Indian Railways: IRCTCಯ BHARAT DARSHAN TRAIN ಆರಂಭ, ಎಲ್ಲೆಲ್ಲಿ ನಿಲ್ಲುತ್ತದೆ? ಸಿಗಲಿದೆ 4 ಲಕ್ಷ ರೂ.ಗಳ ಲಾಭ

Bharat Darshan Train: ಯಾವುದೇ ಕಾರಣಗಳಿಂದ ಪ್ರವಾಸದಿಂದ ವಂಚಿತರಾದ ಮತ್ತು ದೇಶದ ವಿಭಿನ್ನ ಭಾಗಗಳ ಸಂಸ್ಕೃತಿ ಹಾಗೂ ಕಲೆಯ ದರ್ಶನ ಮಾಡಿರದ ಜನರಿಗೆ ಲಾಭ ನೀಡುವುದು ಈ ಪ್ಯಾಕೇಜ್ ಉದ್ದೇಶವಾಗಿದೆ.

Written by - Nitin Tabib | Last Updated : Oct 9, 2021, 08:50 PM IST
  • BHARAT DARSHAN TRAIN ಸೇವೆ ಆರಂಭಿಸಿದ IRCTC.
  • ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತ್ ದರ್ಶನ ರೈಲು ಆರಂಭಿಸಲಾಗಿದೆ.
  • ಭಾರತ್ ದರ್ಶನ ಯಾತ್ರೆ ಒಟ್ಟು 8 ರಾತ್ರಿಗಳು ಮತ್ತು 9 ದಿನಗಳನ್ನು ಒಳಗೊಂಡಿರರಲಿದೆ.
Indian Railways: IRCTCಯ BHARAT DARSHAN TRAIN  ಆರಂಭ, ಎಲ್ಲೆಲ್ಲಿ ನಿಲ್ಲುತ್ತದೆ? ಸಿಗಲಿದೆ 4 ಲಕ್ಷ ರೂ.ಗಳ ಲಾಭ title=
BHARAT DARSHAN TRAIN (File Photo)

ನವದೆಹಲಿ: IRCTC ವತಿಯಿಂದ ಧಾರ್ಮಿಕ ಪ್ರವಾಸೋದ್ಯಮಕ್ಕೆ  ಉತ್ತೇಜನ ನೀಡುವ ಉದ್ದೇಶದಿಂದ ಭಾರತ ದರ್ಶನ ರೈಲು ಪ್ರವಾಸ ಪಟ್ಟಿ 2021 (Bharat Darshan Train Tour List 2021) ಶುಕ್ರವಾರದಿಂದ ಆರಂಭವಾಗಿದೆ. ಈ ರೈಲು ಮಧ್ಯಪ್ರದೇಶದ ರೇವಾದಿಂದ ಆರಂಭವಾಗುತ್ತದೆ ಮತ್ತು ಝಾನ್ಸಿ-ವೈಷ್ಣೋ ದೇವಿಯ ಜೊತೆಗೆ ಆಗ್ರಾ, ಮಥುರಾ, ಹರಿದ್ವಾರ, ಹೃಷಿಕೇಶ್  ಮತ್ತು ಅಮೃತಸರಕ್ಕೆ ಭೇಟಿ ನೀಡುತ್ತದೆ.

ಭಾರತೀಯ ರೈಲ್ವೆ, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯದ ಜಂಟಿ ಯೋಜನೆಯಡಿ ಭಾರತ್ ದರ್ಶನ ರೈಲು ಚಲಿಸಲಾಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ. ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ, 'ವಿಶ್ವದ ಅಗ್ಗದ ಮತ್ತು ಅತ್ಯಂತ ಆರಾಮದಾಯಕ' ಪ್ರವಾಸ ಪ್ಯಾಕೇಜ್ ಅನ್ನು ಕಾಲಕಾಲಕ್ಕೆ ನೀಡಲಾಗುತ್ತದೆ.

