸ ಜವಾಬ್ದಾರಿಗಳು ಸಿಗಲಿವೆ. ಹಣ ಸಿಗಲಿದೆ. ಈ ವರ್ಷವು ವೃಷಭ ರಾಶಿಯವರ ವೃತ್ತಿಜೀವನಕ್ಕೆ ಒಂದು ಮೈಲಿಗಲ್ಲಾಗಿ ಸಾಬೀತಾಗಲಿದೆ. 

ಇದನ್ನೂ ಓದಿ : ನಾಯಕತ್ವದ ಗುಣದಿಂದಾಗಿ ಬಹಳ ಬೇಗ ಖ್ಯಾತಿ ಪಡೆಯುತ್ತಾರೆ ಈ ರಾಶಿಯವರು

ಕರ್ಕ ರಾಶಿ (Cancer): ಕರ್ಕಾಟಕ ರಾಶಿಯವರಿಗೆ 2022 ರ ಪ್ರಾರಂಭದ ಸಮಯವು ಮಿಶ್ರ ಫಲವನ್ನು ನೀಡುತ್ತದೆ. ಆದರೆ ಸಮಯ ಕಳೆದಂತೆ ಅದೃಷ್ಟವೂ ತೆರೆದುಕೊಳ್ಳುತ್ತದೆ. ವರ್ಷದ ಮಧ್ಯದಲ್ಲಿ, ಅದೃಷ್ಟವನ್ನು ಬದಲಾಯಿಸುವ ದೊಡ್ಡ ಅವಕಾಶವಿರುತ್ತದೆ. ಈ ವರ್ಷ ಖಾಸಗಿಯಿಂದ ಸರ್ಕಾರಿ ವಲಯದ ಜನರಿಗೆ ಹೆಚ್ಚಿನ ಲಾಭವಾಗಲಿದೆ.  ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. 

ಧನು ರಾಶಿ : (Sagittarius) : 2022 ರ ವರ್ಷವು ಧನು ರಾಶಿಯವರಿಗೆ ಗಳಿಕೆಯ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಅಪಾರ ಲಾಭವಾಗಲಿದೆ. ಬಡ್ತಿ ಮತ್ತು ಉತ್ತಮ ಇನ್ಕ್ರಿಮೆಂಟ್ ಪಡೆಯುವ ಅವಕಾಶಗಳು ಹೆಚ್ಚಿವೆ.  ಏಪ್ರಿಲ್ ನಂತರದ ಸಮಯವು ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯವಾಗಿರುತ್ತದೆ. ವರ್ಷದ ಕೊನೆಯಲ್ಲಿ, ಒಂದು ಪ್ರಮುಖ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡಬೇಕಾಗಬಹುದು. ಈ ಪ್ರಯಾಣ ಅತ್ಯಂತ ಸ್ಮರಣೀಯವಾಗಲಿದೆ. 

ಕುಂಭ ರಾಶಿ (Aquarius) : ಕುಂಭ ರಾಶಿಯವರಿಗೆ 2022ರ ಆರಂಭದಿಂದಲೇ ಅಪಾರ ಧನ ಲಾಭವಾಗಲಿದೆ.  ಆರ್ಥಿಕ ಸ್ಥಿತಿಯು ವರ್ಷವಿಡೀ ಬಲವಾಗಿರುತ್ತದೆ. ವೃತ್ತಿಯಲ್ಲಿಯೂ ಸಾಕಷ್ಟು ಪ್ರಗತಿ ಕಾಣಲಿದೆ. ಒಂದರ ನಂತರ ಒಂದರಂತೆ ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ. ಸಂಬಳ (Salary) ಮತ್ತು ಲಾಭದ ಹೆಚ್ಚಳದೊಂದಿಗೆ, ಮನೆ ಮತ್ತು ಆಸ್ತಿಯನ್ನು ಖರೀದಿಸಲು ಯೋಜನೆಯನ್ನು ಹಾಕಿಕೊಳ್ಳಬಹುದು. ವರ್ಷದ ಮೊದಲ ಮೂರು ತಿಂಗಳ ಮೊದಲು ವೃತ್ತಿ ಮತ್ತು ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. 

ಇದನ್ನೂ ಓದಿ : Astr Tips For Money: ಈ ರೀತಿ ಮಾಡಿದರೆ ಶ್ರೀಮಂತರಾಗುವ ನಿಮ್ಮ ಕನಸು ನನಸಾಗುತ್ತದೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News