Aryan Khan Drugs Case: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಎಲ್ಲಿದ್ದಾರೆ?

ದುಬೈನಲ್ಲಿ ಐಪಿಎಲ್ ಟೂರ್ನಿ ವೀಕ್ಷಿಸಲು ತೆರಳಿದ್ದ ಶಾರುಖ್ ತಮ್ಮ ‘ಪಠಾಣ್’ ಚಿತ್ರದ ಚಿತ್ರೀಕರಣಕ್ಕಾಗಿ ಸ್ಪೇನ್ ಗೆ ತೆರಳಬೇಕಾಗಿತ್ತು. ಆದರೆ ಈಗ ಪುತ್ರನ ಬಂಧನ ಆಗಿರುವುದರಿಂದ ನಟಿ ದೀಪಿಕಾ ಪಡುಕೋಣೆ ಜೊತೆಗಿನ ಶೂಟಿಂಗ್ ಅನ್ನು ರದ್ದುಗೊಳಿಸಿದ್ದಾರಂತೆ.

Written by - Puttaraj K Alur | Last Updated : Oct 4, 2021, 04:30 PM IST
  • ಡ್ರಗ್ಸ್ ಪ್ರಕರಣದಲ್ಲಿ ಪುತ್ರನ ಬಂಧನವಾಗಿದ್ದರೂ ಶಾರುಖ್ ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ
  • ಬಾಲಿವುಡ್ ಬಾದ್‌ಶಾ ತಮ್ಮ ‘ಪಠಾಣ್’ ಚಿತ್ರದ ಚಿತ್ರೀಕರಣಕ್ಕಾಗಿ ಸ್ಪೇನ್ ಗೆ ತೆರಳಬೇಕಾಗಿತ್ತು
  • ಆರ್ಯನ್ ಖಾನ್ ಬಂಧನದ ಬಳಿಕ ‘ಪಠಾಣ್’ ಚಿತ್ರದ ಶೂಟಿಂಗ್ ಸ್ಥಗಿತಗೊಳಿಸಿರುವ ಶಾರುಖ್ ಖಾನ್
Aryan Khan Drugs Case: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಎಲ್ಲಿದ್ದಾರೆ?   title=
ಎಲ್ಲಿದ್ದಾರೆ ಬಾಲಿವುಡ್ ಬಾದ್‌ಶಾ..?

ನವದೆಹಲಿ: ಮಾದಕ ವಸ್ತು ನಿಯಂತ್ರಣ ಬ್ಯೂರೋ (NCB) ಶನಿವಾರ ಮುಂಬೈನಲ್ಲಿ ನಡೆಯುತ್ತಿದ್ದ ಹೈಪ್ರೊಫೈಲ್ ರೇವ್‌ ಪಾರ್ಟಿ ಮೇಲೆ ದಾಳಿ ನಡೆಸಿ 8 ಜನರನ್ನು ಬಂಧಿಸಿತ್ತು. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ ಎಲ್ಲ ಆರೋಪಿಗಳನ್ನು ಭಾನುವಾರ ಸಂಜೆಯವರೆಗೆ ಎನ್‌ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇಂದು ಕೂಡ ಇದೇ ವಿಚಾರವಾಗಿ ಬಂಧಿತರ ವಿಚಾರಣೆ ನಡೆಯಲಿದೆ. ಇದೆಲ್ಲದರ ನಡುವೆ ಶಾರುಖ್ ಖಾನ್ ಎಲ್ಲಿದ್ದಾರೆ? ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

