ಭುವನೇಶ್ವರ: ಒಡಿಶಾದ ಬಾಲಸೋರ್ ನಲ್ಲಿ ಅಪ್ರಾಪ್ತ ಬಾಲಕಿಗೆ 75 ವರ್ಷದ ವಯೋವೃದ್ದ ಲೈಂಗಿಕ ಕಿರುಕುಳ ನೀಡಿಡಿರುವ ಘಟನೆ ಬೆಳಕಿಗ ಬಂದಿದೆ.
ಈ ಘಟನೆಯು ಬಾಲಸೋರ್ ಜಿಲ್ಲೆಯ ಸಾನಾ ಮಟಿಪುರ ಗ್ರಾಮದಲ್ಲಿ ನಡೆದಿದ್ದು, ಈಗಾಗಲೇ ಬಾಲಕಿಯ ಪೋಷಕರು ಈ ವೃದ್ದನ ವಿರುದ್ದ ಸಿಮುಲಿಯಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಎಫ್ಐಆರ್ ಪ್ರಕಾರ, ವಯೋವೃದ್ದನ್ನು ಈ ಕೃತ್ಯವನ್ನು ತನ್ನ ಮನೆಯಲ್ಲಿಯೇ ನಡೆಸಿದ್ದಾನೆ ಎಂದು ಹೇಳಲಾಗಿದೆ. ಈಗಾಗಲೇ ಪೊಲೀಸರು ಆರೋಪಿಗಳನ್ನು ಎಫ್ಐಆರ್ ಆಧರಿಸಿ ಬಂಧಿಸಿದ್ದು ಇನ್ನು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಸಿಮುಲಿಯಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಜಯ್ ಪಾಂಡ" 75 ರ ವಯೋವೃದ್ದನು ಬಾಲಕಿಗೆ ಹಣ ಮತ್ತು ಚಾಕಲೇಟ್ ಆಸೆಯನ್ನು ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈಗ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ" ಎಂದು ಅವರು ತಿಳಿಸಿದ್ದಾರೆ