Pee Power: ಫೋನ್ ಅನ್ನು ಚಾರ್ಜ್ ಮಾಡಲು ಅಥವಾ ಟಿವಿಯನ್ನು ಚಲಾಯಿಸಲು ನಿಮಗೆ ಇನ್ನು ಮುಂದೆ ವಿದ್ಯುತ್ ಅಗತ್ಯವಿಲ್ಲ. ನಿಮ್ಮ ಮೂತ್ರದಿಂದ (Pee Power) ವಿದ್ಯುಚ್ಛಕ್ತಿಯನ್ನು (Electricity) ಉತ್ಪಾದಿಸುವ ಮೂಲಕ, ನೀವು ಮನೆಯಲ್ಲಿ ನಿಮಗೆ ಬೇಕಾದಷ್ಟು ವಿದ್ಯುತ್ ಉತ್ಪಾದಿಸಲು ಸಾಧ್ಯವಾಗಲಿದೆ.
ಯಶಸ್ವಿಯಾದ ವಿಜ್ಞಾನಿಗಳ ಪ್ರಯೋಗ
ಡೈಲಿ ಸ್ಟಾರ್ ನಲ್ಲಿ ಪ್ರಕಟಗೊಂಡ ವರದಿ ಪ್ರಕಾರ ಮೂತ್ರದಿಂದ ಉತ್ಪತ್ತಿಯಾಗುವ ವಿದ್ಯುತ್ ಮೇಲೆ ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆ ಯಶಸ್ವಿಯಾಗಿದೆ. ಇದರಿಂದ ಜನರು ಭವಿಷ್ಯದಲ್ಲಿ ಸೌರಶಕ್ತಿ ಮತ್ತು ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಆಯ್ಕೆಯನ್ನು ಪಡೆಯಲಿದ್ದಾರೆ. ಇದು ವಿದ್ಯುತ್ ಶಕ್ತಿಗೆ ಶುದ್ಧ ಪರ್ಯಾಯ ಆಯ್ಕೆಯ ಜೊತೆಗೆ ಅಗ್ಗದ ಆಯ್ಕೆ ಕೂಡ ಆಗಲಿದೆ.
ಮೂತ್ರದಿಂದ ಮನೆಯಲ್ಲಿಯೇ ವಿದ್ಯುತ್ ಉತ್ಪಾದಿಸಬಹುದು
ಬ್ರಿಟನ್ ನ ಬ್ರಿಸ್ಟಲ್ನಲ್ಲಿರುವ ಸಂಶೋಧಕರ ತಂಡವು ಮಾನವ ಮಲ ಮತ್ತು ಮೂತ್ರದಿಂದ ಹೊಸ ಶುದ್ಧ ಶಕ್ತಿ ಇಂಧನ ಕೋಶವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕೋಶವು ಮಾನವ ತ್ಯಾಜ್ಯವನ್ನು ವಿದ್ಯುತ್ ಶಕ್ತಿಯಾಗಿ ಆಗಿ ಪರಿವರ್ತಿಸುತ್ತದೆ. ಈ ಸೆಲ್ನಿಂದ ತಯಾರಿಸಿದ ವಿದ್ಯುತ್ನಿಂದ ನೀವು ದಿನವಿಡೀ ಮನೆಯನ್ನು ಬೆಳಗಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಈ ಪ್ರಾಜೆಕ್ಟ್ ಆರಂಭಗೊಂಡಿತ್ತು
ವರದಿಯ ಪ್ರಕಾರ, ಈ ಪೀ ಪವರ್ ಯೋಜನೆಯನ್ನು (Pee Power Project) 2 ವರ್ಷಗಳ ಹಿಂದೆ ಗ್ಲಾಸ್ಟನ್ಬರಿ ಉತ್ಸವದಲ್ಲಿ ಎಲ್ಲರ ಮುಂದೆ ಪ್ರದರ್ಶಿಸಲಾಗಿತ್ತು. ಅಲ್ಲಿ ಶೌಚಾಲಯದ ಮೂತ್ರದಿಂದ ವಿದ್ಯುತ್ ಉತ್ಪಾದಿಸಬಹುದು ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದರು. ಇದಾದ ನಂತರ ಮೂತ್ರದಿಂದ ವಿದ್ಯುತ್ ತಯಾರಿಸುವ ಮೂಲಕ ಮೊಬೈಲ್ ಫೋನ್, ಲೈಟ್, ಟಿವಿ, ಮನೆಗಳಿಗೆ ದೀಪಾಲಂಕಾರ ಮಾಡುವ ಕಾರ್ಯ ಆರಂಭಗೊಂಡಿತು.
