ನವದೆಹಲಿ : ಎಲೆಕ್ಟ್ರಿಕ್ ವಾಹನಗಳು ಪರಿಸರಕ್ಕೆ ಒಳ್ಳೆಯದು ಮಾತ್ರವಲ್ಲ, ಸಾಂಪ್ರದಾಯಿಕ ಇಂಧನ ಚಾಲಿತ ವಾಹನಗಳಿಗಿಂತ ಉತ್ತಮವಾಗಿವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಈಗ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದಾರೆ. ಇಂಧನ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನವನ್ನು ಚಲಾಯಿಸುವುದು ಕಡಿಮೆ ವೆಚ್ಚವಾಗುತ್ತದೆ. ನೀವು ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಬಯಸಿದರೆ, ನೀವು ಆದಾಯ ತೆರಿಗೆಯಲ್ಲಿ ಭಾರಿ ವಿನಾಯಿತಿ ಪಡೆಯಬಹುದು.
ನೀವು ಸಾಲದ ಮೇಲೆ ಭಾರಿ ರಿಯಾಯಿತಿ ಪಡೆಯಬಹುದು
ಆದಾಯ ತೆರಿಗೆ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಕಾರು ಖರೀದಿಸಿದರೆ(Buy Car), ಕಾರು ಐಷಾರಾಮಿ ಉತ್ಪನ್ನದಲ್ಲಿ ಬರುವುದರಿಂದ ಸಾಲದ ಮೇಲೆ ಯಾವುದೇ ತೆರಿಗೆ ವಿನಾಯಿತಿಯನ್ನು ಪಡೆಯುವುದಿಲ್ಲ. ಆದರೆ ಈಗ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರು ಹೊಸ ಸೆಕ್ಷನ್ 80EEB ಅಡಿಯಲ್ಲಿ ಸಾಲಗಳ ಮೇಲೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ವಾಸ್ತವವಾಗಿ, ಭಾರತ ಸರ್ಕಾರವು ಹೊಸ ವಿಭಾಗ 80EEB ಅನ್ನು ಸೇರಿಸಿದೆ, ಇದರಿಂದಾಗಿ ಹೆಚ್ಚು ಹೆಚ್ಚು ಜನರು ಸಾಂಪ್ರದಾಯಿಕ ಇಂಧನ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುತ್ತಾರೆ.
ಇದನ್ನೂ ಓದಿ : Gold Price Today : ಹೊಸ ದಾಖಲೆಯತ್ತ ಚಿನ್ನ ಬೆಲೆ! ಇಂದು ಭಾರಿ ಏರಿಕೆ ಕಂಡ ಬಂಗಾರ!
ನಮ್ಮ ಪಾಲುದಾರ ವೆಬ್‌ಸೈಟ್ DNA ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸೆಕ್ಷನ್ 80EEB ಅಡಿಯಲ್ಲಿ ಸಾಲದ ಮೇಲೆ ಎಲೆಕ್ಟ್ರಿಕ್ ವಾಹನ(Electric Vehicles)ವನ್ನು ಖರೀದಿಸಲು 1.5 ಲಕ್ಷದವರೆಗಿನ ಬಡ್ಡಿ ರಿಯಾಯಿತಿ ಲಭ್ಯವಿರುತ್ತದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳಿಗೆ ಈ ತೆರಿಗೆ ವಿನಾಯಿತಿ ಲಭ್ಯವಿದೆ.
ವಿಭಾಗ 80EEB ಅಡಿಯಲ್ಲಿ ವಿನಾಯಿತಿ ಪಡೆಯಲು ಅರ್ಹರಾಗಲು, ಈ ಕೆಳಗಿನ ಷರತ್ತುಗಳನ್ನು ಪೂರೈಸಬೇಕು:
ಯಾವುದೇ ವ್ಯಕ್ತಿ ಒಮ್ಮೆ ಮಾತ್ರ ಈ ವಿನಾಯಿತಿ(Income Tax Relief)ಯ ಲಾಭವನ್ನು ಪಡೆಯಬಹುದು. ಇದರರ್ಥ ಈ ಮೊದಲು ಎಲೆಕ್ಟ್ರಿಕ್ ವಾಹನವನ್ನು ಹೊಂದಿರದ ವ್ಯಕ್ತಿ ಮಾತ್ರ ಸೆಕ್ಷನ್ 80EEB ಅಡಿಯಲ್ಲಿ ಸಾಲ ವಿನಾಯಿತಿ ಪಡೆಯಬಹುದು.
- ಈ ರಿಯಾಯಿತಿ ಸಾಲದ ಮೇಲೆ ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವ ಜನರಿಗೆ ಮಾತ್ರ. ಎಲೆಕ್ಟ್ರಿಕ್ ವಾಹನಕ್ಕಾಗಿ ಸಾಲವನ್ನು ಹಣಕಾಸು ಸಂಸ್ಥೆ ಅಥವಾ NBFC ಯಿಂದ ತೆಗೆದುಕೊಳ್ಳಬೇಕು.
- ತೆರಿಗೆಯಲ್ಲಿನ ಈ ವಿನಾಯಿತಿಯು ವ್ಯಾಪಾರ(Business)ಕ್ಕಾಗಿ ಇರುವುದಿಲ್ಲ. ಒಬ್ಬ ವ್ಯಕ್ತಿ ಮಾತ್ರ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಬಹುದು.
- 1 ಏಪ್ರಿಲ್ 2019 ರಿಂದ 31 ಮಾರ್ಚ್ 2023 ರ ನಡುವೆ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಸಾಲದ ಮೇಲೆ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಸೆಕ್ಷನ್ 80EEB ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು 2020-2021 ಹಣಕಾಸು ವರ್ಷದಿಂದ ತೆಗೆದುಕೊಳ್ಳಬಹುದು.
ಇದನ್ನೂ ಓದಿ : Smart Driving Licence: ಹಳೆಯ ಪರವಾನಗಿಯನ್ನು ಸ್ಮಾರ್ಟ್ ಡ್ರೈವಿಂಗ್ ಲೈಸೆನ್ಸ್ ಆಗಿ ಪರಿವರ್ತಿಸಲು ಇಲ್ಲಿದೆ 5 ಸುಲಭ ಹಂತಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