ಮುಂಬೈ: ಇತರ ಇಂಧನಗಳಿಗಿಂತ ವಾಹನಗಳಲ್ಲಿ ಎಥೆನಾಲ್ ಬಳಕೆ ಉತ್ತಮ ಆಯ್ಕೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒತ್ತಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಫ್ಲೆಕ್ಸ್ ಇಂಧನ ಎಂಜಿನ್ಗಳನ್ನು ಕಡ್ಡಾಯಗೊಳಿಸಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ. ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ಪೆಟ್ರೋಲ್ ಮತ್ತು ಎಥೆನಾಲ್ನ ಕ್ಯಾಲೋರಿಫಿಕ್ ಮೌಲ್ಯವನ್ನು ಸಮೀಕರಿಸುವ ರಷ್ಯಾದ ತಂತ್ರಜ್ಞಾನವನ್ನು ಉಲ್ಲೇಖಿಸಿದ್ದಾರೆ.
ಎಲ್ಲಾ ಪೆಟ್ರೋಲ್ ಪಂಪ್ಗಳನ್ನು ಎಥೆನಾಲ್ ಪಂಪ್ಗಳಾಗಿ ಪರಿವರ್ತಿಸಲಾಗುವುದು:
ಫ್ಲೆಕ್ಸ್ ಇಂಧನ (Flex Fuel) - ಗ್ಯಾಸೋಲಿನ್, ಮೆಥನಾಲ್ ಅಥವಾ ಎಥೆನಾಲ್ ಸಂಯೋಜನೆಯಿಂದ ಮಾಡಿದ ಪರ್ಯಾಯ ಇಂಧನವಾಗಿದೆ. ಇದು ಸಂಭವಿಸಿದಲ್ಲಿ, ಎಲ್ಲಾ ಪೆಟ್ರೋಲ್ ಪಂಪ್ಗಳನ್ನು ಎಥೆನಾಲ್ ಪಂಪ್ಗಳೊಂದಿಗೆ ಬದಲಾಯಿಸಬಹುದು ಎಂಬ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸುಳಿವು ನೀಡಿದ್ದಾರೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪಶ್ಚಿಮ ಮಹಾರಾಷ್ಟ್ರದಲ್ಲಿ 100 ಪ್ರತಿಶತ ಎಥೆನಾಲ್ನಲ್ಲಿ ಚಲಿಸುವ ಆಟೋ ರಿಕ್ಷಾಗಳಿಗೆ ಅನುಮತಿ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದರು. ಅದೇ ಸಮಯದಲ್ಲಿ, 2025 ರ ವೇಳೆಗೆ 20 ಪ್ರತಿಶತದಷ್ಟು ಡೋಪಿಂಗ್ (ಪೆಟ್ರೋಲ್ನೊಂದಿಗೆ ಎಥೆನಾಲ್ನ ಕಲಬೆರಕೆ ಮಟ್ಟ) ಸಾಧಿಸುವ ಗುರಿಯ ಭಾಗವಾಗಿ ಡಿಸೆಂಬರ್ನಿಂದ ಪ್ರಾರಂಭವಾಗುವ 2021-22 ಮಾರುಕಟ್ಟೆ ವರ್ಷಕ್ಕೆ ಕಬ್ಬಿನಿಂದ ಎಥೆನಾಲ್ ಅನ್ನು ಪೆಟ್ರೋಲ್ಗೆ ಮಿಶ್ರಣ ಮಾಡಲು ಕೇಂದ್ರ ಸರ್ಕಾರವು ಬುಧವಾರ ಅನುಮೋದಿಸಿದೆ. ಪ್ರತಿ ಲೀಟರ್ಗೆ 1.47 ರೂ.ವರೆಗೆ ಏರಿಕೆಯಾಗಿದೆ.
