Benefits Of Being Single - ಹೆಚ್ಚಿನ ಯುವಕರು ಯಾರೊಂದಿಗಾದರೂ ಅಥವಾ ಇನ್ನೊಬ್ಬರೊಂದಿಗೆ ಸಂಬಂಧವನ್ನು ಹೊಂದಲು ಬಯಸುತ್ತಾರೆ ಮತ್ತು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಬಯಸುತ್ತಾರೆ, ಆದರೆ ಜೀವನದಲ್ಲಿ ಒಂಟಿಯಾಗಿರುವುದರಿಂದ (Benefits Of Living Bachelor) ಅನೇಕ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ.
Benefits Of Being Single - ಹೆಚ್ಚಿನ ಯುವಕರು ಯಾರೊಂದಿಗಾದರೂ ಅಥವಾ ಇನ್ನೊಬ್ಬರೊಂದಿಗೆ ಸಂಬಂಧವನ್ನು ಹೊಂದಲು ಬಯಸುತ್ತಾರೆ ಮತ್ತು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಬಯಸುತ್ತಾರೆ, ಆದರೆ ಜೀವನದಲ್ಲಿ ಒಂಟಿಯಾಗಿರುವುದರಿಂದ (Benefits Of Living Bachelor) ಅನೇಕ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ನೀವೂ ಕೂಡ ಒಂಟಿಯಾಗಿರುವ (Single) ಕಾರಣ ನಿರಾಶರಾಗಿದ್ದರೆ, ತಕ್ಷಣ ಈ ನಿರಾಶೆ ಭ್ವಾವನೆಯನ್ನು ಬಿಟ್ಟುಬಿಡಿ. ಒಂಟಿಯಾಗಿರುವುದು ನಿಮ್ಮನ್ನು ಬಾಂಧವ್ಯದ ಭಾವನೆ ಮೂಡಿಸುವ ಹಲವು ವಿಷಯಗಳಿಂದ ದೂರವಿರಿಸುತ್ತದೆ. ಒಂಟಿಯಗಿರುವುದರ (Living Single) ಇತರ ಪ್ರಯೋಜನಗಳು ಯಾವುವು ತಿಳಿದುಕೊಳ್ಳೋಣ ಬನ್ನಿ .
ಇದನ್ನೂ ಓದಿ-Viral News: 30 ವರ್ಷಗಳಿಂದ ಹೇರ್ ಕಟ್ ಮಾಡಿಲ್ಲ, ಈ ಮಹಿಳೆಗೆ ಏನಾಗಿದೆ ನೋಡಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಆಕ್ಷೇಪಿಸುವವರು ಯಾರು ಇರಲ್ಲ - ನೀವು ಒಂಟಿಯಾಗಿದ್ದರೆ ನಿಮ್ಮ ಇಚ್ಛೆಯಂತೆ ಜೀವನ ನಡೆಸಬಹುದು. ಬೇರೆ ಯಾರೂ ನಿಮ್ಮನ್ನು ತಡೆಯುವುದಿಲ್ಲ. ನಿಮಗೆ ಬೇಕಾದ ಕೆಲಸವನ್ನು ನೀವು ಮಾಡಬಹುದು.
2. ಸ್ನೇಹಿತರ ಜೊತೆಗೆ ಸಿಕ್ಕಾಪಟ್ಟೆ ಪಾರ್ಟಿ ಮಾಡಬಹುದು - ನೀವು ಒಂಟಿಯಾಗಿದ್ದರೆ, ನಿಮ್ಮ ಸ್ನೇಹಿತರೊಂದಿಗೆ ನೀವು ಸಿಕ್ಕಾಪಟ್ಟೆ ಪಾರ್ಟಿ ಮಾಡಬಹುದು. ಏಕೆಂದರೆ ನಿಮ್ಮ ಸಂಗಾತಿಗೆ ನೀವು ಸಮಯ ನೀಡಬೇಕು ಎಂದು ನೀವು ಯೋಚಿಸಬೇಕಾಗಿಲ್ಲ ಅಥವಾ ಸಂಗಾತಿ ಪದೇ ಪದೇ ಕರೆ ಮಾಡಿ ತೊಂದರೆ ಕೊಡುವುದಿಲ್ಲ.
