Diwali 2021: ಈ ರಾಶಿಯ ಜಾತಕದವರ ಪಾಲಿಗೆ ಈ ಬಾರಿಯ ದೀಪಾವಳಿ ಅಪಾರ ಧನವೃಷ್ಟಿ ತರಲಿದೆ, ನಿಮ್ಮ ರಾಶಿ ಯಾವುದು?

Diwali 2021: ವರ್ಷದ ಅತಿ ದೊಡ್ಡ ಹಬ್ಬ ದೀಪಾವಳಿಯ (Diwali) ಬಗ್ಗೆ ಸಾಮಾನ್ಯವಾಗಿ ಜನರು ವಿಭಿನ್ನ ಉತ್ಸಾಹವನ್ನು ಹೊಂದಿರುತ್ತಾರೆ. ಇದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ  (Goddess Laxmi) ಆರಾಧನೆಯ ಹಬ್ಬ. ಈ ವರ್ಷ, ಈ ಹಬ್ಬವು ಕೆಲವು ರಾಶಿಚಕ್ರದ (Zodiac Sign) ಜನರಿಗೆ ಸಾಕಷ್ಟು ಧನವೃಷ್ಟಿ ಹೊತ್ತು ತರುತ್ತಿದೆ.  

Written by - Nitin Tabib | Last Updated : Oct 5, 2021, 10:03 AM IST

    4 ರಾಶಿಯ ಜಾತಕದವರಿಗೆ ತುಂಬಾ ಶುಭಕರವಾಗಿರಲಿದೆ ದೀಪಾವಳಿ.

    ದೀಪಾವಳಿಯ ದಿನ ಗ್ರಹಗಳ ವಿಶೇಷ ಸಂಯೋಜನೆ ಏರ್ಪಡಲಿದೆ

    ದೇವಿ ಲಕ್ಷ್ಮಿಯ ಕೃಪಾವೃಷ್ಟಿಯಿಂದ ಅಪಾರ ಧನ ಹರಿದು ಬರಲಿದೆ.

Diwali 2021: ಈ ರಾಶಿಯ ಜಾತಕದವರ ಪಾಲಿಗೆ ಈ ಬಾರಿಯ ದೀಪಾವಳಿ ಅಪಾರ ಧನವೃಷ್ಟಿ ತರಲಿದೆ, ನಿಮ್ಮ ರಾಶಿ ಯಾವುದು? title=
Diwali 2021 (Representational Image)

Diwali 2021: ಹಬ್ಬದ ಸೀಸನ್ ಆರಂಭವಾಗುತ್ತಿದೆ. ನವರಾತ್ರಿಯ (Navratri 2021) ಆರಾಧನೆಯ ಜೊತೆಗೆ ಹಬ್ಬಗಳ ಋತು ಆರಂಭಗೊಳ್ಳಲಿದ್ದು, ದೀಪಾವಳಿ (Diwali 2021) ಹಬ್ಬ ಬರುವವರೆಗೆ ಅದು ತನ್ನ ಉತ್ತುಂಗಕ್ಕೆರಲಿದೆ. ಈ ವರ್ಷ, ದೀಪಾವಳಿಯ ಸಂದರ್ಭವು ತುಂಬಾ ವಿಶೇಷವಾಗಿರಲಿದೆ. ಶ್ರೀಮಂತಿಕೆಯ ದೇವಿ ಎಂದೇ ಕರೆಯಲಾಗುವ ಲಕ್ಷ್ಮಿದೇವಿಯ (Goddess Laxmi) ಈ ಅತಿ ದೊಡ್ಡ ಪರ್ವದ ಸಂದರ್ಭದಲ್ಲಿ ಗ್ರಹಗಳ ವಿಶೇಷ ಯೋಗ ಸಂಭವಿಸಲಿದ್ದು, ಇದು ಕೆಲ ರಾಶಿ ಚಕ್ರದ ಜಾತಕದವರ ಮೇಲೆ ವಿಶೇಷ ಕೃಪಾವೃಷ್ಟಿ (Shower Of Wealth) ಬೀರಲಿದೆ.

ಗ್ರಹಗಳ ಈ ಶುಭಯೋಗ ನಿರ್ಮಾಣಗೊಳ್ಳುತ್ತಿದೆ
ಈ ವರ್ಷ ನವೆಂಬರ್ 4 ರಂದು ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ಈ ಪರ್ವವನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣಪಕ್ಷದ ಅಮಾವಾಸ್ಯೆಗೆ ಆಚರಿಸಲಾಗುತ್ತದೆ. ಈ ಬಾರಿ ನವೆಂಬರ್ 4, 2021ರ ದೀಪಾವಳಿಯ ದಿನ ತುಲಾ ಹಾಗೂ ಮಕರ ರಾಶಿಯಲ್ಲಿ ಗ್ರಹಗಳ ಮಹತ್ವಪೂರ್ಣ ಸ್ಥಿತಿಗತಿ ನಿರ್ಮಾಣಗೊಳ್ಳುತ್ತಿದೆ. ಈ ದಿನ ತುಲಾ ರಾಶಿಯಲ್ಲಿ ಒಟ್ಟು 4 (Auspicious Planet) ಹಾಗೂ ಮಕರ ರಾಶಿಯಲ್ಲಿ 2 ಗ್ರಹಗಳ ಸಂಯೋಜನೆ ನಡೆಯಲಿದ್ದು (Planatary Transition), ಈ ಸಂಯೋಜನೆ ಒಟ್ಟು 4 ರಾಶಿ ಚಕ್ರದ ಜನರಿಗೆ ಬಾರಿ ಮಂಗಳಕರವಾಗಿರಲಿದೆ.

ಇದನ್ನೂ ಓದಿ-Tuesday Tips: ಮಂಗಳವಾರ ನೀವೂ ಈ ಕೆಲಸ ಮಾಡುತ್ತಿದ್ದರೆ ಹುಷಾರ್! ದೊಡ್ಡ ನಷ್ಟವಾಗಬಹುದು

ಈ ನಾಲ್ಕು ರಾಶಿ ಚಕ್ರದ ಚನರ ಪಾಲಿಗೆ ಶುಭವಾಗಿರಲಿದೆ ದೀಪಾವಳಿ
ದೀಪಾವಳಿಯ ಶುಭ ಸಂಧರ್ಭದಂದು ನಿರ್ಮಾಣಗೊಳ್ಳುತ್ತಿರುವ ಗ್ರಹಗಳ ವಿಶೇಷ ಸ್ತಿತಿಗತಿ, ವೃಷಭ, ಕರ್ಕ, ತುಲಾ ಹಾಗೂ ಧನು ರಾಶಿಯ ಜಾತಕದವರಿಗೆ ಅತ್ಯಂತ ಶುಭಕರವಾಗಿರಲಿದೆ. ಈ ರಾಶಿಗಳ ಜನರ ಪಾಲಿಗೆ ದೀಪಾವಳಿ ಆರ್ಥಿಕ ಸ್ಥಿತಿ ಬಲವರ್ಧನೆಯ ಕಾರಕ ಸಾಬೀತಾಗಲಿದೆ ಇದಲ್ಲದೆ, ಈ ರಾಶಿಗಳ ಜನರಿಗೆ ಬಡ್ತಿ ಅವಕಾಶ ಕೂಡ ಸಿಗುವ ಸಾಧ್ಯತೆ ಇದೆ. ಅವಿವಾಹಿತ ಜಾತಕದವರಿಗೆ ವಿವಾಹದ ಯೋಗ ನಿರ್ಮಾಣಗೊಳ್ಳಲಿದೆ.

ಇದನ್ನೂ ಓದಿ-Vastu tips: ಈ ಆರು ಮಾರ್ಗಗಳನ್ನು ಅನುಸರಿಸಿದರೆ ವೃತ್ತಿಜೀವನದಲ್ಲಿ ಸೋಲು ಹತ್ತಿರವೂ ಸುಳಿಯುವುದಿಲ್ಲ

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಹ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)

ಇದನ್ನೂ ಓದಿ-White Foods : ಊಟದ ತಟ್ಟೆಯಲ್ಲಿರುವ ಈ ಐದು ವಸ್ತುಗಳು ಆರೋಗ್ಯಕ್ಕೆ ಮುಳುವಾಗಬಹುದು, ಈ ಆಹಾರಗಳನ್ನು ತಕ್ಷಣ ದೂರ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News