Exercise ಮಾಡುವುದರಿಂದ ಈ ಕೆಟ್ಟ ಚಟ ದೂರಾಗುತ್ತದೆ, ಈ ಕೆಲಸದಿಂದ ದೂರಾಗುತ್ತದೆ ಟೆನ್ಶನ್

Alcohol Use Disorder - ಮದ್ಯ ವ್ಯಸನ (Alcohol Addiction)ಯುವಜನರಲ್ಲಿ ಗಂಭೀರ ಸಮಸ್ಯೆಗೆ ಕಾರಣವಾಗುತ್ತಿದೆ. ಈ ಕುರಿತಾದ ಸಮೀಕ್ಷೆಯೊಂದರಲ್ಲಿ ಮದ್ಯಪಾನದ ಚಟಕ್ಕೆ ಗುರಿಯಾದ ಯುವಕರನ್ನು ಶಾಮೀಳುಗೊಳಿಸಿ, ಈ ಚಟವನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತು ಅಧ್ಯಯನ ನಡೆಸಲಾಗಿದೆ.

Written by - Nitin Tabib | Last Updated : Oct 31, 2021, 08:38 PM IST
  • ಮದ್ಯ ವ್ಯಸನದ ಹಿಡಿತದಲ್ಲಿ ಯುವಕರು
  • ವ್ಯಾಯಾಮದ ಪ್ರಯೋಜನಗಳು
  • ಸೃಜನಾತ್ಮಕ ಕೆಲಸವು ಒತ್ತಡದಿಂದ ಮುಕ್ತಿ ನೀಡುತ್ತದೆ
Exercise ಮಾಡುವುದರಿಂದ ಈ ಕೆಟ್ಟ ಚಟ ದೂರಾಗುತ್ತದೆ, ಈ ಕೆಲಸದಿಂದ ದೂರಾಗುತ್ತದೆ ಟೆನ್ಶನ್ title=
Alcohol Use Disorder (File Photo)

ಲೋಬೋರೋ: Alcohol Addiction - ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಮದ್ಯಪಾನವನ್ನು (Alcohol) ಸಾಮಾಜಿಕವಾಗಿ ಸ್ವೀಕರಿಸಲಾಗಿದೆ, ಇದರಿಂದಾಗಿ ಮದ್ಯದ ಅತಿಯಾದ ಸೇವನೆಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಗಂಭೀರ ಸಮಸ್ಯೆಯಾಗಿದೆ (Alcohol Use Disorder). ಒಂದು ಅಧ್ಯಯನದ ಪ್ರಕಾರ 45-69 ಶೇಕಡಾ UK ವಿದ್ಯಾರ್ಥಿಗಳು ವಾರದಲ್ಲಿ ಒಂದು ದಿನ ಪಾನೀಯಕ್ಕಾಗಿ ಪಾರ್ಟಿ ಮಾಡುತ್ತಾರೆ. ಲೌಬರೋ ವಿಶ್ವವಿದ್ಯಾನಿಲಯದ ಇಫ್ ಹೋಗಾರ್ವೋಸ್ತ್ರ್ ಮತ್ತು ಅಲೆಕ್ಸಾಂಡ್ರಾ ಗವೋರ್ ಅವರು ವ್ಯಾಯಾಮ ಮಾಡುವ ವಿದ್ಯಾರ್ಥಿಗಳು ಕಡಿಮೆ ಆಲ್ಕೊಹಾಲ್ ಚಟವನ್ನು ಹೊಂದಿರುತ್ತಾರೆ ಎಂದು ಅಧ್ಯಯನದಲ್ಲಿ ಕಂಡುಹಿಡಿದಿದ್ದಾರೆ. ಇದರೊಂದಿಗೆ ಅವರು ಹೆಚ್ಚು ಸಕಾರಾತ್ಮಕ ಭಾವನೆಯನ್ನು ಅನುಭವಿಸುತ್ತಾರೆ ಎಂಬುದನ್ನು ಕೂಡ ಪತ್ತೆಹಚ್ಚಿದ್ದಾರೆ. 

ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳನ್ನು ಇರಿಸಲಾಗಿತ್ತು
ವಿದ್ಯಾರ್ಥಿಗಳಲ್ಲಿ ಆಲ್ಕೋಹಾಲ್ ಚಟವನ್ನು ಕಡಿಮೆ ಮಾಡಲು, ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಶ್ನಾವಳಿಯ ಆಧಾರದ ಮೇಲೆ ಅಪಾಯಕಾರಿ ಮತ್ತು ವ್ಯಸನಿಗಳೆಂದು ವರ್ಗೀಕರಿಸಲಾದ 18-25 ವರ್ಷ ವಯಸ್ಸಿನ 60 ವಿದ್ಯಾರ್ಥಿಗಳನ್ನು ಅಧ್ಯಯನವು ಕಂಡುಹಿಡಿದಿದೆ. ಅಧ್ಯಯನದಲ್ಲಿ, ವಿದ್ಯಾರ್ಥಿಗಳು ತಮ್ಮ ಕುಡಿಯುವ ಅಭ್ಯಾಸದ ಬಗ್ಗೆ, ಅವರ ಮದ್ಯದ ಆಯ್ಕೆಯ ಬಗ್ಗೆ ಪ್ರಶ್ನಿಸಲಾಗಿದೆ ಮತ್ತು ನಂತರ ಅವರಿಗೆ ಕುಡಿಯುವ ಬಯಕೆಯನ್ನು ಹೆಚ್ಚಿಸಲು ಬಾರ್ ಮತ್ತು ಕಾಕ್ಟೈಲ್‌ನ ವೀಡಿಯೊವನ್ನು ತೋರಿಸಲಾಗಿದೆ. ಈ ಪ್ರಯೋಗವು ಮದ್ಯಪಾನ ಮಾಡುವ ಬಯಕೆಯನ್ನು ಹೆಚ್ಚಿಸುತ್ತದೆಯೇ ಎಂದು ಕಂಡುಹಿಡಿಯಲು, ಪ್ರಶ್ನಾವಳಿಯನ್ನು ಸಿದ್ಧಪಡಿಸಲಾಗಿತ್ತು. 

ಇದನ್ನೂ ಓದಿ-Ghee In Milk Health Benefits: ಹಾಲಿನಲ್ಲಿ ತುಪ್ಪ ಬೆರೆಸಿ ಸೇವಿಸುವುದರಿಂದಾಗುವ ಈ ಲಾಭಗಳು ನಿಮಗೆ ತಿಳಿದಿವೆಯೇ?

ಈ ರೀತಿಯ ಪ್ರಶ್ನೆಗಳನ್ನು ಶಾಮೀಲುಗೊಳಿಸಲಾಗಿತ್ತು
ಆದರೆ, ಇದು ಸಂಭವಿಸುತ್ತದೆ ಎಂದು ಅಧ್ಯಯನದ ಫಲಿತಾಂಶಗಳು ತೋರಿಸಿವೆ. ವಿದ್ಯಾರ್ಥಿಗಳಿಗೆ ಐದು ನಿಮಿಷದಲ್ಲಿ ವಿವಿಧ ರೀತಿಯ ವ್ಯಾಯಾಮಗಳನ್ನು (Exercise) ಮಾಡುವ ಕಾರ್ಯಕ್ರಮವನ್ನು (Alcohol Addiction Treatment)6 ಆಯೋಜಿಸಿ,  ನಂತರ ಅವರ ಮುಂದೆ ವೀಡಿಯೋ ತೋರಿಸಿ ಪ್ರಶ್ನಾವಳಿಯನ್ನು ಇಡಲಾಯಿತು. ಇದಾದ ನಂತರ 45 ಸೆಕೆಂಡುಗಳ ಕಾಲ ವ್ಯಾಯಾಮ ಮಾಡಲು ಕೇಳಲಾಯಿತು. ಇದಕ್ಕಾಗಿ ಒಟ್ಟು ಎರಡು ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಲಾಗಿತ್ತು, ಅದರಲ್ಲಿ ಒಬ್ಬರಿಗೆ ಚಿತ್ರಗಳಿಗೆ ಬಣ್ಣ ಹಾಕುವ ಕೆಲಸವನ್ನು ನೀಡಲಾಯಿತು ಮತ್ತು ಇನ್ನೊಂದಕ್ಕೆ ಯಾವುದೇ ಕೆಲಸವನ್ನು ನೀಡಲಿಲ್ಲ. ಮೂರು ಗುಂಪುಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಮದ್ಯದ ಬಯಕೆ, ಮನಸ್ಥಿತಿ ಮತ್ತು ಸಂಕಟದ ನಂತರದ ಪ್ರಶ್ನಾವಳಿಗಳಿಗೆ ಉತ್ತರಿಸಿದ್ದಾರೆ. 

ಇದನ್ನೂ ಓದಿ-Carrot Benefits: ಚಳಿಗಾಲದಲ್ಲಿ ಗಜ್ಜರಿ ಸೇವನೆಯಿಂದಾಗುವ ಈ ಲಾಭಗಳು ನಿಮಗೂ ತಿಳಿದಿರಲಿ

ರಚನಾತ್ಮಕ ರೀತಿಯಲ್ಲಿ ಟೆನ್ಶನ್ ದೂರಾಗುತ್ತದೆ
ವ್ಯಾಯಾಮದ ಗುಂಪಿನಲ್ಲಿರುವ ವಿದ್ಯಾರ್ಥಿಗಳು ಚಿತ್ರಗಳನ್ನು ಚಿತ್ರಿಸುವ ಅಥವಾ ಚಿತ್ರಗಳಲ್ಲಿ ಏನನ್ನೂ ಮಾಡದವರಿಗಿಂತ ಮದ್ಯಪಾನ ಮಾಡುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಣೆಯು ಕಂಡುಹಿಡಿದಿದೆ. ವ್ಯಾಯಾಮ ಮಾಡಿದ ವಿದ್ಯಾರ್ಥಿಗಳು ಸಹ ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿದ್ದರು ಮತ್ತು ಕಡಿಮೆ ಆತಂಕವನ್ನು ಹೊಂದಿದ್ದರು. ಐದು ನಿಮಿಷಗಳ ವ್ಯಾಯಾಮ ಕೂಡ ನಿಮ್ಮ ಆರೋಗ್ಯವನ್ನು ಸುಧಾರಿಸುವ ಮತ್ತು ಆಲ್ಕೋಹಾಲ್ ಕುಡಿಯುವ ನಿಮ್ಮ ಪ್ರಚೋದನೆಯನ್ನು ಕಡಿಮೆ ಮಾಡುತ್ತದೆ ಎಂದು ಇದು ಸೂಚಿಸುತ್ತದೆ. ಚಿತ್ರಗಳನ್ನು ಬಿಡಿಸಿದ ವಿದ್ಯಾರ್ಥಿಗಳು ಉತ್ತಮ ಮನಸ್ಥಿತಿಯನ್ನು ಹೊಂದಿದ್ದರು ಮತ್ತು ಸಂತೋಷದಿಂದ ಇರುವುದನ್ನು ಗಮನಿಸಲಾಗಿದೆ.  ಸೃಜನಾತ್ಮಕ ಕೆಲಸಗಳನ್ನು ಮಾಡುವುದರಿಂದ ಒತ್ತಡ ಕಡಿಮೆಯಾದರೂ, ಮದ್ಯ ಸೇವಿಸುವ ಬಯಕೆಯ ಕಡಿತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ಗಮನಿಸಲಾಗಿದೆ.

ಇದನ್ನೂ ಓದಿ-Ghee Benefits: ಬೆಳಿಗ್ಗೆ ಎದ್ದು ಕೇವಲ ಒಂದು ಚಮಚ ತುಪ್ಪವನ್ನು ತಿನ್ನಿರಿ, ಅದ್ಭುತ ಚಮತ್ಕಾರ ನೋಡಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News