3. ಯಾವಾಗ ಬೇಕಾದರೂ ಒಂಟಿ ಪ್ರಯಾಣ ಬೆಳೆಸಬಹುದು - ನೀವು ಒಬ್ಬಂಟಿಯಾಗಿರುವಾಗ, ನೀವು ಮಾಡುವ ಯೋಜನೆಯನ್ನು ಎಲ್ಲೋ ರದ್ದುಗೊಳಿಸಬಾರದು ಎಂದು ನೀವು ಯೋಚಿಸಬೇಕಾಗಿಲ್ಲ. ನಿಮಗೆ ಬೇಕಾದಾಗ, ನಿಮ್ಮ ಬ್ಯಾಗ್ ಎತ್ತಿಕೊಂಡು ಏಕಾಂಗಿ ಪ್ರವಾಸಕ್ಕೆ ಹೋಗಿ ಎಂಜಾಯ್ ಮಾಡಿ, ಯಾರೂ ನಿಮ್ಮನ್ನು ತಡೆಯುವುದಿಲ್ಲ.
4. ಮನಸ್ಸಿಗೆ ಹಿಡಿಸಿದ ಆಹಾರ ಸೇವಿಸಬಹುದು - ನೀವು ಒಂಟಿಯಾಗಿದ್ದರೆ ನಿಮ್ಮ ನೆಚ್ಚಿನ ಆಹಾರವನ್ನು ನೀವು ತಿನ್ನಬಹುದು. ಏಕೆಂದರೆ ನೀವು ಸ್ಲಿಮ್ ಆಗಿರಬೇಕು, ಟ್ರಿಮ್ ಆಗಿರಬೇಕು ಎಂಬ ಒತ್ತಡ ನಿಮ್ಮ ಮೇಲೆ ಇರುವುದಿಲ್ಲ. ನೀವು ಜಂಕ್ ಫುಡ್ ಅನ್ನು ಇಷ್ಟಪಡುತ್ತಿದ್ದರೆ ಅದನ್ನು ತಿನ್ನುವುದರಿಂದ ನಿಮ್ಮನ್ನು ಯಾರೂ ತಡೆಯುವುದಿಲ್ಲ. ಆದರೆ , ಜಂಕ್ ಫುಡ್‌ನಿಂದ ದೂರವಿರುವುದು ಎಂದಿಗೂ ಉತ್ತಮ.
5. ಟಿವಿ ಮೇಲೆ ನಿಮ್ಮಿಷ್ಟದ ಕಾರ್ಯಕ್ರಮ ವಿಕ್ಷೀಸಬಹುದು - ಹೆಚ್ಚಿನ ಜನರು ತಮ್ಮ ಸಂಗಾತಿಯೊಂದಿಗೆ ತಮ್ಮ ನೆಚ್ಚಿನ ಕಾರ್ಯಕ್ರಮವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಅನೇಕ ಬಾರಿ ಅವರು ತಮ್ಮ ಸಂಗಾತಿಯ ಆಯ್ಕೆಯ ಕಾರ್ಯಕ್ರಮವನ್ನು ತಾವು ಬಯಸದಿದ್ದರೂ ಸಹ ವೀಕ್ಷಿಸಬೇಕಾಗುತ್ತದೆ, ಆದರೆ ನೀವು ಒಬ್ಬಂಟಿಯಾಗಿರುವಾಗ, ನೀವು ಈ ಸಮಸ್ಯೆಯಿಂದ ಪಾರಾಗಬಹುದು.
6. ನಿಮ್ಮಿಷ್ಟದ ಬಟ್ಟೆಗಳನ್ನು ಧರಿಸಬಹುದು - ಹಲವು ಬಾರಿ ನಾವು ಇಷ್ಟಪಡುವ ಬಟ್ಟೆಗಳು ನಮ್ಮ ಸಂಗಾತಿಗೆ ಇಷ್ಟವಾಗುವುದಿಲ್ಲ. ಅವಳು ತನ್ನ ಆಯ್ಕೆಯ ಬಟ್ಟೆಗಳನ್ನು ಧರಿಸಲು ನಮ್ಮನ್ನು ಒತ್ತಾಯಿಸುತ್ತಾಳೆ ಅಥವಾ ಅಣಿಮಾಡುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಒಂಟಿಯಾಗಿದ್ದರೆ, ನಿಮ್ಮ ನೆಚ್ಚಿನ ಬಟ್ಟೆಗಳನ್ನು ಧರಿಸಿ ಮತ್ತು ನಿಮ್ಮ ಇಚ್ಛೆಯಂತೆ ಕೇಶವಿನ್ಯಾಸವನ್ನು ಇರಿಸಿಕೊಳ್ಳಿ. ಯಾರೂ ಏನನ್ನೂ ಹೇಳುವುದಿಲ್ಲ.