Gold Price Today: ಖರೀದಿದಾರರಿಗೆ ಗುಡ್ ನ್ಯೂಸ್, ಚಿನ್ನದ ದರದಲ್ಲಿ ಭಾರೀ ಇಳಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಬಾಳುವ ಲೋಹದ ಬೆಲೆಗಳು ಸ್ಥಿರವಾಗಿರುವುದರಿಂದ ಭಾರತದಲ್ಲಿ ಇಂದು ಚಿನ್ನದ ದರ ಪ್ರತಿ 100 ಗ್ರಾಂಗೆ 2,600 ರೂ.ನಷ್ಟು ಇಳಿಕೆಯಾಗಿದೆ.

Written by - Puttaraj K Alur | Last Updated : Sep 21, 2021, 11:28 AM IST
  • ಹಬ್ಬದ ಋತುವಿನಲ್ಲಿ ನಿರಂತರವಾಗಿ ಕುಸಿಯುತ್ತಿರುವ ಚಿನ್ನದ ದರ
  • ಮಂಗಳವಾರ ಪ್ರತಿ 100 ಗ್ರಾಂಗೆ 2,600 ರೂ.ನಷ್ಟು ಕುಸಿತ ಕಂಡ ಚಿನ್ನ
  • ಹಳದಿ ಲೋಹದ ಬೆಲೆ ಇಳಿಕೆಯಿಂದ ದೇಶದ ಜನರ ಮೊಗದಲ್ಲಿ ಮಂದಹಾಸ
Gold Price Today: ಖರೀದಿದಾರರಿಗೆ ಗುಡ್ ನ್ಯೂಸ್, ಚಿನ್ನದ ದರದಲ್ಲಿ ಭಾರೀ ಇಳಿಕೆ title=
ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ ಕಂಡಿದೆ(Photo Courtesy:@India.com)

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಬಾಳುವ ಲೋಹದ ಬೆಲೆಗಳು ಸ್ಥಿರವಾಗಿರುವುದರಿಂದ ಭಾರತದಲ್ಲಿ ಇಂದು ಚಿನ್ನದ ದರ ಪ್ರತಿ 100 ಗ್ರಾಂಗೆ 2,600 ರೂ.ನಷ್ಟು ಇಳಿಕೆಯಾಗಿದೆ. ಈ ಕುಸಿತದ ಬಳಿಕ ಚಿನ್ನದ ದರವು 10 ಗ್ರಾಂ 22 ಕ್ಯಾರೆಟ್‌ಗೆ 45,500 ರೂ. ಕ್ಕಿಂತಲೂ ಕಡಿಮೆಯಾಗಿದೆ. ಹಬ್ಬದ ಋತುವಿನಲ್ಲಿ ಹಳದಿ ಲೋಹದ ದರದಲ್ಲಿ ಇಳಿಕೆಯಾಗುತ್ತಿರುವುದರಿಂದ ದೇಶದ ಸಾಮಾನ್ಯ ಖರೀದಿದಾರರಿಗೆ ಹೆಚ್ಚಿನ ಸಂತೋಷ ಸಿಗುತ್ತಿದೆ. ಚಿನ್ನವನ್ನು ಖರೀದಿಸಲು ಜನರಿಗೆ ಇದೇ ಸುರ್ವಣಾವಕಾಶವೆಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  

ಭಾರತದ ಬಹು ಸರಕು ವಿನಿಮಯ ಕೇಂದ್ರ(Multi Commodity Exchange of India)ದಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 46,285 ರೂ. ಇದೆ. ಚಿನ್ನದ ದರವು 8,761 ಲಾಟ್ ಗಳ ವ್ಯಾಪಾರ ವಹಿವಾಟಿನಲ್ಲಿ ಶೇ.0.65 ರಷ್ಟು ಹೆಚ್ಚಾಗಿದೆ. ನಿರಂತರವಾಗಿ ಕುಸಿತ ಕಾಣುತ್ತಿರುವ ಚಿನ್ನ 6 ತಿಂಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಇದನ್ನೂ ಓದಿ: SBI ಗ್ರಾಹಕರ ಗಮನಕ್ಕೆ! ನೀವು ATM Card ಹೊಂದಿದ್ದರೆ ಎಚ್ಚರ : ಬ್ಯಾಂಕ್ ಪ್ರಮುಖ ಮಾಹಿತಿಯೊಂದನ್ನ ನೀಡಿದೆ 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ

ಸೋಮವಾರ(ಸೆ.20)ದಂದು ಚಿನ್ನದ ಬೆಲೆ(Gold price) 5 ವಾರಗಳಿಗಿಂತಲೂ ಕಡಿಮೆ ಮಟ್ಟ ತಲುಪಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಫೆಡರಲ್ ರಿಸರ್ವ್‌ನ ಪಾಲಿಸಿ ಸಭೆಗಿಂತ ಮುಂಚಿತವಾಗಿ ಚಿನ್ನದ ಬೆಲೆಯಲ್ಲಿ ಕುಸಿತವಾಗಿದೆ. ಈ ಮಧ್ಯೆ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ ಗೆ 1,763.60 ಡಾಲರ್‌ ಇದ್ದರೆ, ಯುಎಸ್ ಚಿನ್ನದ ಫ್ಯೂಚರ್ಸ್ 1,764.40 ಡಾಲರ್‌ಗೆ ಇಳಿದಿದೆ ಎಂದು ವರದಿ ತಿಳಿಸಿದೆ.

ನಗರ

22K Gold (Per 10gm) 24K Gold (Per 10gm)

ಬೆಂಗಳೂರು

43,500 ರೂ. 47,460 ರೂ.

ದೆಹಲಿ

45,440 ರೂ. 49,570 ರೂ.

ಮುಂಬೈ

45,120 ರೂ. 46,120 ರೂ.

ಚೆನ್ನೈ

Rs 43,740 ರೂ.  47,720 ರೂ.

ಕೋಲ್ಕತ್ತಾ

45,540 ರೂ.  48,240 ರೂ.

ಹೈದರಾಬಾದ್

43,500 ರೂ. 47,460 ರೂ.

ಅಹಮದಾಬಾದ್

44,370 ರೂ. 47,890 ರೂ.

ಲಕ್ನೋ

45,440 ರೂ. 49,570 ರೂ.

ಕೇರಳ

43,500 ರೂ. 47,460 ರೂ.

ಇದನ್ನೂ ಓದಿ: Online Passport Apply : ಈಗ ಮನೆಯಿಂದಲೇ Passport ಗೆ ಅರ್ಜಿ ಸಲ್ಲಿಸಬಹುದು - ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ!

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿರುವುದು ಖರೀದಿದಾರರಿಗೆ ಖುಷಿ ನೀಡುತ್ತಿದೆ. ಕಡಿಮೆ ಬೆಲೆಯಲ್ಲಿ ಹಳದಿ ಲೋಹ ಲಭ್ಯವಾಗುತ್ತಿರುವುದರಿಂದ ಹಬ್ಬದ ದಿನಗಳಲ್ಲಿ ಚಿನ್ನ ಖರೀದಿ ಜೋರಾಗಿದೆ.

ಮೇಲೆ ಉಲ್ಲೇಖಿಸಿರುವ ಚಿನ್ನದ ಬೆಲೆ ಸರಕು ಮತ್ತು ಸೇವಾ ತೆರಿಗೆ (GST) ಇಲ್ಲದಿದ್ದು ಮತ್ತು ಆಭರಣ ಅಂಗಡಿಗಳಲ್ಲಿನ ದರಕ್ಕೆ ಹೊಂದಿಕೆಯಾಗದೇ ಇರಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News