SBI Latest New: SBI ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್, ಡಿಸೆಂಬರ್ 1 ರಿಂದ ವಹಿವಾಟಿಗೆ ಈ ಹೊಸ ಶುಲ್ಕಗಳು ಅನ್ವಯ

SBI Credit Card: ನೀವೂ ಕೂಡ ಒಂದು ವೇಳೆ SBI ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಇದು ನಿಮ್ಮ ಪಾಲಿಗೆ ಬ್ಯಾಡ್ ನ್ಯೂಸ್ ಆಗುವ ಸಾಧ್ಯತೆ ಇದೆ. ಹೌದು, ಇನ್ಮುಂದೆ ನೀವು SBI ನ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ EMI ವಹಿವಾಟುಗಳಿಗೆ (EMI Transactions SBI) ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.

Written by - Nitin Tabib | Last Updated : Nov 13, 2021, 05:29 PM IST
  • SBI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೊಂದು ಶಾಕಿಂಗ್ ನ್ಯೂಸ್.
  • ಈಗ ಗ್ರಾಹಕರು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಲಿದೆ.
  • ಡಿಸೆಂಬರ್ 1 ರಿಂದ EMI ವಹಿವಾಟುಗಳು ದುಬಾರಿಯಾಗಲಿವೆ.
SBI Latest New: SBI ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್, ಡಿಸೆಂಬರ್ 1 ರಿಂದ ವಹಿವಾಟಿಗೆ ಈ ಹೊಸ ಶುಲ್ಕಗಳು ಅನ್ವಯ  title=
SBI Latest Transaction Rule (File Photo)

ನವದೆಹಲಿ:  SBI Latest Transaction Rule - ಎಸ್‌ಬಿಐ ಗ್ರಾಹಕರಿಗೆ ಬ್ಯಾಡ್ ನ್ಯೂಸ್ ವೊಂದು ಪ್ರಕಟಗೊಂಡಿದೆ. ನೀವೂ ಒಂದು ವೇಳೆ SBI ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ಈ ಸುದ್ದಿ ನಿಮಗೆ ಶಾಕ್ ನೀಡಲಿದೆ. ಇನ್ಮುಂದೆ ಎಸ್‌ಬಿಐ ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡುವುದು (SBI Transaction) ಮತ್ತಷ್ಟು ಕಷ್ಟಕರವಾಗಲಿದೆ. ಏಕೆಂದರೆ ಇನ್ಮುಂದೆ ನೀವು SBI ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ EMI ವಹಿವಾಟುಗಳಿಗೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಲಿದೆ.

ಎಸ್‌ಬಿಐ ಕಾರ್ಡ್‌ಗಳು ಮತ್ತು ಪಾವತಿ ಸೇವೆಗಳ ಪ್ರೈವೇಟ್ ಲಿಮಿಟೆಡ್ (SBICPSL) EMI ವಹಿವಾಟುಗಳಿಗೆ, ಕಾರ್ಡ್‌ದಾರರು ಈಗ ರೂ 99 ಸಂಸ್ಕರಣಾ ಶುಲ್ಕ ಮತ್ತು ಅದರ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ. ಅಷ್ಟೇ ಅಲ್ಲ ಈ ಹೊಸ ನಿಯಮವು 1 ಡಿಸೆಂಬರ್ 2021 ರಿಂದ ಜಾರಿಗೆ ಬರಲಿದೆ.

ಇತರ ಸಂಸ್ಕರಣಾ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ
SBICPSL ರಿಟೇಲ್ ಔಟ್‌ಲೆಟ್‌ಗಳು ಮತ್ತು Amazon ಮತ್ತು Flipkart ನಂತಹ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಮಾಡಿದ ಎಲ್ಲಾ EMI ವಹಿವಾಟುಗಳಿಗಾಗಿ SBI ತನ್ನ ಕೋಟಿಗಟ್ಟಲೆ ಗ್ರಾಹಕರಿಂದ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುತ್ತದೆ. ಈ ಶುಲ್ಕಗಳು ಖರೀದಿಯನ್ನು EMI ಆಗಿ ಪರಿವರ್ತಿಸಲು ವಿಧಿಸುವ ಬಡ್ಡಿ ಶುಲ್ಕಗಳಿಗೆ ಹೆಚ್ಚುವರಿಯಾಗಿರುತ್ತದೆ. ಹೊಸ ಶುಲ್ಕದ ಬಗ್ಗೆ ಕಂಪನಿಯು ತನ್ನ ಗ್ರಾಹಕರಿಗೆ ಇಮೇಲ್ ಮೂಲಕ ಮಾಹಿತಿ ನೀಡಿದೆ.

