ಹೊಸ ಐಪಿಎಲ್ ತಂಡಕ್ಕೆ ಬಿಡ್ ಮಾಡಲು ಮುಂದಾದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್..!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ ತಂಡವನ್ನು ಹೊಂದಲು ಮತ್ತು ಕಾರ್ಯನಿರ್ವಹಿಸಲು ಟೆಂಡರ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ ಮತ್ತು ಆಗಸ್ಟ್ 31 ರಂದು ಟೆಂಡರ್ ಗೆ ಆಹ್ವಾನ ನೀಡಿದೆ.

Last Updated : Oct 23, 2021, 09:53 PM IST
  • ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ ತಂಡವನ್ನು ಹೊಂದಲು ಮತ್ತು ಕಾರ್ಯನಿರ್ವಹಿಸಲು ಟೆಂಡರ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ ಮತ್ತು ಆಗಸ್ಟ್ 31 ರಂದು ಟೆಂಡರ್ ಗೆ ಆಹ್ವಾನ ನೀಡಿದೆ.
ಹೊಸ ಐಪಿಎಲ್ ತಂಡಕ್ಕೆ ಬಿಡ್ ಮಾಡಲು ಮುಂದಾದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್..!  title=
file photo

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ ತಂಡವನ್ನು ಹೊಂದಲು ಮತ್ತು ಕಾರ್ಯನಿರ್ವಹಿಸಲು ಟೆಂಡರ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ ಮತ್ತು ಆಗಸ್ಟ್ 31 ರಂದು ಟೆಂಡರ್ ಗೆ ಆಹ್ವಾನ ನೀಡಿದೆ.

ಈಗ, ಬಾಲಿವುಡ್ ನ ಜನಪ್ರಿಯ ತಾರಾ ದಂಪತಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ಅವರು ಐಪಿಎಲ್ ತಂಡವನ್ನು ಹೊಂದಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಪತ್ನಿಯ ರಹಸ್ಯ ಬಯಲು ಮಾಡಿದ Ranveer Singh, ಈ ಕೆಲಸ ಮಾಡುತ್ತಾರಂತೆ Deepika Padukone

2022 ರಲ್ಲಿ ಐಪಿಎಲ್ ಹತ್ತು ತಂಡಗಳ ಟೂರ್ನಿಯಾಗಲಿದೆ. ಬಿಸಿಸಿಐ ಎರಡು ಹೊಸ ಇಂಡಿಯನ್ ಪ್ರೀಮಿಯರ್ ಲೀಗ್ ತಂಡಗಳಿಗೆ ಬಿಡ್ಡಿಂಗ್ ಮಾಡಲಿದೆ.ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಮ್ಯಾಂಚೆಸ್ಟರ್ ಯುನೈಟೆಡ್‌ನೊಂದಿಗೆ ಐಪಿಎಲ್ ತಂಡವನ್ನು ಹೊಂದಬಹುದು ಎನ್ನಲಾಗಿದೆ.

ಇದನ್ನೂ ಓದಿ:IPL 2022 : ಕ್ರಿಕೆಟ್ ಜಗತ್ತಿಗೆ ಕಾಲಿಡಲಿರುವ ದೀಪಿಕಾ-ರಣವೀರ್ .! IND-PAK ಮ್ಯಾಚ್ ಬಳಿಕ ಘೋಷಣೆ

ಐಪಿಎಲ್ ಪ್ರಾರಂಭವಾದಾಗಿನಿಂದಲೂ ಇದು ಬಾಲಿವುಡ್ ಜೊತೆಗಿನ ನಂಟನ್ನು ಮುಂದುವರೆಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಸಹ ಮಾಲೀಕತ್ವ ಹೊಂದಿದ್ದರೆ, ಪ್ರೀತಿ ಜಿಂಟಾ ಪಂಜಾಬ್ ಕಿಂಗ್ಸ್ ನ ಸಹ ಮಾಲೀಕರಾಗಿದ್ದಾರೆ. ಈ ಹಿಂದೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಕೂಡ ರಾಜಸ್ಥಾನ ರಾಯಲ್ಸ್‌ನಲ್ಲಿ ಷೇರುಗಳನ್ನು ಹೊಂದಿದ್ದರು.

ದೀಪಿಕಾ ಕ್ರೀಡಾ ಉತ್ಸಾಹಿಯಾಗಿದ್ದು. ಆಕೆಯ ತಂದೆ ಪ್ರಕಾಶ್ ಪಡುಕೋಣೆ ಹೆಸರಾಂತ ಬ್ಯಾಡ್ಮಿಂಟನ್ ಆಟಗಾರ, ರಣವೀರ್ ಎನ್ಬಿಎದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅವರು ಇಂಗ್ಲೀಷ್ ಪ್ರೀಮಿಯರ್ ಲೀಗ್ ನಲ್ಲೂ ಭಾಗಿಯಾಗಿದ್ದಾರೆ.

ಅದಾನಿ ಗ್ರೂಪ್, ಆರ್‌ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್, ಪ್ರಸಿದ್ಧ ಫಾರ್ಮಾ ಕಂಪನಿ ಟೊರೆಂಟ್ ಮತ್ತು ಪ್ರಮುಖ ತಂಡಗಳನ್ನು ಖರೀದಿಸಲು ಆಸಕ್ತಿ ತೋರಿದ ಸಂಸ್ಥೆಗಳಾಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News