WhatsApp Users Alert: ತನ್ನ ಬಳಕೆದಾರರಿಗೆ ಬಿಗ್ ಶಾಕ್ ನೀಡಿದ WhatsApp, ಆನ್ಲೈನ್ ಹಣ ಪಾವತಿಯ ವೇಳೆ ಈ ಕೆಲಸ ಮಾಡಬೇಕು

WhatsApp Payments - ನೀವೂ ಕೂಡ ಒಂದು ವೇಳೆ WhatsApp ಮೂಲಕ ಹಣ ಪಾವತಿ ಮಾಡುತ್ತಿದ್ದರೆ ಈ ಸುದ್ದಿ ನಿಮಗಾಗಿ.  ಶೀಘ್ರದಲ್ಲೇ WhatsApp ತನ್ನ ವೇದಿಕೆಯಲ್ಲಿ ಹಣ ಪಾವತಿ ಮಾಡಲು ನಿಮ್ಮಿಂದ ನಿಮ್ಮ ಗುರುತನ್ನು ಪರಿಶೀಲಿಸಲು ಕೇಳಬಹುದು. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Oct 27, 2021, 07:10 PM IST
  • ಹಣ ಪಾವತಿ ಅಥವಾ ಪಡೆಯಲು ನೀವು ವಾಟ್ಸ್ ಆಪ್ ಬಳಸುತ್ತೀರಾ?
  • ಹಾಗಾದರೆ ಈ ಸುದ್ದಿ ನಿಮಗಾಗಿ.
  • ಇನ್ಮುಂದೆ ವಾಟ್ಸ್ ಆಪ್ ನಲ್ಲಿ ಹಣ ಪಾವತಿ ಅಥವಾ ಪಡೆಯಲು ಗುರುತಿನ ದಾಖಲೆ ಒದಗಿಸಬೇಕಾಗಲಿದೆ.
WhatsApp Users Alert: ತನ್ನ ಬಳಕೆದಾರರಿಗೆ ಬಿಗ್ ಶಾಕ್ ನೀಡಿದ WhatsApp, ಆನ್ಲೈನ್ ಹಣ ಪಾವತಿಯ ವೇಳೆ ಈ ಕೆಲಸ ಮಾಡಬೇಕು title=
WhatsApp Users Alert (File Photo)

ನವದೆಹಲಿ:  WhatsApp New Feature - WhatsApp ಶೀಘ್ರದಲ್ಲಿಯೇ ತನ್ನ ವೇದಿಕೆಯಲ್ಲಿ ಹಣ ಪಾವತಿಗಾಗಿ ನಿಮ್ಮಿಂದ ನಿಮ್ಮ ಗುರುತು ಪರಿಶೀಲಿಸಲು ಕೇಳಬಹುದು. XDA ಡೆವಲಪರ್‌ಗಳ ಪ್ರಕಾರ, ಇತ್ತೀಚಿನ WhatsApp ಬೀಟಾ ಬಿಡುಗಡೆಯಲ್ಲಿ ಕಂಡುಬರುವ ಹೊಸ ಸ್ಟ್ರಿಂಗ್‌ಗಳು, WhatsApp ನಲ್ಲಿ ಪಾವತಿ ಸೇವೆಯನ್ನು ಮುಂದುವರಿಸಲು ಪರಿಶೀಲನಾ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಅವಶ್ಯಕತೆ ಇದೆ ಎಂದು ಸೂಚಿಸುತ್ತಿವೆ.  ಪ್ರಸ್ತುತ, ಬಳಕೆದಾರರು ಭಾರತದಲ್ಲಿ WhatsApp Pay ಅನ್ನು ಹೊಂದಿಸಿದಾಗ, UPI ಆಧಾರಿತ ವಹಿವಾಟುಗಳನ್ನು ಸಕ್ರಿಯಗೊಳಿಸಲು ಸೇವೆಯು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಸಂಯೋಜಿತವಾಗಿರುವ ಫೋನ್ ಸಂಖ್ಯೆಯನ್ನು ಮಾತ್ರ ಪರಿಶೀಲಿಸಲಾಗುತ್ತದೆ. 