ಇದನ್ನೂ ಓದಿ-Honda New Bike:150CC ಸೆಗ್ಮೆಂಟ್ ಗೆ ಹೊಂಡಾ ಹೊಸ ಬೈಕ್ ಎಂಟ್ರಿ, ಇಲ್ಲಿವೆ ಅದರ ವೈಶಿಷ್ಟ್ಯಗಳು

ಯಾವಾಗ ಮಾಹಿತಿ ನೀಡಲಾಗುವುದು
EMI ಆಗಿ ಪರಿವರ್ತಿಸಲಾದ ವಹಿವಾಟಿನ ಮೇಲೆ ಸಂಸ್ಕರಣಾ ಶುಲ್ಕಗಳು ಅನ್ವಯಿಸುತ್ತವೆ. ಈಗ ಹೊಸ ನಿಯಮದ ಪ್ರಕಾರ, ಡಿಸೆಂಬರ್ 1 ರ ಮೊದಲು ಮಾಡಿದ ಯಾವುದೇ ವಹಿವಾಟಿಗೆ ಈ ಸಂಸ್ಕರಣಾ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. ರಿಟೇಲ್ ಔಟ್‌ಲೆಟ್‌ಗಳಲ್ಲಿ ಖರೀದಿಗಳನ್ನು ಮಾಡುವಾಗ ಕಂಪನಿಯು ಚಾರ್ಜ್ ಸ್ಲಿಪ್‌ಗಳ ಮೂಲಕ EMI ವಹಿವಾಟಿನ (EMI Transactions) ಪ್ರೊಸೆಸಿಂಗ್ ಶುಲ್ಕಗಳ ಬಗ್ಗೆ ಕಾರ್ಡ್‌ ಧಾರಕರಿಗೆ ಮಾಹಿತಿ ನೀಡುತ್ತದೆ.

ಇದನ್ನೂ ಓದಿ-Jan Dhan Account : ಜನ್ ಧನ್ ಖಾತೆ ಖಾತೆದಾರರೇ ಕೂಡಲೇ ಈ ಕೆಲಸ ಮಾಡಿ : ಇಲ್ಲದಿದ್ದರೆ 1 ಲಕ್ಷ 30 ಸಾವಿರ ರೂ. ಕಳೆದುಕೊಳ್ಳಬೇಕಾಗುತ್ತದೆ!

ಈ ನಿಟ್ಟಿನಲ್ಲಿ, ಆನ್‌ಲೈನ್ EMI ವಹಿವಾಟುಗಳಿಗೆ, ಪಾವತಿ ಪುಟದಲ್ಲಿ ಸಂಸ್ಕರಣಾ ಶುಲ್ಕದ ಬಗ್ಗೆ ಕಂಪನಿಯು ಮಾಹಿತಿಯನ್ನು ನೀಡುತ್ತದೆ. ನಿಮ್ಮ EMI ವಹಿವಾಟು ರದ್ದುಗೊಂಡರೆ, ಪ್ರೊಸೆಸಿಂಗ್ ಶುಲ್ಕವನ್ನು ಮರುಪಾವತಿಸಲಾಗುತ್ತದೆ. ಆದರೆ, ಪ್ರೀಕ್ಲೋಜರ್ ಸ್ಥಿತಿಯಲ್ಲಿ ಅದನ್ನು ಮರುಪಾವತಿಸಲಾಗುವುದಿಲ್ಲ. ಇದು ಮಾತ್ರವಲ್ಲದೆ, EMI ಆಗಿ ಪರಿವರ್ತಿಸಲಾದ ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್‌ಗಳು ಅನ್ವಯಿಸುವುದಿಲ್ಲ.

ಇದನ್ನೂ ಓದಿ-ITR ದಾಖಲಿಸುವ ಮೊದಲು AIS ಮೂಲಕ ನಿಮ್ಮ ಎಲ್ಲಾ ಆದಾಯವನ್ನು ಪರಿಸೀಲಿಸಿ, ಇಲ್ಲಿದೆ ವಿಧಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News