Electric Bike:ಮಾರುಕಟ್ಟೆಗೆ ಬಿಡುಗಡೆಯಾಗಿದೆ ಈ ಹೊಸ e-Bike, ಒಂದೇ ಚಾರ್ಜ್ ನಲ್ಲಿ 160 ಕಿ.ಮೀ ಮೈಲೇಜ್

Electric Bike Latest News - ಆಟೋಮೊಬೈಲ್ ಕಂಪನಿ e-Bike Go ತನ್ನ ಹೊಸ ಎಲೆಕ್ಟ್ರಾನಿಕ್ ಬೈಕ್ ಬಿಡುಗಡೆ ಮಾಡಿದೆ. Rugged E-Bike ಎಂದು ಹೆಸರಿಸಲಾಗಿರುವ ಈ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 160 ಕಿ.ಮೀ. ಮೈಲೇಜ್ ನೀಡುತ್ತದೆ.

Written by - Nitin Tabib | Last Updated : Oct 29, 2021, 01:41 PM IST
  • ಬಿಡುಗಡೆಯಾಗಿದೆ ದೇಶದ ಅತ್ಯಂತ ಬಲಿಷ್ಠ e-bike
  • ಕೇವಲ ರೂ 499 ಪಾವತಿಸಿ ನೀವು ಈ ಬೈಕ್ ಅನ್ನು ಬುಕ್ ಮಾಡಬಹುದು.
  • ಏನಿದೆ ಈ ಬೈಕ್ ನ ವಿಶೇಷತೆ ತಿಳಿಯಲು ಸುದ್ದಿ ಓದಿ.
Electric Bike:ಮಾರುಕಟ್ಟೆಗೆ ಬಿಡುಗಡೆಯಾಗಿದೆ ಈ ಹೊಸ e-Bike, ಒಂದೇ ಚಾರ್ಜ್ ನಲ್ಲಿ 160 ಕಿ.ಮೀ ಮೈಲೇಜ್ title=
Electric Bike Latest News (File Photo)

ನವದೆಹಲಿ:  Electric Bike Latest News - ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಪೆಟ್ರೋಲ್ - ಡಿಸೇಲ್ ಬೆಲೆಗೆ ಜನರು ರೋಸಿ ಹೋಗಿದ್ದಾರೆ.  ಇದನ್ನು ತಪ್ಪಿಸಲು, ಇದೀಗ ಜನರು ಎಲೆಕ್ಟ್ರಾನಿಕ್ ಬೈಕ್ ಗಳತ್ತ ಮುಖಮಾಡಲು ಆರಂಭಿಸಿದ್ದಾರೆ. ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು ಹಲವು ಆಟೋಮೊಬೈಲ್ ಕಂಪನಿಗಳು ಹೊಸ ಎಲೆಕ್ಟ್ರಿಕಲ್ ವಾಹನಗಳನ್ನು ಸಹ ಬಿಡುಗಡೆ ಮಾಡುತ್ತಿವೆ.

ಒಂದೇ ಚಾರ್ಜ್ ನಲ್ಲಿ 160ಕಿ ಮೀ ರೇಂಜ್
ಈ ಎಲೆಕ್ಟ್ರಿಕ್ ಸ್ಕೂಟರ್ (e-Scooter) ನ ಚಾಲನಾ ವೆಚ್ಚ ತುಂಬಾ ಕಡಿಮೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದ್ದು, ಇದನ್ನು ಚಲಾಯಿಸಲು ಪ್ರತಿ ಕಿಲೋಮೀಟರಿಗೆ ಕೇವಲ 25 ಪೈಸೆ ವೆಚ್ಚವಾಗುತ್ತದೆ. ಅಂದರೆ, 1 ರೂಪಾಯಿಯಲ್ಲಿ ನೀವು 4 ಕಿಮೀ ಮತ್ತು 100 ರೂಪಾಯಿಗಳಲ್ಲಿ 400 ಕಿಮೀ ವರೆಗೆ ಪ್ರಯಾಣಿಸಬಹುದು. 

ವರದಿಗಳ ಪ್ರಕಾರ, ಭಾರತೀಯ ಕಂಪನಿ e-Bike Go ಇತ್ತೀಚೆಗೆ ಉತ್ತಮ ಎಲೆಕ್ಟ್ರಿಕ್ ಬೈಕ್ (Rugged e-Bike) ಅನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಬೈಕ್‌ನ ದೇಹವನ್ನು ಸ್ಟೀಲ್ ಫ್ರೇಮ್ ಮತ್ತು ಕ್ರೇಡಲ್ ಚೆಸಿಸ್‌ನಿಂದ ಮಾಡಲಾಗಿದೆ. ಇದುವರೆಗೆ ದೇಶದಲ್ಲಿ ಬಿಡುಗಡೆಯಾಗಿರುವ ಎಲೆಕ್ಟ್ರಿಕ್ ಬೈಕ್‌ಗಳಲ್ಲಿ (EV) ಇದು ಅತ್ಯಂತ ಬಲಶಾಲಿ ಬೈಕ್ ಎಂದೇ ಹೇಳಲಾಗುತ್ತಿದೆ. ಇದನ್ನು ನೀವು ಒಮ್ಮೆ ರೀಚಾರ್ಜ್ ಮಾಡಿದರೆ ಈ ಬೈಕ್ 160 ಕಿ.ಮೀ ಓಡಬಲ್ಲದು ಎಂದು ಹೇಳಲಾಗಿದೆ.

