ಮುಂಬೈ: ಕೊಲ್ಕತ್ತಾ ತಂಡವು ಮುಂಬೈ ವಿರುದ್ದ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮುಂಬೈ ನ ಸೂರ್ಯ ಕುಮಾರ್ ಯಾದವ್ ಅವರ ಭರ್ಜರಿ( 59) ಅರ್ಧ ಶತಕದ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತು. ಇವರಿಗೆ ಹಾರ್ದಿಕ ಪಾಂಡ್ಯ(35) ಎವಿನ್ ಲೆವಿಸ್ (43) ನೆರವು ನೀಡಿದರು.
That is that from Wankhede as the @mipaltan beat #KKR by 13 runs.#MIvKKR #VIVOIPL pic.twitter.com/4wqhm7O9wI
— IndianPremierLeague (@IPL) May 6, 2018
ಮುಂಬೈ ನೀಡಿದ 182 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು 168 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಕೋಲ್ಕತ್ತಾ ಪರ ರಾಬಿನ್ ಉತ್ತಪ್ಪ ಅರ್ಧಶತಕ(54)ದ ಮೂಲಕ ಉತ್ತಮ ಆರಂಭ ಹಾಕಿಕೊಟ್ಟರು. ನಂತರ ನಿತೀಶ್ ರಾಣಾ( 31 ) ಮತ್ತು ದಿನೇಶ್ ಕಾರ್ತಿಕ್ (36) ಗೆಲುವಿಗೆ ಪ್ರಯಾಸ ಪಟ್ಟರು ಸಹಿತ ಕೊಲ್ಕತಾ ತಂಡವು ಗೆಲುವು ಸಾಧಿಸಲು 13 ರನ್ ಗಳ ಕೊರತೆಯುಂಟಾಯಿತು.
5⃣0⃣@robbieuthappa looks in good touch here as he brings up his FIFTY off 32 deliveries.#MIvKKR pic.twitter.com/YwlOW8Ns5Z
— IndianPremierLeague (@IPL) May 6, 2018
ಮುಂಬೈ ತಂಡದ ಪರ ಹಾರ್ಧಿಕ್ ಪಾಂಡ್ಯ ನಾಲ್ಕು ಓವರ್ ಗಳಲ್ಲಿ ಕೇವಲ 19 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು. ಆ ಮೂಲಕಕೋಲ್ಕತ್ತಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.