ಡ್ರಗ್ಸ್ ಪ್ರಕರಣದಲ್ಲಿ ತಮ್ಮ ಪುತ್ರನ ಬಂಧನವಾಗಿದ್ದರೂ ಶಾರುಖ್ ಖಾನ್(Shah Rukh Khan) ಇಲ್ಲಿಯವರೆಗೆ ಯಾವುದೇ ರೀತಿ ಪ್ರತಿಕ್ರಿಯಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರು ಶಾರುಖ್ ಖಾನ್ ಎಲ್ಲಿದ್ದಾರೆ ಎಂದು ನಿರಂತರವಾಗಿ ಪ್ರಶ್ನೆ ಮಾಡುತ್ತಿದ್ದಾರೆ. ಮುಂಬೈನ ಕರಾವಳಿಯಲ್ಲಿ ಕ್ರೂಸ್‌ ಹಡಗಿನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿಯನ್ನು(Rave Party) ಮಾದಕ ವಸ್ತು ನಿಯಂತ್ರಣ ದಳ(NCB)ದ ಅಧಿಕಾರಿಗಳು ಬಯಲು ಮಾಡಿದ್ದರು ಈ ವೇಳೆ ಹಡಗಿನಲ್ಲಿದ್ದ ಕೊಕೇನ್‌, ಹಶೀಶ್‌ ಮತ್ತು MDMA ಮಾತ್ರೆಗಳು ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಈ ವೇಳೆ ಶಾರುಖ್ ಪುತ್ರ ಆರ್ಯನ್ ಖಾನ್ ಕೂಡ ಎನ್‌ಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಹಾಕಿಕೊಂಡಿದ್ದರು.

ಇದನ್ನೂ ಓದಿ: ಅಕ್ಟೋಬರ್ 4 ವರೆಗೆ ಶಾರುಖ್ ಖಾನ್ ಪುತ್ರ ಆರ್ಯನ್ NCB ಕಸ್ಟಡಿಗೆ

ಮಗನ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಮುಂಬೈನ ಎನ್‌ಸಿಬಿ ಕಚೇರಿಗೆ ದೌಡಾಯಿಸಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಪುತ್ರನ ಬಂಧನವಾಗಿರುವುದಕ್ಕೆ ಖಾನ್ ಕುಟುಂಬ ಆತಂಕದಲ್ಲಿದೆ. ಶಾರುಖ್ ಪುತ್ರನ ಪರ ಬ್ಯಾಟಿಂಗ್ ಮಾಡಿದ್ದ ಬಾಲಿವುಡ್ ನಟ ಸುನೀಲ್ ಶೆಟ್ಟಿ, ‘ಆರ್ಯನ್(Aryan Khan) ಇನ್ನೂ ಚಿಕ್ಕಮಗು, ಆತನಿಗೆ ಉಸಿರಾಡಲು ಬಿಡಿ’ ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದರೆ ಶಾರುಖ್ ಮಾತ್ರ ತಮ್ಮ ಪುತ್ರನ ಬಂಧನದ ಬಗ್ಗೆ ಇದುವರೆಗೂ ಪ್ರತಿಕ್ರಿಯಿಸಿಲ್ಲ.  

ಶೂಟಿಂಗ್ ರದ್ದುಗೊಳಿಸಿದ ಶಾರುಖ್ ಖಾನ್

ಇತ್ತೀಚಿನ ದಿನಗಳಲ್ಲಿ ಶಾರುಖ್ ಖಾನ್(Shah Rukh Khan) ತುಂಬಾ ಬ್ಯುಸಿಯಾಗಿದ್ದಾರೆ. ಅವರು ಬಹುದಿನಗಳಿಂದ ಭಾರತದಲ್ಲಿರಲಿಲ್ಲ. ಒಂದು ಕಡೆ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದರೆ, ಮತ್ತೊಂದೆಡೆ ಅವರ ಚಿತ್ರ ‘ಪಠಾಣ್’ ಚಿತ್ರೀಕರಣ ನಡೆಯುತ್ತಿದೆ. ದುಬೈನಲ್ಲಿ ಐಪಿಎಲ್ ಟೂರ್ನಿ ವೀಕ್ಷಿಸಲು ತೆರಳಿದ್ದ ಶಾರುಖ್ ತಮ್ಮ ‘ಪಠಾಣ್’ ಚಿತ್ರದ ಚಿತ್ರೀಕರಣಕ್ಕಾಗಿ ಸ್ಪೇನ್ ಗೆ ತೆರಳಬೇಕಾಗಿತ್ತು. ಆದರೆ ಈಗ ಪುತ್ರನ ಬಂಧನ ಆಗಿರುವುದರಿಂದ ನಟಿ ದೀಪಿಕಾ ಪಡುಕೋಣೆ ಜೊತೆಗಿನ ಶೂಟಿಂಗ್ ಅನ್ನು ರದ್ದುಗೊಳಿಸಿದ್ದಾರಂತೆ.

