ಪ್ರಧಾನಿ ಮೋದಿಯವರ ಹೊಸ ವಿವಿಐಪಿ ಹೈಟೆಕ್ ವಿಮಾನದ ವಿಶೇಷತೆ ಏನು? ಇಲ್ಲಿದೆ photos

ಹಲವು ವರ್ಷಗಳಲ್ಲಿ ಪ್ರಧಾನಿಯವರ ವಿಮಾನವು ಫ್ರಾಂಕ್‌ಫರ್ಟ್‌ನಲ್ಲಿ ನಿಲ್ಲದಿರುವುದು ಇದೇ ಮೊದಲು. 

ನವದೆಹಲಿ : ದೇಶದ ಪ್ರಧಾನಿ ಮತ್ತು ರಾಷ್ಟ್ರಪತಿಗಳು ಪ್ರಯಾಣಿಸುವ ವಿಮಾನವು ಎಷ್ಟು ವಿಶೇಷವಾಗಿದೆ ಎನ್ನುವುದು ನಿಮಗೆ ತಿಳಿದಿದೆಯೇ? ಪ್ರಸ್ತುತ, ಭಾರತೀಯ ಪ್ರಧಾನಿ ಮತ್ತು ರಾಷ್ಟ್ರಪತಿ ಅಮೆರಿಕದಲ್ಲಿ ತಯಾರಿಸಲಾದ 'ಏರ್ ಇಂಡಿಯಾ ಒನ್' ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಪ್ರಸ್ತುತ, ಪ್ರಧಾನಿ ಮೋದಿ  ತಮ್ಮ 'ಏರ್ ಇಂಡಿಯಾ ಒನ್' ಹೈಟೆಕ್ ವಿಮಾನದ ಮೂಲಕ ಯುಎಸ್ ಪ್ರವಾಸಕ್ಕೆ ತೆರಳಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಇಲ್ಲಿಯವರೆಗೆ, ಅಮೆರಿಕಕ್ಕೆ ಹೋಗುತ್ತಿದ್ದ ಎಲ್ಲಾ ಭಾರತೀಯ ಪ್ರಧಾನಮಂತ್ರಿಗಳ ವಿಮಾನ ಫ್ರಾಂಕ್‌ಫರ್ಟ್‌ನಲ್ಲಿ ನಿಲ್ಲಬೇಕಾಗುತ್ತಿತ್ತು. ಆದರೆ 'ಏರ್ ಇಂಡಿಯಾ ಒನ್' ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇರ ವಾಷಿಂಗ್ಟನ್‌ಗೆ ತೆರಳಿದ್ದಾರೆ. ಹಲವು ವರ್ಷಗಳಲ್ಲಿ ಪ್ರಧಾನಿಯವರ ವಿಮಾನವು ಫ್ರಾಂಕ್‌ಫರ್ಟ್‌ನಲ್ಲಿ ನಿಲ್ಲದಿರುವುದು ಇದೇ ಮೊದಲು. ವಾಷಿಂಗ್ಟನ್‌ನಲ್ಲಿ QUAD ಶೃಂಗಸಭೆ ಮತ್ತು ನ್ಯೂಯಾರ್ಕ್‌ನಲ್ಲಿ UNGC ಭಾಷಣಕ್ಕಾಗಿ ಮೋದಿ ಅಮೆರಿಕ ಪ್ರವಾಸದಲ್ಲಿದ್ದಾರೆ.

2 /5

ಏರ್ ಇಂಡಿಯಾ ಒನ್‌ನ ಬಾಹ್ಯ ನೋಟದ ಕುರಿತು ಹೇಳುವುದಾದರೆ, ಅದರ ಒಂದು ಬದಿಯಲ್ಲಿ ಅಶೋಕ ಚಿಹ್ನೆಯಿದೆ.  ಇನ್ನೊಂದು ಬದಿಯಲ್ಲಿ ಬಾಗಿಲಿನಲ್ಲಿ, ಭಾರತ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ಮತ್ತೊಂದೆಡೆ,  ಇಂಗ್ಲಿಷ್‌ನಲ್ಲಿ ಇಂಡಿಯಾ ಎಂದು ಬರೆಯಲಾಗಿದೆ. ಅಲ್ಲದೆ, ಭಾರತದ ರಾಷ್ಟ್ರ ಧ್ವಜವನ್ನು ಕೂಡಾ ಚಿತ್ರಿಸಲಾಗಿದೆ.

