ಅಭಿವೃದ್ಧಿಯ ಓಟದಲ್ಲಿ ಚೀನಾ ಮುಂಚೂಣಿಯಲ್ಲಿದೆ ಎಂದು ಹೇಳಿಕೊಳ್ಳಬಹುದು, ಆದರೆ ದೇಶದ ಹದಗೆಡುತ್ತಿರುವ ಸಾಮಾಜಿಕ ವ್ಯವಸ್ಥೆ ಅಲ್ಲಿ ದೊಡ್ಡ ಸಮಸ್ಯೆಯಾಗುತ್ತಿದೆ.
ಅಭಿವೃದ್ಧಿಯ ಓಟದಲ್ಲಿ ಚೀನಾ ಮುಂಚೂಣಿಯಲ್ಲಿದೆ ಎಂದು ಹೇಳಿಕೊಳ್ಳಬಹುದು, ಆದರೆ ದೇಶದ ಹದಗೆಡುತ್ತಿರುವ ಸಾಮಾಜಿಕ ವ್ಯವಸ್ಥೆ ಅಲ್ಲಿ ದೊಡ್ಡ ಸಮಸ್ಯೆಯಾಗುತ್ತಿದೆ. ಒಂದೆಡೆ ಯುವತಿಯರು ಮದುವೆಯಂತಹ ಸಂಬಂಧದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೆ ಸರ್ಕಾರವು ಯುವತಿಯರನ್ನು ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುತ್ತಿದೆ. ಏತನ್ಮಧ್ಯೆ ಚೀನೀ ಮಹಿಳೆಯರಿಗೆ ನೀಡಲಾಗುವ ‘ಲವ್ ಲೀವ್’ ಮತ್ತೊಮ್ಮೆ ಸುದ್ದಿಯಲ್ಲಿದೆ. ಏನಿದು ‘ಲವ್ ಲೀವ್’..? ಇಲ್ಲಿದೆ ನೋಡಿ ಇದರ ಸಂಪೂರ್ಣ ಮಾಹಿತಿ…
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಚೀನಾದ ಮಹಿಳೆಯರು ಮದುವೆಯಾಗಲು ಬಯಸುವುದಿಲ್ಲ, ಇದರ ಹಿಂದಿರುವ ಪ್ರಮುಖ ಕಾರಣವೆಂದರೆ ಜೀವನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಲು ಅವರಿಗೆ ಸಮಯ ಸಿಗುತ್ತಿಲ್ಲ. ಈ ಸಮಸ್ಯೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಅಲ್ಲಿನ ಕಚೇರಿಗಳಲ್ಲಿ ಮಹಿಳೆಯರಿಗೆ ರಜೆ ನೀಡಲು ವಿಶೇಷ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಅವಿವಾಹಿತ ಮಹಿಳೆಯರಿಗೆ ರಜೆ ತೆಗೆದುಕೊಳ್ಳಿ ಮತ್ತು ನಿಜವಾದ ಪ್ರೀತಿಯನ್ನು ಕಂಡುಕೊಳ್ಳಿ ಎಂದು ಅಲ್ಲಿನ ಕಂಪನಿಗಳು ಹೇಳುತ್ತಿವೆಯಂತೆ.
ಈ ವ್ಯವಸ್ಥೆಯು 2019ರಲ್ಲಿ ಬೆಳಕಿಗೆ ಬಂದಿತು. ಆದರೆ ಇಂದಿಗೂ ಮಹಿಳೆಯರು ಅನೇಕ ಕಚೇರಿಗಳಲ್ಲಿ ಲವ್ ರಜೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಇರುವ ಏಕೈಕ ಷರತ್ತು ಎಂದರೆ ಆ ಮಹಿಳಾ ಉದ್ಯೋಗಿ ಒಂಟಿಯಾಗಿರಬೇಕು ಮತ್ತು ವಯಸ್ಸು ಸುಮಾರು 30 ಆಗಿರಬೇಕು.
ದಕ್ಷಿಣ ಚೀನಾದ ಮಾರ್ನಿಂಗ್ ಪೋಸ್ಟ್ ಉಲ್ಲೇಖಿಸಿದ ಬಿಬಿಸಿ ವರದಿಯು, ಪೂರ್ವ ಚೀನಾದ Hangzhouದಲ್ಲಿರುವ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ‘ಡೇಟಿಂಗ್ ರಜೆ'’ ನೀಡಿವೆ ಎಂದು ಹೇಳಿದೆ. 2019ರಲ್ಲಿ ಆರಂಭವಾದ ಈ ವ್ಯವಸ್ಥೆಯು ಅನೇಕ ಕಂಪನಿಗಳ ಮತ್ತು ಶಾಲೆಗಳಲ್ಲಿರುವ ಒಂಟಿ ಮಹಿಳೆಯರಿಗೆ ಅನ್ವಯಿಸುತ್ತದೆ. ಈ ರಜಾದಿನಗಳನ್ನು ‘love-leaves’ ಎಂದು ಕರೆಯಲಾಗುತ್ತದೆ.
ವಾಸ್ತವವಾಗಿ ಕಳೆದ ಕೆಲವು ವರ್ಷಗಳಲ್ಲಿ ಚೀನಾದಲ್ಲಿ ಒಂಟಿಯಾಗಿರುವ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಜನರು ತಮ್ಮ ವೃತ್ತಿಜೀವನವನ್ನು ಮುಂದುವರಿಸುವ ಉದ್ದೇಶದಿಂದ ಮದುವೆಗಳಿಂದ ದೂರವಿರಲು ಬಯಸುತ್ತಿದ್ದಾರಂತೆ. ಇಂತಹ ಪರಿಸ್ಥಿತಿಯಲ್ಲಿ ಈಗ ಅಲ್ಲಿನ ಸರ್ಕಾರ ಕೂಡ ಜನರು ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಬಯಸುತ್ತಿದೆ. ಅದಕ್ಕಾಗಿಯೇ ಮಹಿಳೆಯರಿಗೆ ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ರಜಾದಿನಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.
ಚೀನಾದ ಸಾಮಾಜಿಕ ವಿಜ್ಞಾನಗಳ ಅಕಾಡೆಮಿಯ ಯೋಜನೆಯ ವರದಿಯ ಪ್ರಕಾರ, ದೇಶದಲ್ಲಿ ಶೀಘ್ರ ಜನಸಂಖ್ಯೆಯ ಕುಸಿತದಿಂದ ಮುಂದಿನ 50 ವರ್ಷಗಳಲ್ಲಿ ಚೀನಾದ ಜನಸಂಖ್ಯೆಯು 140 ದಶಲಕ್ಷದಿಂದ 120 ದಶಲಕ್ಷಕ್ಕೆ ಇಳಿಯುತ್ತದೆ. ಈ ಕಾಳಜಿಯಿಂದ ಮಹಿಳೆಯರಿಗೆ ಕಚೇರಿಗಳಲ್ಲಿ ರಜೆ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಇದರಿಂದ ಒಂಟಿ ಮಹಿಳೆಯರನ್ನು ಮದುವೆಯಂತಹ ಬಂಧನಕ್ಕೊಳಪಡಿಸಿ ಅವರು ಮುಂದೆ ಮಕ್ಕಳು ಹೊಂದುವಂತೆ ಮಾಡುವುದು ಚೀನೀ ಸರ್ಕಾರದ ಉದ್ದೇಶವಾಗಿದೆ.