300 ವ್ಯಾಟ್ ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿ ಯಶಸ್ಸು
ಬ್ರಿಸ್ಟಲ್ ಬಯೋ ಎನರ್ಜಿ ಸೆಂಟರ್ ನ ವಿಜ್ಞಾನಿಗಳ ಪ್ರಕಾರ, 5 ದಿನಗಳ ಕಾಲ ನಡೆದ ಉತ್ಸವಕ್ಕೆ ಬಂದ ಜನರು, ಶೌಚಾಲಯದಲ್ಲಿನ ಮಾಡಿದ ಮೂತ್ರದ ಪ್ರಮಾಣದಿಂದ ಗಂಟೆಗೆ 300 ವ್ಯಾಟ್ ವಿದ್ಯುತ್ ಉತ್ಪಾದಿಸುವಲ್ಲಿ ಯಶಸ್ವಿಯಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಮೂತ್ರದಿಂದ ತಯಾರಿಸಿದ ಈ ವಿದ್ಯುತ್ನಿಂದ ನೀವು 10 ವ್ಯಾಟ್ ಸಾಮರ್ಥ್ಯದ ಬಲ್ಬ್ ಅನ್ನು 30 ಗಂಟೆಗಳ ಕಾಲ ಉರಿಸಬಹುದು.
ಪುಟ್ಟ Microbesಗಳನ್ನು ಬಳಸಲಾಗಿದೆ
ವಿಜ್ಞಾನಿಗಳ ಪ್ರಕಾರ, ಕಣ್ಣಿಗೆ ಕಾಣಿಸದ ಸೂಕ್ಷ್ಮಜೀವಿಗಳನ್ನು ಈ ಸಂಶೋಧನೆಯಲ್ಲಿ ಬಳಸಲಾಗಿದೆ. ವಿಜ್ಞಾನಿಗಳು ಸೂಕ್ಷ್ಮಜೀವಿಗಳಿಂದ ಪೆಟ್ಟಿಗೆಯಂತಹ ಕೋಶವನ್ನು ತುಂಬಿದ್ದಾರೆ. ಈ ಸೂಕ್ಷ್ಮಜೀವಿಗಳು ಹುಲ್ಲು, ಮಾನವ ಮೂತ್ರ ಸೇರಿದಂತೆ ಯಾವುದೇ ಸಾವಯವ ಪದಾರ್ಥಗಳನ್ನು ತಿಂದು ಅದನ್ನು ವಿದ್ಯುತ್ ಆಗಿ ಪರಿವರ್ತಿಸುತ್ತವೆ. ವಿದ್ಯುತ್ ಉತ್ಪಾದನೆಯ ನಂತರ ಉಳಿದಿರುವ ಶೇಷವನ್ನು ಗೊಬ್ಬರವಾಗಿ ಬಳಸಬಹುದು.
ಇದನ್ನೂ ಓದಿ-Facebook New Name: ಫೇಸ್ಬುಕ್ನ ಹೆಸರು ಬದಲಾವಣೆ
ವ್ಯಕ್ತಿಯೊಬ್ಬನಿಂದ ನಿತ್ಯ 2.5 ಲೀಟರ್ ಮೂತ್ರ ಸಂಗ್ರಹಣೆ
ವರದಿಯ ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ ಸರಾಸರಿ 2.5 ಲೀಟರ್ ಮೂತ್ರವನ್ನು ಉತ್ಪಾದಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ, ಕುಟುಂಬದಲ್ಲಿ ನಾಲ್ಕು ಜನರಿದ್ದರೆ, ದಿನಕ್ಕೆ ಸುಮಾರು 10 ಲೀಟರ್ ಮೂತ್ರವನ್ನು ಸಂಗ್ರಹಿಸಬಹುದು. ಮೈಕ್ರೋಬಿಯಲ್ ಫ್ಯೂಯಲ್ ಸೆಲ್ ಕಾರ್ಯನಿರ್ವಹಿಸಲು ಮತ್ತು ನಿರಂತರವಾಗಿ ವಿದ್ಯುತ್ ಉತ್ಪಾದಿಸಲು ಅಷ್ಟು ಮೂತ್ರ ಸಾಕು. ನಿಮ್ಮ ಮನೆಯವರು ಮುಂದಿನ ದಿನಗಳಲ್ಲಿ ಮನೆಯಲ್ಲಿ ಬಿಡುಗಡೆಯಾಗುವ ಮೂತ್ರದಿಂದ ವಿದ್ಯುತ್ ಉತ್ಪಾದಿಸಿ ಟಿವಿ, ಬಲ್ಬ್, ಮೊಬೈಲ್ ಚಾರ್ಜ್ ಹೀಗೆ ಎಲ್ಲಾ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