Happy Birthday Anushka: ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿಗೆ ಯಾವುದೇ ಪರಿಚಯದ ಅಗತ್ಯ ಇಲ್ಲ. ಇಂದು ಬಾಹುಬಲಿ ಚಿತ್ರದಲ್ಲಿ ದೇವಸೇನಾ ಪಾತ್ರದಲ್ಲಿ ನಟಿಸಿದ್ದ ನಟಿ ಅನುಷ್ಕಾ (Ahushka Shetty Birthday) ಹುಟ್ಟುಹಬ್ಬ. 7 ನವೆಂಬರ್ 1981 ರಂದು ಮಂಗಳೂರು ನಗರದಲ್ಲಿ ಜನಿಸಿದ ಅನುಷ್ಕಾ 2005 ರಿಂದ ಇಲ್ಲಿಯವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತೆಲುಗಿನ ‘ಸೂಪರ್’ ಚಿತ್ರದ ಮೂಲಕ ತಮ್ಮ ಸಿನಿಜೀವನ ಆರಂಭಿಸಿದ ಈ ನಟಿ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದು ನಾವು ನಿಮಗೆ ಬಾಹುಬಲಿಯ ದೇವಸೇನಾಗೆ ಸಂಬಂಧಿಸಿದ ಕೆಲವು ವೈಯಕ್ತಿಕ ಮತ್ತು ಕೇಳಿರದ ಸಂಗತಿಗಳನ್ನು ಹೇಳುತ್ತೇವೆ, ಅದನ್ನು ಕೇಳಲು ನೀವು ಸಹ ಆಶ್ಚರ್ಯಪಡುವಿರಿ.
ಬಾಹುಬಲಿಯ ' ದೇವಸೇನಾಳ' ಮೊದಲ ಪ್ರೀತಿ
ದಕ್ಷಿಣ ಚಿತ್ರರಂಗದ ಹಲವು ಸೂಪರ್ ಸ್ಟಾರ್ ಗಳ ಜೊತೆಗೆ ಅನುಷ್ಕಾ ಶೆಟ್ಟಿ (Anushka Shetty) ನಟಿಸಿದ್ದಾರೆ. ಬಾಹುಬಲಿ ಖ್ಯಾತಿಯ ಪ್ರಭಾಸ್ (Prabhas) ಜೊತೆಗಿನ ಅವರ ಒಡನಾಟದ ಕುರಿತು ಕೂಡ ಹಲವು ವದಂತಿಗಳಿವೆ. ಆದರೆ ಅನುಷ್ಕಾ ಅವರ ಮೊದಲ ಪ್ರೀತಿ ಓರ್ವ ನಟನಾಗಿಲ್ಲ ಎಂದು ಹೇಳಿದರೆ ನಿಮಗೂ ಆಶ್ಚರ್ಯವಾದೀತು. ಏಕೆಂದರೆ ಆತ ಓರ್ವ ಭಾರತೀಯ ಅದರಲ್ಲೂ ವಿಶೇಷವಾಗಿ ಓರ್ವ ಕನ್ನಡದ ಖ್ಯಾತ ಕ್ರಿಕೆಟಿಗ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಇದನ್ನೂ ಓದಿ-Janhvi Kapoor: ಸಹೋದರಿಯೊಂದಿಗೆ ಜಾಹ್ನವಿ ಕಪೂರ್ ಹಾಟ್ ಪೋಸ್, ನೆಟಿಜನ್ಗಳಿಂದ ಟ್ರೋಲ್..!
ಹೌದು, ಈ ಕುರಿತು ಸಂದರ್ಶನವೊಂದರಲ್ಲಿ ಖುದ್ದು ಮಾಹಿತಿ ನೀಡಿದ್ದ ಅನುಷ್ಕಾ ಶೆಟ್ಟಿ ತಮ್ಮ ಮೊದಲ ಕ್ರಷ್ ಓರ್ವ ಕ್ರಿಕೆಟಿಗ ಎಂದು ಹೇಳಿದ್ದರು. ಈ ಕುರಿತು ಸಂದರ್ಶನದಲ್ಲಿ ವಿಷಯ ಬಹಿರಂಗಪಡಿಸಿದ್ದ ಅನುಷ್ಕಾ (Anushka Shetty) ಭಾರತೀಯ ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ಅದರಲ್ಲೂ ವಿಶೇಷವಾಗಿ ನಮ್ಮ ಕನ್ನಡಿಗ, 'ದಿ ವಾಲ್' ಎಂದೇ ಖ್ಯಾತ ರಾಹುಲ್ ದ್ರಾವಿಡ್ (Rahul Dravid) ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರನಾಗಿರುವುದರ ಜೊತೆಗೆ ತಮ್ಮ ಮೊದಲ ಕ್ರಷ್ ಕೂಡ ಆಗಿದ್ದಾರೆ ಎಂದಿದ್ದರು. ಅಷ್ಟೇ ಅಲ್ಲ ಒಂದು ಸಮಯದಲ್ಲಿ ತಮಗೆ ರಾಹುಲ್ ಮೇಲೆ ಪ್ರೀತಿ ಕೂಡ ಹುಟ್ಟಿತ್ತು ಎಂದು ಹೇಳಿದ್ದರು. ಆದರೆ ಅದುವರೆಗೆ ಈ ಇಬ್ಬರು ಪರಸ್ಪರ ಎಂದಿಗೂ ಕೂಡ ಭೇಟಿಯೇ ಆಗಿರಲಿಲ್ಲ .
ವರ್ಷ 2015ರಲ್ಲಿ ಅನುಷ್ಕಾ ಶೆಟ್ಟಿಗೆ ಸಂಬಂಧಿಸಿದೆ ಎನ್ನಲಾದ MMSವೊಂದು ಭಾರಿ ವೈರಲ್ ಆಗಿತ್ತು. ಈ ವಿಡಿಯೋ ಅನುಷ್ಕಾ ಶೆಟ್ಟಿ ವಿಡಿಯೋ ಆಗಿದೆ ಎನ್ನಲಾಗಿತ್ತು. ಬಳಿಕ ಈ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಅನುಷ್ಕಾ, MMSನಲ್ಲಿ ಕಾಣಿಸಿಕೊಂಡಿರುವ ಯುವತಿ ಯಾರು ತಮಗೆ ಗೊತ್ತಿಲ್ಲ. ಆದರೆ, ಅದು ತಾನು ಖಂಡಿತ ಅಲ್ಲ ಎಂದಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಈ MMS ಭಾರಿ ಹಂಗಾಮಾ ಸೃಷ್ಟಿಸಿತ್ತು.
ಇದನ್ನೂ ಓದಿ-Puneeth Rajkumar : ಪುನೀತ್ ರಾಜ್ಕುಮಾರ್ ನಿಧನ: ರಾಜ್ಯದಲ್ಲಿ ನೇತ್ರದಾನಿಗಳ ಸಂಖ್ಯೆ ಹೆಚ್ಚಳ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