3 /5

ವಿಮಾನದ ಒಳಗೆ ಒಂದು ಕಾನ್ಫರೆನ್ಸ್ ಕೊಠಡಿ, ವಿವಿಐಪಿ ಪ್ರಯಾಣಿಕರಿಗಾಗಿ ಒಂದು ಕ್ಯಾಬಿನ್, ತುರ್ತು ವೈದ್ಯಕೀಯ ಕೇಂದ್ರ ಮತ್ತು ಇತರ ಗಣ್ಯರು ಮತ್ತು ಸಿಬ್ಬಂದಿಗೆ ಹಲವಾರು ಆಸನಗಳಿವೆ. ಏರ್ ಇಂಡಿಯಾ ಒನ್ ನ ಒಂದು ವಿಶೇಷವೆಂದರೆ ಇಂಧನ ತುಂಬಿದ ನಂತರ, ಈ ವಿಮಾನವು 17 ಗಂಟೆಗಳ ಕಾಲ ನಿರಂತರವಾಗಿ ಹಾರಲು ಸಾಧ್ಯವಾಗುತ್ತದೆ.  

4 /5

ಈ ವಿಮಾನವು ಸುಧಾರಿತ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಅನ್ನು ಹೊಂದಿದ್ದು, ಅದು ವಿಮಾನದ ದಾಳಿಯನ್ನು ತಡೆಯುವುದಲ್ಲದೆ ದಾಳಿಯ ಸಮಯದಲ್ಲಿ ಪ್ರತಿದಾಳಿ ಮಾಡುವ ಸಾಮರ್ಥ್ಯವನ್ನು ಕೂಡಾ ಹೊಂದಿದೆ. ಶತ್ರುಗಳ ರೇಡಾರ್ ಸಿಗ್ನಲ್‌ಗಳನ್ನು ಸ್ವೀಕರಿಸುತ್ತದೆ ಮತ್ತು ಹತ್ತಿರದ ಕ್ಷಿಪಣಿಗಳ ದಿಕ್ಕನ್ನು ಬದಲಿಸಲು ಸಾಧ್ಯವಾಗುವಂತಹ ಸೆಲ್ಫ್ ಪ್ರೊಟೆಕ್ಷನ್  ಸೂಟ್ (SPS) ಅನ್ನು ಹೊಂದಿದ ಮೊದಲ ಭಾರತೀಯ ವಿಮಾನ ಇದಾಗಿದೆ.  

5 /5

ವಾಯುಪಡೆಯ ವಿಮಾನಗಳಂತೆ, ಈ ಹೊಸ ವಿಮಾನಗಳು ಸಹ ಅನಿಯಮಿತ ಶ್ರೇಣಿಯ ಹಾರಾಟವನ್ನು ಹೊಂದಿವೆ.  ಇದರಲ್ಲಿ ಪ್ರಪಂಚದಾದ್ಯಂತ ಸಂಚರಿಸಬಹುದು. ಈ ವಿಮಾನದಲ್ಲಿ, ತುರ್ತು ಸಂದರ್ಭಗಳಲ್ಲಿ ಹಾರಾಟದ ಮಧ್ಯೆಯೇ  ಇಂಧನವನ್ನು ತುಂಬಬಹುದು. ಟ್ವಿನ್  GE90-115 ಎಂಜಿನ್ ಹೊಂದಿರುವ 'ಏರ್ ಇಂಡಿಯಾ ಒನ್' ಗರಿಷ್ಠ 559.33 mph ವೇಗದಲ್ಲಿ ಹಾರಬಲ್ಲದು.