ಶೀಘ್ರದಲ್ಲಿಯೇ ಈ ಬದಲಾವಣೆ (WhatsApp New Feature Update)
ಬ್ರೆಜಿಲ್‌ನಲ್ಲಿ, ಪಾವತಿಗಳನ್ನು ಸುಗಮಗೊಳಿಸಲು ಬಳಕೆದಾರರ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಮೌಲ್ಯೀಕರಿಸಲು ಮೆಸೆಂಜರ್ Facebook Pay ಅನ್ನು ಬಳಸುತ್ತದೆ. ಪ್ರಸ್ತುತ ಪಾವತಿ ಸೇವೆ ಬಳಸಲು ಬಳಕೆದಾರರು ಯಾವುದೇ ಪರಿಶೀಲನಾ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ವರದಿ ಹೇಳಿದೆ. ಆದರೆ ಇದು ಶೀಘ್ರದಲ್ಲೇ ಬದಲಾಗಬಹುದು ಎಂದೂ ಕೂಡ ಹೇಳಲಾಗಿದೆ. 

ಇದನ್ನೂ ಓದಿ-Mysterious Signals: ಬಾಹ್ಯಾಕಾಶದಿಂದ ಬರುತ್ತಿವೆ ಈ ನಿಗೂಢ ಸಿಗ್ನಲ್ ಗಳು, ಏಲಿಯನ್ ಸದ್ದು ಇದಲ್ಲ ಆದರೆ, ಭಯಹುಟ್ಟಿಸುವಂತಿವೆ ಎಂದ ವಿಜ್ಞಾನಿಗಳು

ಮೊದಲು ದಾಖಲೆಗಳನ್ನು ಸಲ್ಲಿಸಬೇಕಾಗಲಿದೆ
WhatsApp v2.21.22.6 ಬೀಟಾ ಆವೃತ್ತಿ  ಕೆಲ ಹೊಸ ಸ್ಟ್ರಿಂಗ್‌ಗಳನ್ನು ಒಳಗೊಂಡಿದೆ, ಅವು ಬಳಕೆದಾರರು ಪಾವತಿಗ ಸೇವೆ  ಬಳಸುವುದನ್ನು ಮುಂದುವರಿಸಲು ಗುರುತಿನ ಪರಿಶೀಲನೆ ದಾಖಲೆಗಳನ್ನು ಸಲ್ಲಿಸಬೇಕಾಗಬಹುದು ಎಂದು ಸೂಚಿಸುತ್ತದೆ. ಆದರೆ, ತಮ್ಮ ವ್ಯಾಪಾರಕ್ಕಾಗಿ ಪಾವತಿಗಳನ್ನು ಸ್ವೀಕರಿಸಲು WhatsApp Pay ಅನ್ನು ಬಳಸುವವರಿಗೆ ಗುರುತಿನ ಪರಿಶೀಲನೆಯು ಸೀಮಿತವಾಗಿರುವ ಸಾಧ್ಯತೆ ಇದೆ.

ಇದನ್ನೂ ಓದಿ-Samsung 32-inch Smart TV : ಸ್ಯಾಮ್‌ಸಂಗ್‌ನ 32-ಇಂಚಿನ ಸ್ಮಾರ್ಟ್ ಟಿವಿಯಲ್ಲಿ ಇದುವರೆಗಿನ ಅತಿದೊಡ್ಡ ರಿಯಾಯಿತಿ

Google Pay, PhonePe ಮತ್ತು WhatsApp Pay ನಂತಹ UPI ಆಧಾರಿತ ಅಪ್ಲಿಕೇಶನ್‌ಗಳು ಹಣವನ್ನು ವರ್ಗಾಯಿಸಲು ಅಥವಾ ಸ್ವೀಕರಿಸಲು ಯಾವುದೇ ದಾಖಲೆಗಳನ್ನು ಸಲ್ಲಿಸುವ ಅವಶ್ಯಕತೆ ಇಲ್ಲ. ಆದರೆ  Paytm ನಂತಹ ವ್ಯಾಲೆಟ್ ಅಪ್ಲಿಕೇಶನ್‌ಗಳು RBI ಮಾರ್ಗಸೂಚಿಗಳ ಪ್ರಕಾರ KYC ಪರಿಶೀಲನೆಗಾಗಿ ಕೇಳುತ್ತವೆ. ಈ ಬದಲಾವಣೆಯ ಬಗ್ಗೆ WhatsApp ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಹೊಸ ಸ್ಟ್ರಿಂಗ್ ಗಳು (Whatsapp Latest Feature) ಪ್ರಸ್ತುತ ಬೀಟಾ ಆವೃತ್ತಿಯಲ್ಲಿರುವುದರಿಂದ, ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಕಂಪನಿಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ವರದಿ ಹೇಳುತ್ತದೆ.

ಇದನ್ನೂ ಓದಿ-Amazon Diwali Sale: ಸ್ಯಾಮ್‌ಸಂಗ್‌ನ 5G ಸ್ಮಾರ್ಟ್ ಫೋನ್ ಅನ್ನು ಕೇವಲ 700 ರೂ.ಗೆ ಖರೀದಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News