ನವದೆಹಲಿ : ಹೊಸ ಉದ್ಯಮವನ್ನು ಪ್ರಾರಂಭಿಸುವ (How to start new business) ಬಗ್ಗೆ ಯೋಚಿಸುತ್ತಿದ್ದರೆ, ನಿಮಗೆ ಒಂದು ಉತ್ತಮ ಅವಾಕಾಶವಿದೆ. ಇದರಲ್ಲಿ ಕಡಿಮೆ ಹೂಡಿಕೆಯೊಂದಿಗೆ ಸಾಕಷ್ಟು ಆದಾಯವನ್ನು ಗಳಿಸಬಹುದು. ಮುಖ್ಯ ವಿಚಾರವೆಂದರೆ ಯಾರು ಬೇಕಾದರೂ ಈ ಉದ್ಯಮವನ್ನು ಆರಂಭಿಸಬಹುದು. ಈ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಹಂತ ಹಂತವಾಗಿ ಇಲ್ಲಿ ತಿಳಿದುಕೊಳ್ಳಬಹುದು.
ಈ ವ್ಯವಹಾರವು ಕೃಷಿಗೆ ಸಂಬಂಧಿಸಿದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೃಷಿಯತ್ತ ಗಮನ ಹರಿಸುತ್ತಿದ್ದಾರೆ. ಅದೆಷ್ಟೋ ಐಐಟಿ(IIT), ಐಐಎಂ (IIM) ವಿದ್ಯಾರ್ಥಿಗಳು ಕೂಡಾ ಕೃಷಿಯನ್ನು ವ್ಯಾಪಾರವಾಗಿ ತೆಗೆದುಕೊಂಡಿದ್ದಾರೆ. ಇದರಲ್ಲಿ ಪ್ರತಿ ತಿಂಗಳು ಲಕ್ಷ ಲಕ್ಷ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ಸಂಪಾದನೆ ಮಾಡಬಹುದು. ಇಲ್ಲಿ ನಾವು ಶುಂಠಿ ಕೃಷಿಯ (Agriculture) ಬಗ್ಗೆ ಹೇಳುತ್ತಿದ್ದೇವೆ.
ಇದನ್ನೂ ಓದಿ: RBI Monetary Policy: ಕೈಗೆಟುಕುವ ಗೃಹ ಸಾಲದ ಭರವಸೆಯ ನಿರೀಕ್ಷೆಗೆ ತಣ್ಣೀರೇರೆಚಿದ RBI
ಸಾಕಷ್ಟು ಬೇಡಿಕೆ :
ಇಂದಿನ ದಿನಗಳಲ್ಲಿ ಶುಂಠಿಗೆ ಸಾಕಷ್ಟು ಬೇಡಿಕೆ ಇದೆ. ಪ್ರತಿ ಅಡುಗೆಯಲ್ಲಿ ಕೂಡಾ ಶುಂಠಿಯನ್ನು (Ginger) ಬಳಸಲಾಗುತ್ತದೆ. ನಿಜ ಹೇಳಬೇಕೆಂದರೆ ಶುಂಠಿ ಚಹಾಕ್ಕೂ ಕೂಡಾ ಈಗ ಭಾರೀ ಬೇಡಿಕೆಯಿದೆ. ಶುಂಠಿಯು ಅನೇಕ ಔಷಧೀಯ ಗುಣಗಳನ್ನು (Benefits of ginger) ಹೊಂದಿದೆ. ಈ ಕಾರಣದಿಂದಾಗಿ ಇದನ್ನು ಔಷಧಿಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ಶುಂಠಿಯ ಬೇಡಿಕೆ ದಿನದಿಂದ ದಿನಕ್ಕೆ ದೇಶ ಮತ್ತು ವಿದೇಶಗಳಲ್ಲಿ ಹೆಚ್ಚುತ್ತಿದೆ.