IRCTCಯ ಈ ವಿಶೇಷ ಟೂರ್ ಪ್ಯಾಕೇಜ್ ನಲ್ಲಿ ಏನೇನಿದೆ?
ಈ ಪ್ಯಾಕೇಜ್‌ನ ಉದ್ದೇಶ (Bharat Darshan Train Tour Benefits) ಯಾವುದಾದರೊಂದು ಕಾರಣದಿಂದ ಪ್ರವಾಸೋದ್ಯಮದಿಂದ ವಂಚಿತರಾದ ಜನರಿಗೆ ದೇಶದ ವಿವಿಧ ಭಾಗಗಳ ಸಂಸ್ಕೃತಿ ಮತ್ತು ಕಲೆಯನ್ನು ಪರಿಚಯಿಸುವುದಾಗಿದೆ. ಐಆರ್‌ಸಿಟಿಸಿಯ ಈ ವಿಶೇಷ ಪ್ರವಾಸ ಪ್ಯಾಕೇಜ್‌ನಲ್ಲಿ, ಪ್ರಯಾಣಿಕರು ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಭೋಜನವನ್ನು ಪಡೆಯುತ್ತಾರೆ. ಇದಲ್ಲದೇ, ರಾತ್ರಿಯ ತಂಗುವಿಕೆಗೆ ಉತ್ತಮ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಇದರೊಂದಿಗೆ ಪ್ರಯಾಣಿಕರಿಗೆ 4 ಲಕ್ಷದವರೆಗಿನ ಅಪಘಾತ ವಿಮೆಯನ್ನು ಸಹ ನೀಡಲಾಗುತ್ತದೆ. ಆದರೆ,  ಪ್ರಯಾಣದ ಸಮಯದಲ್ಲಿ ಕೋವಿಡ್ ಪ್ರೋಟೋಕಾಲ್ ಅನ್ನು ಸಂಪೂರ್ಣವಾಗಿ ಪಾಲಿಸಬೇಕಾಗಲಿದೆ ಎಂಬುದನ್ನು ನೆನಪಿನಲ್ಲಿಡಿ.

ಮಾಹಿತಿ ನೀಡಿದ IRCTC
ಈ ಕುರಿತು ಹೇಳಿಕೆ ನೀಡಿರುವ IRCTC ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಆನಂದ್ ಕುಮಾರ್ ಝಾ, "ಈ ಯಾತ್ರೆಯನ್ನು ಭಕ್ತಿಯಿಂದ ಆನಂದಿಸಲು ಮತ್ತು ಭಾರತದ ಹಳೆಯ ಸಾಂಪ್ರದಾಯಿಕ ನಗರಗಳಿಗೆ ಪ್ರಯಾಣಿಸಲು ಇಷ್ಟಪಡುವ ಎಲ್ಲಾ ರೀತಿಯ ಪ್ರಯಾಣಿಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ" ಎಂದು ಹೇಳಿದ್ದಾರೆ. 

ಈ ರೈಲಿನ ಸಂಪೂರ್ಣ ವೇಳಾಪಟ್ಟಿ  ಇಲ್ಲಿದೆ
ಈ ವಿಶೇಷ ಪ್ಯಾಕೇಜ್ (Bharat Darshan Train Tour Details) ಕುರಿತು ಐಆರ್‌ಸಿಟಿಸಿ ನೀಡಿದ ಮಾಹಿತಿಯ ಪ್ರಕಾರ, 8 ರಾತ್ರಿ 9 ದಿನಗಳ ಈ ಪ್ರಯಾಣದಲ್ಲಿ, ಮಧ್ಯಪ್ರದೇಶದ ರೇವಾ ನಿಲ್ದಾಣದಿಂದ ಭಾರತ ದರ್ಶನ ರೈಲು ಆರಂಭವಾಗುತ್ತದೆ. ಇದಲ್ಲದೇ, ಪ್ರಯಾಣಿಕರು ಸತ್ನಾ, ಕಟ್ನಿ, ಜಬಲ್ಪುರ, ನರಸಿಂಗ್‌ಪುರ, ಇಟಾರ್ಸಿ, ಹೋಶಂಗಾಬಾದ್, ಹಬೀಬ್‌ಗಂಜ್, ವಿದಿಶಾ, ಗಂಜ್ ಬಸೋಡಾ, ಬಿನಾ ಮತ್ತು ಝಾನ್ಸಿಗಳಿಂದಲು ಕೂಡ ಪ್ರಯಾಣ ಆರಂಭಿಸಬಹುದಾಗಿದೆ.

ಇದನ್ನೂ ಓದಿ-Indian Railways: ರೈಲಿನಲ್ಲಿ ಬರ್ತ್ ಖಾಲಿಯಾದರೆ ತಕ್ಷಣ ಬರುತ್ತೆ ಅಲರ್ಟ್, ಜೊತೆಗೆ ಸಿಗುತ್ತೆ ಕನ್ಫರ್ಮ್ ಟಿಕೆಟ್, ಹೇಗೆ ಗೊತ್ತಾ?

ಪ್ಯಾಕೇಜ್ ಎಲೆ ಎಷ್ಟು?
ಐಆರ್‌ಸಿಟಿಸಿಯ ವಿಶೇಷ 'ಭಾರತ ದರ್ಶನ ಪ್ರವಾಸ' ಪ್ಯಾಕೇಜ್‌ನಲ್ಲಿ ಸ್ಲೀಪರ್ ಕ್ಲಾಸ್‌ಗೆ ಪ್ರಯಾಣ ದರ ಪ್ರತಿ ವ್ಯಕ್ತಿಗೆ 8,505 ರೂ. AC 3-ಶ್ರೇಣಿಗಳಿಗೆ ಪ್ರಯಾಣಿಕರು ರೂ. 10,395 ಪಾವತಿಸಬೇಕಾಗುತ್ತದೆ. ಈ ರೈಲಿನಲ್ಲಿ ಒಟ್ಟು 12 ಸ್ಲೀಪರ್ ಕೋಚ್ ಹಾಗೂ ಒಂದು ಕೋಚ್ ಎಸಿ ಕೋಚ್ ಇರಲಿದೆ.

ಇದನ್ನೂ ಓದಿ-IRCTC ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ! ಈ ಕೆಲಸ ಮಾಡಿ ಅತ್ಯುತ್ತಮ ಪ್ರಯೋಜನ ಪಡೆಯಿರಿ

ವ್ಯಾಕ್ಸಿನ್ ಎರಡು ಪ್ರಮಾಣಗಳು ಅನಿವಾರ್ಯ 
ಜಾಗತಿಕ ಮಹಾಮಾರಿ  ಕರೋನಾ ವೈರಸ್ ಅನ್ನು ಗಮನದಲ್ಲಿಟ್ಟುಕೊಂಡು, ಈ ರೈಲಿನಲ್ಲಿ ಪ್ರಯಾಣಿಸಲು ಕೆಲವು ವಿಶೇಷ ಷರತ್ತುಗಳನ್ನು ವಿಧಿಸಲಾಗಿದೆ. ಇದರಲ್ಲಿ, ಕರೋನಾ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡ ಜನರು ಮಾತ್ರ ಪ್ರಯಾಣಿಸಬಹುದಾಗಿದೆ. ಇದಲ್ಲದೇ, ಪ್ರಯಾಣದ ಟಿಕೆಟ್ ಕಾಯ್ದಿರಿಸಲು ವಯೋಮಿತಿ 18 ವರ್ಷ  ಅಥವಾ ಅದಕ್ಕಿಂತ ಹೆಚ್ಚಿರಬೇಕು.

ಇದನ್ನೂ ಓದಿ-ರೈಲ್ವೆ ಪ್ರಯಾಣಿಕರ ಗಮನಕ್ಕೆ : ನೀವು IRCTC ಯಿಂದ ಟಿಕೆಟ್ ಬುಕ್ ಮಾಡಿದರೆ, ಮೊದಲು ಈ ಸುದ್ದಿ ಓದಿ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News