PM Kisan : ಈ ದಾಖಲೆಗಳಿಲ್ಲದಿದ್ದರೆ ತಡೆ ಹಿಡಿಯಲಾಗುತ್ತದೆ ಪಿಎಂ ಕಿಸಾನ್ ಕಂತು, ಬದಲಾಗಿದೆ ಸರ್ಕಾರದ ನಿಯಮ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಕೇಂದ್ರ ಸರ್ಕಾರ ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಿದೆ. 

Written by - Ranjitha R K | Last Updated : Nov 18, 2021, 01:06 PM IST
  • ಈ ಯೋಜನೆಯಲ್ಲಿ ರೈತರಿಗೆ ವಾರ್ಷಿಕ 6 ಸಾವಿರ ರೂ.ಗಳನ್ನು ನೀಡಲಾಗುತ್ತದೆ
  • ಶೀಘ್ರವೇ ಸರ್ಕಾರ ಬಿಡುಗಡೆ ಮಾಡಲಿದೆ ಹತ್ತನೇ ಕಂತು
  • ರೈತರಿಗಾಗಿ ಪ್ರಮುಖ ಸುದ್ದಿ ಇದು
PM Kisan : ಈ ದಾಖಲೆಗಳಿಲ್ಲದಿದ್ದರೆ ತಡೆ ಹಿಡಿಯಲಾಗುತ್ತದೆ ಪಿಎಂ ಕಿಸಾನ್ ಕಂತು, ಬದಲಾಗಿದೆ ಸರ್ಕಾರದ ನಿಯಮ title=
ಶೀಘ್ರವೇ ಸರ್ಕಾರ ಬಿಡುಗಡೆ ಮಾಡಲಿದೆ ಹತ್ತನೇ ಕಂತು (file photo)

ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Scheme) ನಿಯಮಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನಡೆಯುತ್ತಿರುವ ವಂಚನೆ ತಡೆಯಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಹೊಸ ನಿಯಮಗಳ ಪ್ರಕಾರ, ರೈತರು ಪಡಿತರ ಚೀಟಿಯೊಂದಿಗೆ (Ration Card) ಇತರ ದಾಖಲೆಗಳನ್ನು ನೀಡಬೇಕು. ಪಡಿತರ ಚೀಟಿ ನೀಡದಿದ್ದರೆ ಪಿಎಂ ಕಿಸಾನ್ ಸಮ್ಮಾನ್ (PM Kisan)ನಿಧಿ ಯೋಜನೆಯ ಕಂತು ಸಿಗುವುದಿಲ್ಲ.

ನೀವು ಈ ದಾಖಲೆಯನ್ನು ಹೊಂದಿರಬೇಕು :
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಕೇಂದ್ರ ಸರ್ಕಾರ ಪಡಿತರ ಚೀಟಿಯನ್ನು (Ration Card Is Mandatory) ಕಡ್ಡಾಯಗೊಳಿಸಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಈಗ ಹೊಸ ನೋಂದಣಿಯನ್ನು ಮಾಡಬೇಕಾದರೆ ಪಡಿತರ ಚೀಟಿ (Ration Card) ಸಂಖ್ಯೆಯನ್ನು ನೀಡುವುದು ಅವಶ್ಯಕವಾಗಿರುತ್ತದೆ. ಪಡಿತರ ಚೀಟಿಯ ಸಾಫ್ಟ್‌ಕಾಪಿಯನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. 

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್, 18 ತಿಂಗಳಿನಿಂದ ತಡೆಹಿಡಿಯಲಾಗಿದ್ದ ತುಟ್ಟಿಭತ್ಯೆ ಬಗ್ಗೆ ನಿರ್ಧಾರ

ಈ ದಾಖಲೆಗಳನ್ನು ಒದಗಿಸುವುದು ಅವಶ್ಯಕ :
ಪಿಎಂ ಕಿಸಾನ್ ಸಮ್ಮಾನ್ ನಿಧಿ (Pm Kisan Nidhi) ಯೋಜನೆಯಡಿ ಪಡಿತರ ಚೀಟಿಯ ಜೊತೆಗೆ ಆಧಾರ್ ಕಾರ್ಡ್‌ನ ಸಾಫ್ಟ್ ಕಾಪಿ, ಬ್ಯಾಂಕ್ ಪಾಸ್‌ಬುಕ್, ಜಮೀನಿನ ಖಾತೆ ಮತ್ತು ಘೋಷಣಾ ಪತ್ರವನ್ನು ಕೂಡಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.  ಈಗ ಈ ದಾಖಲೆಗಳ ಹಾರ್ಡ್‌ಕಾಪಿ ಸಲ್ಲಿಸುವ ಅಗತ್ಯವಿಲ್ಲ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಯುವ ಉದ್ದೇಶದಿಂದ  ರೀತಿಯ ನಿಯಮವನ್ನು ಜಾರಿಗೆ ತರಲಾಗಿದೆ. 

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತು ಯಾವಾಗ ಬರುತ್ತದೆ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pm Kisan nidhi yojana) ಯೋಜನೆಯ 10 ನೇ ಕಂತನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರವು ದಿನಾಂಕವನ್ನು ನಿಗದಿಪಡಿಸಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯಲು ಬಯಸುವುದಾದರೆ, ತಕ್ಷಣವೇ ಈ ಯೋಜನೆಯಡಿ ನೋಂದಾಯಿಸಿಕೊಳ್ಳಿ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan installment) 10 ನೇ ಕಂತನ್ನು  ಡಿಸೆಂಬರ್ 15 2021 ರೊಳಗೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕ 6000 ರೂಗಳನ್ನು ರೈತರ ಖಾತೆಗೆ ವರ್ಗಾಯಿಸುತ್ತದೆ.

ಇದನ್ನೂ ಓದಿ :Save Income Tax : ಈಗಲೇ ಕಾರು ಖರೀದಿಸಿ, ಆದಾಯ ತೆರಿಗೆಯಲ್ಲಿ ಭಾರೀ ರಿಯಾಯಿತಿ ಪಡೆಯಿರಿ! ಹೇಗೆ? ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News