ಈ ರೀತಿಯ ವ್ಯಾಪಾರವನ್ನು ಪ್ರಾರಂಭಿಸಿ :
ಶುಂಠಿ ಕೃಷಿಗಾಗಿ, ನಿಮಗೆ ಹೊಲ ಅಥವಾ ಖಾಲಿ ನಿವೇಶನ ಬೇಕಾಗುತ್ತದೆ. ಶುಂಠಿ ನಾಟಿ ಮಾಡಲು ಹಿಂದಿನ ಶುಂಠಿ ಬೆಳೆಯ ಗೆಡ್ಡೆಗಳನ್ನು ಬಳಸಲಾಗುತ್ತದೆ. ದೊಡ್ಡ ಶುಂಠಿ ಗೆಡ್ಡೆಗಳು ಒಡೆದು ಎರಡು ಮೂರು ಚಿಗುರುಗಳು ಒಂದೇ ತುಂಡಿನಲ್ಲಿ ಉಳಿಯುತ್ತವೆ. ಈ ಕೃಷಿ ಮಳೆಯನ್ನು ಅವಲಂಬಿಸಿದೆ. ಒಂದು ಹೆಕ್ಟೇರ್ ನಲ್ಲಿ ಬಿತ್ತನೆಗೆ 15 ರಿಂದ 15 ಗೆಡ್ಡೆಗಳು ಬೇಕಾಗುತ್ತವೆ.
ಇದನ್ನೂ ಓದಿ: Repo Rate: ಹಣದುಬ್ಬರದಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಆರ್ಬಿಐ ಪರಿಹಾರ, ಸಾಲಗಳ ಮೇಲಿನ ಬಡ್ಡಿದರದಲ್ಲಿ ಇಲ್ಲ ಬದಲಾವಣೆ
ವೆಚ್ಚ ಎಷ್ಟಾಗುತ್ತದೆ? :
ಮನಿ ಕಂಟ್ರೋಲ್ ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, 1 ಹೆಕ್ಟೇರ್ ಭೂಮಿಯಲ್ಲಿ 150 ರಿಂದ 200 ಕ್ವಿಂಟಾಲ್ ಶುಂಠಿಯನ್ನು ಬೆಳೆಯಬಹುದು. ಇದರ ಬೆಲೆ 7 ರಿಂದ 8 ಲಕ್ಷ ರೂಪಾಯಿಗಳು. ಶುಂಠಿ ಬೆಳೆ ಸಿದ್ಧವಾಗಲು 8 ರಿಂದ 9 ತಿಂಗಳು ಬೇಕಾಗಬಹುದು. ಆದರೆ, ಅದನ್ನು ಸಣ್ಣ ಭೂಮಿಯಲ್ಲಿ ಅಥವಾ ಪ್ಲಾಟ್ನಲ್ಲಿ ಕಡಿಮೆ ವೆಚ್ಚದಲ್ಲಿ ಕೂಡಾ ಬೆಳೆಯಬಹುದು.
15 ಲಕ್ಷದವರೆಗೆ ಲಾಭ :
ಶುಂಠಿ ಕೃಷಿಯಿಂದ ಸಿಗುವ ಲಾಭದ (Profit from ginger agriculture)ಬಗ್ಗೆ ಮಾತನಾಡುವುದಾದರೆ, 1 ಹೆಕ್ಟೇರ್ನಲ್ಲಿ 150-200 ಕ್ವಿಂಟಾಲ್ ಶುಂಠಿಯ ಇಳುವರಿ ಬರಬಹುದು. ಈ ದಿನಗಳಲ್ಲಿ ಶುಂಠಿಯನ್ನು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 80 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಒಂದು ಕೆಜಿಗೆ 60 ರೂ.ನಂತೆ ಪರಿಗಣಿಸಿದರೆ, ಒಂದು ಹೆಕ್ಟೇರ್ ಬೆಳೆಯಿಂದ ಸುಲಭವಾಗಿ 25 ಲಕ್ಷ ರೂ. ಬರುತ್ತದೆ. ಇದರಲ್ಲಿ ಎಲ್ಲಾ ಖರ್ಚು ಕಳೆದರೂ, 15 ಲಕ್ಷ ರೂ.ಗಳಷ್ಟು ಸುಲಭ ಲಾಭ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