ಇದು ಹಬ್ಬದ ಸೀಸನ್. ಮನೆ ಖರೀದಿಸಲು ಯೋಜಿಸುತ್ತಿದ್ದೀರಾ? ಅಗ್ಗದ ಗೃಹ ಸಾಲವನ್ನು ನೀಡಲು ಬ್ಯಾಂಕ್ ಗಳು ಸಿದ್ಧವಾಗಿದೆ. ಈ ದಿನಗಳಲ್ಲಿ ಗೃಹ ಸಾಲದ ದರವು ತುಂಬಾ ಕಡಿಮೆಯಾಗಿದೆ.
Home loan rates: ಇದು ಹಬ್ಬದ ಸೀಸನ್. ಮನೆ ಖರೀದಿಸಲು ಯೋಜಿಸುತ್ತಿದ್ದೀರಾ? ಅಗ್ಗದ ಗೃಹ ಸಾಲವನ್ನು ನೀಡಲು ಬ್ಯಾಂಕ್ ಗಳು ಸಿದ್ಧವಾಗಿದೆ. ಈ ದಿನಗಳಲ್ಲಿ ಗೃಹ ಸಾಲದ ದರವು ತುಂಬಾ ಕಡಿಮೆಯಾಗಿದೆ. ಬ್ಯಾಂಕುಗಳು ನಿರಂತರವಾಗಿ ತಮ್ಮ ಬಡ್ಡಿದರಗಳನ್ನು ಕಡಿತಗೊಳಿಸುತ್ತಿವೆ. ಕೋವಿಡ್ -19 ಕ್ಕಿಂತ ಮೊದಲು, ಗೃಹ ಸಾಲದ ದರವು 9 ಪ್ರತಿಶತದವರೆಗೆ ಇತ್ತು. ಈಗ ಅದು ಶೇಕಡಾ 6.50 ಕ್ಕೆ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ, ಕೈಗೆಟುಕುವ ದರದಲ್ಲಿ ಗೃಹ ಸಾಲವನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಮನೆಯನ್ನು ಖರೀದಿಸುವ ಅವಕಾಶವಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಈ ಹಬ್ಬದ ಸಮಯದಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಗೃಹ ಸಾಲದ ಮೇಲಿನ ಬಡ್ಡಿದರವನ್ನು 15 ಬಿಪಿಎಸ್ (ಬೇಸ್ ಪಾಯಿಂಟ್) ಕಡಿತ ಮಾಡಿದೆ. ಈಗ ಗೃಹ ಸಾಲದ ಹೊಸ ಬಡ್ಡಿದರವು ವರ್ಷಕ್ಕೆ 6.50% ಆಗಿರುತ್ತದೆ.
ಐಡಿಎಫ್ಸಿ ಬ್ಯಾಂಕ್ ಹಬ್ಬದ ದಿನಗಳಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರವನ್ನು 6.50% ಕ್ಕೆ ಇಳಿಸಿದೆ.
ಈ ಹಬ್ಬದ ಸಮಯದಲ್ಲಿ, ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಗೃಹ ಸಾಲಗಳ ಮೇಲೆ ಶೇಕಡಾ 6.70 ರಿಂದ ಆರಂಭವಾಗುವ ಆಕರ್ಷಕ ಬಡ್ಡಿದರಗಳನ್ನು ಮತ್ತು ಇತರ ಬ್ಯಾಂಕುಗಳಿಂದ ಗೃಹ ಸಾಲಗಳ ಬ್ಯಾಲೆನ್ಸ್ ವರ್ಗಾವಣೆಯನ್ನು ನೀಡುತ್ತದೆ.
ಬ್ಯಾಂಕ್ ಆಫ್ ಬರೋಡಾ ಹಬ್ಬದ ಋತುವಿನಲ್ಲಿ ಗೃಹ ಸಾಲದ ಬಡ್ಡಿದರವನ್ನು 6.50% ಕ್ಕೆ ಇಳಿಸಿದೆ. ಈ ಕೊಡುಗೆಯ ಲಾಭವು ಡಿಸೆಂಬರ್ 31 ರವರೆಗೆ ಲಭ್ಯವಿರುತ್ತದೆ.
ಹಬ್ಬದ ,ಋತುವಿನಲ್ಲಿ, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಕೂಡ ಗೃಹ ಸಾಲದ ಬಡ್ಡಿ ದರವನ್ನು 6.75%ಕ್ಕೆ ಇಳಿಸಿದೆ.