ಇದನ್ನೂ ಓದಿ- PM Kisan: ದ್ವಿಗುಣಗೊಳ್ಳಲಿದೆಯೇ ಪಿಎಂ ಕಿಸಾನ್ ಹಣ? ನಿಮ್ಮ ಕಂತಿನ ಸ್ಥಿತಿಯನ್ನು ಈ ರೀತಿ ಪರಿಶೀಲಿಸಿ
ಈ ಕಂಪನಿಗಳು ಸಿದ್ಧತೆಗಳನ್ನು ಮಾಡಿಕೊಂಡಿವೆ:
ಪೆಟ್ರೋಲ್ನಲ್ಲಿ (Petrol) ಎಥೆನಾಲ್ನ ಹೆಚ್ಚಿನ ಮಿಶ್ರಣವು ಭಾರತ ತನ್ನ ತೈಲ ಆಮದು ವೆಚ್ಚವನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕಬ್ಬು ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಪ್ರಯೋಜನವನ್ನು ನೀಡುತ್ತದೆ. ವಾಹನ ತಯಾರಕ ಕಿರ್ಲೋಸ್ಕರ್ ಮತ್ತು ಟೊಯೊಟಾದ ಪ್ರತಿನಿಧಿಗಳೊಂದಿಗಿನ ಇತ್ತೀಚಿನ ಸಭೆಯನ್ನು ಉಲ್ಲೇಖಿಸಿದ ಗಡ್ಕರಿ, "ಅವರು ಫ್ಲೆಕ್ಸ್ (ಫ್ಲೆಕ್ಸಿಬಲ್) ಎಂಜಿನ್ಗಳೊಂದಿಗೆ ಕಾರುಗಳನ್ನು ವಿನ್ಯಾಸಗೊಳಿಸಿದ್ದಾರೆ. ಫ್ಲೆಕ್ಸ್ ಎಂಜಿನ್ ಎಂದರೆ ಇದರಲ್ಲಿ ಶೇ.100ರಷ್ಟು ಪೆಟ್ರೋಲ್ ಅಥವಾ ಎಥೆನಾಲ್ ಬಳಸಬಹುದಾಗಿದೆ. ಇದನ್ನು ಯುರೋ 6 ಮಾನದಂಡಗಳ ಪ್ರಕಾರ ಮಾಡಲಾಗಿದೆ. ಫ್ಲೆಕ್ಸ್ ಎಂಜಿನ್ ಅನ್ನು ಕಡ್ಡಾಯಗೊಳಿಸುವುದರಿಂದ ಏರುತ್ತಿರುವ ಪೆಟ್ರೋಲ್ ಬೆಲೆಯಿಂದ ಸಾರ್ವಜನಿಕರಿಗೆ ಪರಿಹಾರ ಸಿಗಬಹುದು ಎಂದರು.
ಇದನ್ನೂ ಓದಿ- ATM ಎಂಬ ಕಲ್ಪನೆ ಹೇಗೆ ಬಂದಿದ್ದು ಗೊತ್ತಾ? ಅದಕ್ಕೆ ಸಂಬಂಧಿಸಿದ ಕೆಲವು ಇಂಟೆರೆಸ್ಟಿಂಗ್ ಸ್ಟೋರಿ ಇಲ್ಲಿದೆ
ಪೆಟ್ರೋಲ್ ಬಳಸಬೇಡಿ!
ಪೆಟ್ರೋಲ್ ಬಳಸಬೇಡಿ. ಏರುತ್ತಿರುವ ಇಂಧನ ಬೆಲೆಗಳ ಬಗ್ಗೆ ನೀವು ಆಂದೋಲನ ಮಾಡುವ ಅಗತ್ಯವಿಲ್ಲ. ಎಥೆನಾಲ್ ಬೆಲೆ 62 ರೂಪಾಯಿ ಮತ್ತು ಇದು ಆಮದು ಬದಲಿಯಾಗಿದೆ ಮತ್ತು ಇದು ವೆಚ್ಚ ಪರಿಣಾಮಕಾರಿ ಮತ್ತು ಮಾಲಿನ್ಯ ಮುಕ್ತವಾಗಿದೆ. ವಾಹನಗಳಿಗೆ ಹಸಿರು ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ದೆಹಲಿಯಲ್ಲಿ ಹಸಿರು ಹೈಡ್ರೋಜನ್ ಕಾರು ಬಳಸಲಾಗುವುದು ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