ಕೇವಲ 3.5ಗಂಟೆಗಳಲ್ಲಿ ಫುಲ್ ಬ್ಯಾಟರಿ ಚಾರ್ಜ್
ಈ ಎಲೆಕ್ಟ್ರಿಕ್ ಬೈಕ್ 3KW ಮೋಟಾರ್ ಹೊಂದಿದೆ ಎಂದು ಕಂಪನಿ ಹೇಳಿದೆ. ಈ  Electric Bikeನ ಬ್ಯಾಟರಿ (Rugged e-Bike) 3.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ನಂತರ ಬೈಕ್ ಗಂಟೆಗೆ 70 ಕಿಮೀ ವೇಗದಲ್ಲಿ ಚಲಿಸಬಹುದು. ಈ ಬೈಕ್ ಒಟ್ಟು 12 ಸ್ಮಾರ್ಟ್ ಸೆನ್ಸರ್‌ಗಳನ್ನು ಹೊಂದಿದೆ.

ಇದನ್ನೂ ಓದಿ- Aadhaar Upadate: ನಿಮ್ಮ ಆಧಾರ್ ಕಾರ್ಡ್ ಅನ್ನು ಎಷ್ಟು ಬಾರಿ ಬದಲಾಯಿಸಬಹುದು? ನಿಯಮದ ಬಗ್ಗೆ ತಿಳಿಯಿರಿ

ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಬೈಕ್ ಬಿಡುಗಡೆ
ಈ ಎಲೆಕ್ಟ್ರಿಕ್ ಬೈಕ್ ಅನ್ನು ಕೆಂಪು, ನೀಲಿ, ಕಪ್ಪು ಮತ್ತು ರಗಡ್ ಸ್ಪೆಷಲ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ರಗ್ಡ್ ಇ-ಬೈಕ್‌ನ ಎಕ್ಸ್ ಶೋ ರೂಂ ಬೆಲೆ 84,999 ರೂ. ಈ ಬೈಕ್‌ನ ಟಾಪ್ ಮಾಡೆಲ್‌ನ ಬೆಲೆ 1.05 ಲಕ್ಷ ರೂ. ನೀವು ಈ ಎಲೆಕ್ಟ್ರಿಕ್ ಬೈಕ್ ಖರೀದಿಸಿದರೆ, ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಸಬ್ಸಿಡಿಯನ್ನು ಸಹ ನೀವು ಪಡೆಯಬಹುದು.

ಇದನ್ನೂ ಓದಿ-Gold Price Today: ದೀಪಾವಳಿಗೆ ಖುಷಿ ಸುದ್ದಿ, ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ

ಒಂದು ಲಕ್ಷಕ್ಕೂ ಅಧಿಕ ಬುಕ್ಕಿಂಗ್ ಬಂದಿವೆ ಎಂದ ಕಂಪನಿ 
ಈಗಾಗಲೇ ರಗ್ಡ್ ಇ-ಬೈಕ್‌ನ ಒಂದು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳಿಗೆ ಬುಕ್ಕಿಂಗ್‌ಗಳನ್ನು ಸ್ವೀಕರಿಸಲಾಗಿದ್ದು, ಬೈಕ್ ಗೆ ನಿರಂತರ ಬೇಡಿಕೆ ಹೆಚ್ಚುತ್ತಲೇ ಇದೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ನೀವು ಕೇವಲ 499 ರೂ ಪಾವತಿಸಿ ಮುಂಗಡ ಬುಕ್ ಮಾಡಬಹುದು. ಈ ಮೊತ್ತವನ್ನು ಮರುಪಾವತಿಸಲಾಗುವುದು, ಉಳಿದ ಬುಕಿಂಗ್ ಹಣವನ್ನು ಠೇವಣಿ ಮಾಡಿದ ನಂತರ ಅದನ್ನು ಸರಿದೂಗಿಸಬಹುದು.

ಇದನ್ನೂ ಓದಿ-Shaktikanta Das: ಮುಂದಿನ 3 ವರ್ಷಗಳಿಗೆ ಆರ್‌ಬಿಐ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಮರುನೇಮಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News