ಇದನ್ನೂ ಓದಿ: Salman Khan: ಡ್ರಗ್ ಪ್ರಕರಣದಲ್ಲಿ ಆರ್ಯನ್ ಬಂಧನ, ಶಾರುಖ್ ಭೇಟಿಗಾಗಿ ಮನ್ನತ್ ತಲುಪಿದ ಸಲ್ಮಾನ್ ಖಾನ್

ಶಾರುಖ್ ಸಿನಿಮಾದ ಚಿತ್ರೀಕರಣ ಸ್ಪೇನ್‌ನಲ್ಲಿ ನಡೆಯಬೇಕಿತ್ತು

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಚಿತ್ರದ ಹಾಡನ್ನು ಸ್ಪೇನ್‌ನಲ್ಲಿ ಚಿತ್ರೀಕರಿಸಬೇಕಿತ್ತು. ಆರ್ಯನ್ ಖಾನ್ ಪ್ರಕರಣ ಮುಂದುವರಿದರೆ ಚಿತ್ರೀಕರಣವನ್ನು ಮುಂದೂಡಲಾಗುತ್ತದೆ. ‘ತಮ್ಮ ಪುತ್ರನ ಬಂಧನದ ಬಗ್ಗೆ ಶಾರುಖ್ ಹೇಳಿಕೆ ನೀಡುವ ಸಾಧ್ಯತೆ ಕಡಿಮೆ. ಡ್ರಗ್ಸ್ ಪ್ರಕರಣದಲ್ಲಿ NCB ಅಧಿಕಾರಿಗಳು ತೆಗೆದುಕೊಳ್ಳುವ ಕ್ರಮಗಳ ಮೇಲೆ ಶಾರುಖ್ ಕಾನೂನು ಆಯ್ಕೆಗಳ ಬಗ್ಗೆ ನಿರ್ಧರಿಸಲಿದ್ದಾರೆ. ಸದ್ಯ ಶಾರುಖ್ ಎನ್‌ಸಿಬಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಪ್ರಕರಣದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಶಾರುಖ್ ಸದ್ಯ ಮುಂಬೈನಲ್ಲಿಯೇ ಇದ್ದರೂ ಮಾಧ್ಯಮಗಳ ಮುಂದೆ ಬಂದಿಲ್ಲ’ ಅಂತಾ ಖಾನ್ ಕುಟುಂಬಕ್ಕೆ ಹತ್ತಿರವಿರುವ ಮೂಲಗಳು ತಿಳಿಸಿವೆ.

ಶಾರುಖ್ ಖಾನ್ ಕುಟುಂಬಕ್ಕೆ ಹೆಚ್ಚಿದ ತಲೆನೋವು

ಡ್ರಗ್ಸ್ ಪಾರ್ಟಿ ಪ್ರಕರಣ ಖಾನ್ ಕುಟುಂಬದ ತಲೆನೋವು ಹೆಚ್ಚಿಸಿದೆ. ಆರ್ಯನ್ ಖಾನ್ ಜೊತೆಗೆ ಡ್ರಗ್ ಪೆಡ್ಲರ್ ಅರ್ಬಾಜ್ ಮರ್ಚೆಂಟ್ ಹಾಗೂ ಡಿಸೈನರ್ ಮುನ್‌ಮುನ್ ದಮೇಚಾ ಅವರನ್ನು ಮುಂಬೈ ಕೋರ್ಟ್ ಅ.4ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿದೆ. ಆರ್ಯನ್ ವಿರುದ್ಧ ಸೆಕ್ಷನ್ 27 ಹಾಗೂ ಮಾದಕದ್ರವ್ಯ ಹಾಗೂ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News