ಬೆಂಗಳೂರು: ಶುಕ್ರವಾರದಂದು ನಡೆದ ಲಸಿಕಾ ಅಭಿಯಾನದಲ್ಲಿ ಕರ್ನಾಟಕ ರಾಜ್ಯವು ಒಂದೇ ದಿನದಲ್ಲಿ 27.8 ಲಕ್ಷ ಡೋಸ್ ಕೋವಿಡ್ -19 ಲಸಿಕೆಯನ್ನು ಹಾಕುವ ಮೂಲಕ ಅತಿ ಹೆಚ್ಚು ಕೋವಿಡ್ ಲಸಿಕೆಗಳನ್ನು ಹಾಕಿದ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಪ್ರಕಾರ,31.75 ಲಕ್ಷ ಡೋಸ್ಗಳಿಗೆ ನಿಗದಿಪಡಿಸಿದ ಒಟ್ಟು ಗುರಿಯಲ್ಲಿ ಶೇಕಡಾ 88 ರಷ್ಟನ್ನು ರಾತ್ರಿ 9.30 ಕ್ಕೆ ಸಾಧಿಸಲಾಗಿದೆ.ಎಲ್ಲಾ 30 ಜಿಲ್ಲೆಗಳಲ್ಲಿ 'ಮೆಗಾ ವ್ಯಾಕ್ಸಿನೇಷನ್ ಡ್ರೈವ್' ನಡೆಸಲಾಯಿತು ಮತ್ತು ಬಿಬಿಎಂಪಿ 25 ರಿಂದ 30 ಲಕ್ಷ ಡೋಸ್ಗಳನ್ನು ನೀಡುವ ಗುರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಂಗಳವಾರ ಘೋಷಿಸಿದರು.
ಇದನ್ನೂ ಓದಿ : T20I World Cup: ವಿಶ್ವಕಪ್ ನಂತರ ಟಿ 20 ತಂಡದ ನಾಯಕತ್ವದಿಂದ ಕೆಳಗಿಳಿಯಲಿರುವ ವಿರಾಟ್ ಕೊಹ್ಲಿ
ಈಗ ವಿಚಾರವನ್ನು ಟ್ವೀಟ್ ಮೂಲಕ ತಿಳಿಸಿರುವ ಆರೋಗ್ಯ ಸಚಿವ ಕೆ ಸುಧಾಕರ್ 'ಇಂದಿನ ಲಸಿಕೆ ಅಭಿಯಾನದಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ.ನಮ್ಮ ನರ್ಸಿಂಗ್ ಆಫೀಸರ್ಗಳು, ವೈದ್ಯರು, ಪ್ರಾಥಮಿಕ ಆರೋಗ್ಯ ಅಧಿಕಾರಿಗಳು, ಆರೋಗ್ಯ ತಪಾಸಣೆ ಅಧಿಕಾರಿಗಳು,ಫಾರ್ಮಸಿ ಅಧಿಕಾರಿಗಳು, ಬಿಎಚ್ಇಒಗಳು, ಆಶಾ ಕಾರ್ಯಕರ್ತೆಯರು ಮತ್ತು ಇತರರ ತಂಡಕ್ಕೆ ಧನ್ಯವಾದಗಳು' ಎಂದು ಟ್ವೀಟ್ ಮಾಡಿದ್ದಾರೆ.
Karnataka topped the country in today’s vaccination drive. Grateful to our team of nursing officers, doctors, primary health care officers, health inspecting officers, pharmacy officers, BHEOs, Asha workers and others for the stellar performance!@CMofKarnataka @mansukhmandviya
— Dr Sudhakar K (@mla_sudhakar) September 17, 2021
ಇದನ್ನೂ ಓದಿ :ಗೌರಿ-ಗಣೇಶ ಹಬ್ಬಕ್ಕೆ ಬಿಜೆಪಿ ಸರ್ಕಾರ ಜನತೆಗೆ ನೀಡಿದ ಕೊಡುಗೆ ಬೆಲೆ ಏರಿಕೆ: ಕಾಂಗ್ರೆಸ್ ಟೀಕೆ
ಆರೋಗ್ಯ ಇಲಾಖೆಯ ಪ್ರಕಾರ, ಶುಕ್ರವಾರ ಹೆಚ್ಚಿನ ವ್ಯಾಕ್ಸಿನೇಷನ್ ಹೊಂದಿರುವ ಜಿಲ್ಲೆಗಳಲ್ಲಿ : ಬಿಬಿಎಂಪಿ (4.04 ಲಕ್ಷ ಡೋಸ್), ಬೆಳಗಾವಿ (2.49 ಲಕ್ಷ ಡೋಸ್), ದಕ್ಷಿಣ ಕನ್ನಡ (1.34 ಲಕ್ಷ ಡೋಸ್), ಬಳ್ಳಾರಿ (1.40 ಲಕ್ಷ ಡೋಸ್), ತುಮಕೂರು (1.27 ಲಕ್ಷ ಡೋಸ್) ಮತ್ತು ಮಂಡ್ಯ (1.17 ಲಕ್ಷ ಡೋಸ್ಗಳು) ಕ್ರಮವಾದ ಸ್ಥಾನದಲ್ಲಿವೆ.
ನಿಗದಿತ ಗುರಿಯನ್ನು ಮೀರಿದ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ (ಬಿಬಿಎಂಪಿ ಹೊರತುಪಡಿಸಿ) ಶೇ 136 ಸಾಧನೆಯನ್ನು ವರದಿ ಮಾಡಿದೆ, ನಂತರ ಶಿವಮೊಗ್ಗ (130%), ಧಾರವಾಡ (119%), ರಾಮನಗರ (118%), ಹಾಸನ (115%) ), ದಾವಣಗೆರೆ (104%), ಮತ್ತು ಚಿಕ್ಕಮಗಳೂರು (102%).ಸ್ಥಾನಗಳನ್ನು ಪಡೆದಿವೆ
ಬಿಬಿಎಂಪಿ ಮಿತಿಯಲ್ಲಿ 3.92 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದ್ದು, ಇದು 5 ಲಕ್ಷದ ಗುರಿಯನ್ನು ಹೊಂದಿತ್ತು. ಏತನ್ಮಧ್ಯೆ, ಕಲ್ಬುರ್ಗಿ (37%), ಕೊಪ್ಪಳ (55%) ಮತ್ತು ರಾಯಚೂರು (57%) ಕಳಪೆ ಪ್ರದರ್ಶನ ನೀಡುತ್ತಿರುವ ಜಿಲ್ಲೆಗಳಾಗಿದ್ದು, ಉಳಿದ ಎಲ್ಲಾ ಜಿಲ್ಲೆಗಳು ನಿಗದಿತ ಗುರಿಯ ಅರ್ಧಕ್ಕಿಂತ ಹೆಚ್ಚಿನದನ್ನು ಸಾಧಿಸಿವೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,003 ಹೊಸ ಪ್ರಕರಣಗಳು, 18 ಸಾವುಗಳು ಸಂಭವಿಸಿವೆ.
ಇದನ್ನೂ ಓದಿ-ಅಕ್ಟೋಬರ್ ನಲ್ಲಿ ಮೂರನೇ ಕೊರೊನಾ ಅಲೆ, ದಿನಕ್ಕೆ 4-5 ಲಕ್ಷ ಪ್ರಕರಣ ದಾಖಲು ಸಾಧ್ಯತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.