ನವದೆಹಲಿ : ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಹಲವು ಸೌಲಭ್ಯಗಳನ್ನು ನೀಡುತ್ತಿರುತ್ತದೆ. ಕೆಲ ದಿನಗಳಿಂದ ಡಿಜಿಟಲ್ ವಹಿವಾಟಿನ (Digital transaction) ಟ್ರೆಂಡ್ ಹೆಚ್ಚಾಗಿದೆ. ಆದರೆ ಇದರೊಂದಿಗೆ ಸೈಬರ್ ವಂಚನೆ ಕೂಡಾ ಅಧಿಕವಾಗತೊಡಗಿದೆ. ಜನರು ವಂಚನೆಗೆ ಬಲಿಯಾಗುತ್ತಲೆ ಇರುತ್ತಾರೆ.
ಬ್ಯಾಂಕಿಂಗ್ ವಂಚನೆಗಳು ಏಕೆ ಸಂಭವಿಸುತ್ತವೆ?
ಹೆಚ್ಚಿನ ಹಬ್ಬದ ಸೀಸನ್‌ಗಳಲ್ಲಿ ಜನರು ಉಚಿತ ಉಡುಗೊರೆಗಳು ಅಥವಾ ವೋಚರ್‌ಗಳನ್ನು ಪಡೆಯಲು ಉತ್ಸುಕರಾಗಿರುತ್ತಾರೆ. ಹೀಗಿರುವಾಗ, ಉಚಿತ ಉಡುಗೊರೆಗಳ ಸಂದೇಶ ಸ್ವೀಕರಿಸುತ್ತಿದ್ದಂತೆಯೇ, ಜನರು ಅದರಲ್ಲಿ ಆಸಕ್ತಿಯನ್ನು ತೋರಿಸಲು ಪ್ರಾರಂಭಿಸುತ್ತಾರೆ. ಕೆಲವರು ಇಂಥಹ ಸಂದೇಶಗಳನ್ನು ಮುಂದೆ ಹಿಂದೆ ಯೋಚನೆ ಮಾಡದೆ ನಂಬಿ ಬಿಡುತ್ತಾರೆ. ಆದರೆ ಈ ರೀತಿಯ ನಂಬಿಕೆ ನಿಮಗೆ ನಷ್ಟವನ್ನುಂಟು ಮಾಡಬಹುದು. ಈ ಉಚಿತ ಉಡುಗೊರೆಗಳ (free gift voucher) ವ್ಯವಹಾರದಲ್ಲಿ, ಗ್ರಾಹಕರು ನಕಲಿ ಲಿಂಕ್ ಮೇಲೆ ಕ್ಲಿಕ್ ಮಾಡುತ್ತಾರೆ. ಹೀಗೆ ಲಿಂಕ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆಯೇ, ಕಷ್ಟ ಪಟ್ಟು ಸಂಪಾದಿಸಿದ ಗಳಿಕೆ ವಂಚಕರ ಪಾಲಾಗಿ ಬಿಡುತ್ತದೆ. ಈ ನಿಟ್ಟಿನಲ್ಲಿ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ (SBI) ತನ್ನ ಗ್ರಾಹಕರಿಗೆ ಸೈಬರ್ ವಂಚನೆಗಳ (Cyber crime) ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಿದೆ.
ಇದನ್ನೂ ಓದಿ : LIC New Jeevan Shanti Policy : ನಿವೃತ್ತಿಯ ನಂತರ ಹಣಕ್ಕಾಗಿ ಚಿಂತೆಪಡಬೇಕಿಲ್ಲ, ಎಲ್ಐಸಿ ಪರಿಚಯಿಸಿದೆ ಅದ್ಬುತ ಪಾಲಿಸಿ
ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ ಬ್ಯಾಂಕ್ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಟ್ವಿಟ್ಟರ್ ಖಾತೆಯ ಮೂಲಕ ವೀಡಿಯೊವನ್ನು ಬಿಡುಗಡೆ ಮಾಡಿದೆ. ಬ್ಯಾಂಕ್ ವಿವರಗಳು, ಎಟಿಎಂ (ATM) ಮತ್ತು ಯುಪಿಐ ಪಿನ್ (UPI Pin) ಅನ್ನು ಹಂಚಿಕೊಳ್ಳುವಂತೆ ಎಸ್‌ಬಿಐ ಎಂದಿಗೂ ತನ್ನ ಗ್ರಾಹಕರನ್ನು ಕೇಳುವುದಿಲ್ಲ ಎಂದು ಈ ವೀಡಿಯೊದಲ್ಲಿ ಹೇಳಲಾಗಿದೆ. ಆದ್ದರಿಂದ ATM ಅಥವಾ UPI ಪಿನ್ ಕೇಳುವ ಸಂದೇಶಗಳನ್ನು ಸ್ವೀಕರಿಸಿದರೆ ಅಥವಾ ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಕೇಳಿದರೆ, ಅದನ್ನು ನಿರ್ಲಕ್ಷಿಸಬೇಕು.
ಗ್ರಾಹಕರು ಎಚ್ಚರದಿಂದ ಇರಬೇಕು :
- SBI ತನ್ನ ಗ್ರಾಹಕರ ಖಾತೆ ಸಂಖ್ಯೆ, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕೇಳುವುದಿಲ್ಲ.
- ಇಂಟರ್ನೆಟ್ ಬ್ಯಾಂಕಿಂಗ್ ಮತ್ತು OTP ಸಂಖ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
-ಮೊಬೈಲ್ ಫೋನ್ ಅಥವಾ ಸಂದೇಶದಲ್ಲಿರುವ ಯಾವುದೇ ರೀತಿಯ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ.
ಇದನ್ನೂ ಓದಿ : Indian Railways: ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ! ರೈಲುಗಳಲ್ಲಿ ಮತ್ತೆ ಆರಂಭವಾಗಲಿದೆ ಈ ಅಗತ್ಯ ಸೇವೆ
ಸರಿಯಾದ ಸಂದೇಶವನ್ನು ಗುರುತಿಸಿ :
ಸೈಬರ್ ವಂಚಕರು ಕಳುಹಿಸುವ ನಕಲಿ ಸಂದೇಶಗಳನ್ನು ಕಂಡು ಹಿಡಿಯುವುದು ಸುಲಭ. ಏಕೆಂದರೆ ಈ ಸಂದೇಶಗಳಲ್ಲಿ ಕಾಗುಣಿತ ತಪ್ಪುಗಳು ಖಂಡಿತವಾಗಿಯೂ ಇರುತ್ತದೆ. ಹಾಗಗಿ ನೀವು ಸ್ವೀಕರಿಸುವ ಸಂದೇಶಗಳನ್ನು ಎಚ್ಚರಿಕೆಯಿಂದ ಓದಿ. ನಕಲಿ ಲಿಂಕ್ ಗಳ ಬಗ್ಗೆ https://cybercrime.gov.in ನಲ್ಲಿ ದೂರು ಸಲ್ಲಿಸಬಹುದು. ಅಥವಾ ಸಹಾಯವಾಣಿ ಸಂಖ್ಯೆಯಲ್ಲೂ ಈ ಬಗ್ಗೆ ಮಾಹಿತಿ ನೀಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.