ನವದೆಹಲಿ: ಬುಧವಾರದಂದು ಅಫ್ಘಾನಿಸ್ತಾನದ-ತಜಾಕಿಸ್ಥಾನ್ ಪರ್ವತ ಗಡಿ ಪ್ರದೇಶದಲ್ಲಿ ಸುಮಾರು 6.2 ರಷ್ಟು ಭೂಕಂಪ ಸಂಭವಿಸಿದ ಪರಿಣಾಮ ಭಾರತದ ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ,ದೆಹಲಿ ಕಾಶ್ಮೀರ ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ.
Earthquake of Magnitude:6.1, Occurred on:09-05-2018, 16:11:34 IST, Lat:36.9 N & Long: 71.3 E, Depth: 96 Km, Region:Afghanistan-Tajikistan Border Region pic.twitter.com/vFcqMB4bkR
— India Met. Dept. (@Indiametdept) May 9, 2018
M6.0 #earthquake (#землетрясение) strikes 164 km SE of #Kŭlob (#Tajikistan) 9 min ago. Effects reported by eyewitnesses: pic.twitter.com/O65lXcI3oG
— EMSC (@LastQuake) May 9, 2018
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪವು ಅಫಘಾನ್ ರಾಜಧಾನಿಯಾದ ಕಾಬುಲ್ನಲ್ಲಿನ ಕಟ್ಟಡಗಳನ್ನು ಅಲುಗಾಡಿಸಿತು, ಆದರೆ ಯಾವುದೇ ರೀತಿಯ ಹಾನಿ ಅಥವಾ ಸಾವು ನೋವುಗಳು ಸಂಭವಿಸಿಲ್ಲ ಎಂದು ಹೇಳಲಾಗಿದೆ. ಖೋರೋ ಪ್ರಾಂತೀಯ ದಕ್ಷಿಣಕ್ಕೆ ಸುಮಾರು 67 ಕಿಮೀ (42 ಮೈಲುಗಳು) ದೂರದಲ್ಲಿ 96 ಕಿಮೀ (60 ಮೈಲುಗಳು) ಆಳದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಹೇಳಲಾಗಿದೆ.