Unemployment Allowance: ನಿರುದ್ಯೋಗಿಗಳಿಗೆ ಸರ್ಕಾರದಿಂದ ಸಿಗುತ್ತೆ 50% ವೇತನ, ಈ ರೀತಿ ಪ್ರಯೋಜನ ಪಡೆಯಿರಿ

                       

Unemployment Allowance: ಕರೋನಾ ಅವಧಿಯಲ್ಲಿ ನಿರುದ್ಯೋಗಿಗಳಿಗೆ ಸರ್ಕಾರದಿಂದ ನಿರುದ್ಯೋಗ ಭತ್ಯೆಯನ್ನು ವ್ಯವಸ್ಥೆ ಮಾಡಲಾಗಿದೆ. ನಿರುದ್ಯೋಗಿಗಳಿಗೆ ಭತ್ಯೆ ನೀಡಲು ಸರ್ಕಾರವು 'ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ' ಎಂಬ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ 50 ಸಾವಿರಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ.  ಈ ಯೋಜನೆಯನ್ನು ಇಎಸ್‌ಐಸಿ ನಡೆಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

Unemployment Allowance: Govt giving 50% of salary to unemployed:- Unemployment Allowance (ನಿರುದ್ಯೋಗ ಭತ್ಯೆ): ಕರೋನಾ ಅವಧಿಯಲ್ಲಿ, ಅಸಂಖ್ಯಾತ ಜನರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಅಂತಹವರಿಗೆ ಅನುಕೂಲವಾಗಲೆಂದು ನಿರುದ್ಯೋಗ ಭತ್ಯೆಯನ್ನು ನೀಡಲು ಸರ್ಕಾರದಿಂದ ವ್ಯವಸ್ಥೆ ಮಾಡಲಾಗಿದೆ. ನಿರುದ್ಯೋಗಿಗಳಿಗೆ ಭತ್ಯೆ ನೀಡಲು ಸರ್ಕಾರವು 'ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ' ಎಂಬ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ 50 ಸಾವಿರಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯನ್ನು ನೌಕರರ ರಾಜ್ಯ ವಿಮಾ ನಿಗಮ (ESIC) ನಡೆಸುತ್ತದೆ. ಕರೋನಾ ಸಾಂಕ್ರಾಮಿಕದ ದೃಷ್ಟಿಯಿಂದ, ಸರ್ಕಾರವು 'ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ' (Atal Bimit Vyakti Kalyan Scheme) ಅನ್ನು 30 ಜೂನ್ 2022 ರವರೆಗೆ ವಿಸ್ತರಿಸಿದೆ. ಮೊದಲು ಈ ಯೋಜನೆ 30 ಜೂನ್ 2021 ರವರೆಗೆ ಮಾತ್ರ ಇತ್ತು.

2 /5

What is Atal Bimit Vyakti Kalyan Scheme? ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆಯಡಿ (Atal Bimit Vyakti Kalyan Scheme), ನಿರುದ್ಯೋಗಿಗಳಿಗೆ ಉದ್ಯೋಗ ನಷ್ಟದ ಸಂದರ್ಭದಲ್ಲಿ ಹಣಕಾಸಿನ ಸಹಾಯಕ್ಕಾಗಿ ಭತ್ಯೆಯನ್ನು ನೀಡಲಾಗುತ್ತದೆ. ನಿರುದ್ಯೋಗಿ ವ್ಯಕ್ತಿಯು 3 ತಿಂಗಳ ಕಾಲ ಈ ಭತ್ಯೆಯನ್ನು ಪಡೆಯಬಹುದು. 3 ತಿಂಗಳವರೆಗೆ ಅವನು ಸರಾಸರಿ ಸಂಬಳದ 50% ಕ್ಲೇಮ್ ಮಾಡಬಹುದು. ನಿರುದ್ಯೋಗಿಯಾದ 30 ದಿನಗಳ ನಂತರ, ಈ ಯೋಜನೆಗೆ ಸೇರುವ ಮೂಲಕ ನಿರುದ್ಯೋಗಿ ವ್ಯಕ್ತಿಯು ಇದರ ಪ್ರಯೋಜನವನ್ನು ಪಡೆಯಬಹುದು.

3 /5

How to take advantage of the scheme:- ಈ ಯೋಜನೆಯ ಲಾಭ ಪಡೆಯಲು, ESIC ಗೆ ಸಂಬಂಧಿಸಿದ ಉದ್ಯೋಗಿಗಳು ESIC ಯ ಯಾವುದೇ ಶಾಖೆಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಇದರ ನಂತರ ಅರ್ಜಿಯನ್ನು ಇಎಸ್‌ಐಸಿ ದೃಢೀಕರಿಸುತ್ತದೆ ಮತ್ತು ನೀವು ಒದಗಿಸಿರುವ ಮಾಹಿತಿ ಮತ್ತು ದಾಖಲೆಗಳು ಸರಿಯಾಗಿದ್ದರೆ, ಮೊತ್ತವನ್ನು ಸಂಬಂಧಪಟ್ಟ ಉದ್ಯೋಗಿಯ ಖಾತೆಗೆ ನಿರುದ್ಯೋಗ ಭತ್ಯೆ (Unemployment Allowance) ಕಳುಹಿಸಲಾಗುತ್ತದೆ. ಇದನ್ನೂ ಓದಿ- ಅಕ್ಟೋಬರ್ 1 ರಿಂದ ಪ್ರಯೋಜನಕ್ಕಿಲ್ಲ ಹಳೆಯ ಚೆಕ್ ಬುಕ್ , ಈ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದರೆ ತಕ್ಷಣ ಬ್ಯಾಂಕ್ ಅನ್ನು ಸಂಪರ್ಕಿಸಿ

4 /5

Who can avail the scheme? >> ಖಾಸಗಿ ವಲಯದಲ್ಲಿ (ಸಂಘಟಿತ ವಲಯ) ಕೆಲಸ ಮಾಡುವ ಸಂಬಳದ ಜನರು ನಿರುದ್ಯೋಗಿಗಳಾದಾಗ ಈ ಯೋಜನೆಯ ಲಾಭಗಳನ್ನು ಪಡೆಯಬಹುದು. ಆದರೆ ನೆನಪಿಡಿ ಅವರ ಕಂಪನಿ ಪ್ರತಿ ತಿಂಗಳು PF / ESI ವೇತನವನ್ನು ಕಡಿತಗೊಳಿಸುತ್ತಿರಬೇಕು. >> ಖಾಸಗಿ ಕಂಪನಿಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇಎಸ್‌ಐ ಲಾಭ ಲಭ್ಯವಿದೆ. ಇದಕ್ಕಾಗಿ ಇಎಸ್‌ಐ ಕಾರ್ಡ್ ತಯಾರಿಸಲಾಗುತ್ತದೆ. >> ಉದ್ಯೋಗಿಗಳು ಈ ಕಾರ್ಡ್ ಅಥವಾ ಕಂಪನಿಯಿಂದ ತಂದ ಡಾಕ್ಯುಮೆಂಟ್ ಆಧಾರದ ಮೇಲೆ ಯೋಜನೆಯ ಲಾಭವನ್ನು ಪಡೆಯಬಹುದು. ಮಾಸಿಕ ಆದಾಯ 21 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಇರುವ ಉದ್ಯೋಗಿಗಳಿಗೆ ಇಎಸ್‌ಐ ಲಾಭ ಲಭ್ಯವಿದೆ. ಇದನ್ನೂ ಓದಿ- ಈ ಯೋಜನೆಯಲ್ಲಿ 417 ರೂ. ಹೂಡಿದರೆ ಸಾಕು , ಪೋಸ್ಟ್ ಆಫೀಸ್ ನೀಡುತ್ತಿದೆ ಕೋಟ್ಯಾಧಿಪತಿಯಾಗುವ ಅವಕಾಶ..!

5 /5

How to register in Atal Bimit Vyakti Kalyan Scheme:- * ಯೋಜನೆಯ ಲಾಭ ಪಡೆಯಲು, ನೀವು ಮೊದಲು ಇಎಸ್‌ಐಸಿ ವೆಬ್‌ಸೈಟ್‌ನಲ್ಲಿ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆಯ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. * https://www.esic.nic.in/attachments/circularfile/93e904d2e3084d65fdf7793… ನೇರ ಲಿಂಕ್ ಇಲ್ಲಿದೆ. ಇಲ್ಲಿ ಭೇಟಿ ನೀಡುವ ಮೂಲಕ ನೀವು ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. * ಬಳಿಕ ಅರ್ಜಿಯನ್ನು ಭರ್ತಿ ಮಾಡಿ ಮತ್ತು ಅದನ್ನು ನೌಕರರ ರಾಜ್ಯ ವಿಮಾ ನಿಗಮದ (ESIC) ಹತ್ತಿರದ ಶಾಖೆಗೆ ಸಲ್ಲಿಸಿ. * ಅದರ ನಂತರ, ನಮೂನೆಯೊಂದಿಗೆ ರೂ. 20 ರ ನ್ಯಾಯಾಂಗೇತರ ಸ್ಟಾಂಪ್ ಪೇಪರ್ ಮೇಲೆ ನೋಟರಿಯ ಪ್ರಮಾಣ ಪತ್ರ ಇರುತ್ತದೆ. * ಇದರಲ್ಲಿ, AB-1 ರಿಂದ AB-4 ನಮೂನೆಗಳನ್ನು ಸಲ್ಲಿಸಲಾಗುತ್ತದೆ. * ಆದರೆ ಗಮನಿಸಿ, ಯಾವುದೇ ವ್ಯಕ್ತಿಯು ತಪ್ಪು ನಡವಳಿಕೆಯಿಂದಾಗಿ ತಮ್ಮ ಕೆಲಸವನ್ನು ಕಳೆದುಕೊಂಡಿದ್ದರೆ ಅಂತಹವರಿಗೆ ಇದರಿಂದ ಯಾವುದೇ ಪ್ರಯೋಜನ ಲಭ್ಯವಿರುವುದಿಲ್ಲ. * ಅಂದರೆ ತಮ್ಮ ತಪ್ಪು ನಡವಳಿಕೆಯಿಂದ ಕಂಪನಿಯಿಂದ ವಜಾಗೊಂಡವರಿಗೆ ಯೋಜನೆಯ ಲಾಭ ಸಿಗುವುದಿಲ್ಲ. ಇದಲ್ಲದೇ, ಕ್ರಿಮಿನಲ್ ಕೇಸ್ ದಾಖಲಿಸಿರುವ ಅಥವಾ ಸ್ವಯಂ ನಿವೃತ್ತಿ (ವಿಆರ್ ಎಸ್) ತೆಗೆದುಕೊಂಡ ಉದ್ಯೋಗಿಗಳು ಕೂಡ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.