Fatty Liver Disease: ಈ ಲೇಖನದಲ್ಲಿ ನಾವು ನಿಮಗಾಗಿ ಫ್ಯಾಟಿ ಲಿವರ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದರೊಂದಿಗೆ, ಫ್ಯಾಟಿ ಲೀವರ್ ಸಮಸ್ಯೆಯಿಂದ ಹೇಗೆ ಪಾರಾಗಬೇಕು ಎಂಬುದನ್ನು ಕೂಡ ಹೇಳಿಕೊಡಲಿದ್ದೇವೆ.
Fatty Liver Disease: ದೇಹವನ್ನು ಆರೋಗ್ಯವಾಗಿಡುವಲ್ಲಿ ಯಕೃತ್ತಿನ ಪಾತ್ರ ತುಂಬಾ ಮುಖ್ಯವಾಗಿದೆ. ದೇಹಕ್ಕೆ ಪ್ರೋಟೀನ್ ಉತ್ಪಾದನೆಯಾಗಲಿ ಅಥವಾ ಜೀರ್ಣಕ್ರಿಯೆಗೆ ಪಿತ್ತರಸದ ಉತ್ಪಾದನೆಯಾಗಲಿ, ಯಕೃತ್ತು ಈ ಎಲ್ಲ ಕೆಲಸ ಮಾಡುತ್ತದೆ. ಇದಲ್ಲದೇ, ಪಿತ್ತಜನಕಾಂಗವು ಪೋಷಕಾಂಶಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು, ರೋಗನಿರೋಧಕ ಅಂಶಗಳನ್ನು ತಯಾರಿಸಲು ಮತ್ತು ರಕ್ತದಿಂದ ಬ್ಯಾಕ್ಟೀರಿಯಾ ಹಾಗೂ ಜೀವಾಣುಗಳನ್ನು ತೆಗೆದುಹಾಕುವ ಮೂಲಕ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ದೇಹದ ಒಂದು ಪ್ರಮುಖ ಭಾಗವಾಗಿರುವ ಯಕೃತ್ತಿನ ಬಗ್ಗೆ ಸ್ವಲ್ಪ ಅಜಾಗರೂಕತೆಯೂ ಕೂಡ ನಿಮ್ಮನ್ನು ದೊಡ್ಡ ಅಪಾಯಕ್ಕೆ ತಳ್ಳುತ್ತದೆ.
ಇದನ್ನೂ ಓದಿ-Stairway to Heaven: ಸ್ವರ್ಗಕ್ಕಿರುವ ಈ ಮೆಟ್ಟಿಲುಗಳನ್ನು ತೆರವುಗೊಳಿಸಲಿದೆ ಹೊನೊಲುಲು ಆಡಳಿತ, ಕಾರಣ ಇಲ್ಲಿದೆ
ಆಲ್ಕೊಹಾಲ್ ಸೇವಿಸದಿದ್ದಲ್ಲಿ (Alcoholic Fatty Liver), ಎಂದಿಗೂ ಫ್ಯಾಟಿ ಲೀವರ್ (Fatty Liver) ಸಮಸ್ಯೆ ಎದುರಾಗುವುದಿಲ್ಲ ಎಂದು ನೀವೂ ಭಾವಿಸುತ್ತಿದ್ದರೆ. ನೀವು ತಪ್ಪು ಕಲ್ಪನೆ ಹೊಂದಿರುವಿರಿ. ಹೌದು, ಇತ್ತೀಚಿನ ದಿನಗಳಲ್ಲಿ ಒತ್ತಡ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಹೆಚ್ಚಿನ ಜನರು ಫ್ಯಾಟಿ ಲೀವರ್ ಸಮಸ್ಯೆಗೆ (Non-Alcoholic Fatty Liver) ಬಲಿಯಾಗುತ್ತಿದ್ದಾರೆ. ಫ್ಯಾಟಿ ಲೀವರ್ ಸಮಸ್ಯೆ ಏನು ಮತ್ತು ಅದನ್ನು ತಪ್ಪಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ಓದಿ-Yoga Tips: Diabetes ನಿಂದ ಮುಕ್ತಿ ಪಡೆಯಲು ಈ ಯೋಗಾಸನಗಳನ್ನು ಟ್ರೈ ಮಾಡಿ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಏನಿದು ಫ್ಯಾಟಿ ಲೀವರ್? (what is fatty liver) - ನಾವು ಇದನ್ನು ಸರಳ ಭಾಷೆಯಲ್ಲಿಅರ್ಥಮಾಡಿಕೊಲ್ಲುವುದಾದರೆ, ಫ್ಯಾಟಿ ಲಿವರ್ ಎಂದರೆ ಯಕೃತ್ತಿನಲ್ಲಿ ಅಧಿಕ ಕೊಬ್ಬಿನ ಶೇಖರಣೆ ಎಂದರ್ಥ. ಯಕೃತ್ತಿನಲ್ಲಿ ಅಧಿಕ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸಿದಾಗ, ಇದು ಲಿವರ್ ವೈಫಲ್ಯ ಅಥವಾ ಲಿವರ್ ಸಿರೋಸಿಸ್ಗೆ ಕಾರಣವಾಗಬಹುದು. ಕೊಬ್ಬಿನ ಲಿವರ್ ಸಮಸ್ಯೆಯನ್ನು ಹೊಂದಿರುವ ಜನರು ಸಾಮಾನ್ಯವಾಗಿ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಹೊಂದಿರುತ್ತಾರೆ.
2. ಫ್ಯಾಟಿ ಲೀವರ್ ರೋಗದ ಲಕ್ಷಣಗಳೇನು? (Symptoms of Fatty Liver Disease) - a) ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಹೊಟ್ಟೆಯ ಬಲಭಾಗದಲ್ಲಿ ನೋವು ಅಥವಾ ಊತ ಇರುತ್ತದೆ. b) ರೋಗಿಗಳು ಹಸಿವನ್ನು ಕಳೆದುಕೊಳ್ಳುತ್ತಾರೆ, ತೂಕ ನಷ್ಟಅನುಭವಿಸುತ್ತಾರೆ, ಆಯಾಸ ಮತ್ತು ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ ಮತ್ತು ಪಾದಗಳು ಊದಿಕೊಳ್ಳುತ್ತವೆ. c) ಕಣ್ಣುಗಳ ಬಣ್ಣ ಕಡಿಮೆಯಾಗಬಹುದು, ಚರ್ಮದ ಮೇಲೆ ಹಳದಿ ಕಲೆಗಳು ಅಥವಾ ರಕ್ತ ಹೆಪ್ಪುಗಟ್ಟಬಹುದು. d) ತುರಿಕೆ, ಭ್ರಮೆ ಅಥವಾ ಮೂತ್ರದ ಗಾಢ ಬಣ್ಣ ಕೂಡ ಫ್ಯಾಟಿ ಲಿವರ್ ಅನ್ನು ಸೂಚಿಸಬಹುದು. e) ಫ್ಯಾಟಿ ಲಿವರ್ ಹೊಂದಿರುವ ರೋಗಿಗಳು ತ್ವರಿತ ತೂಕ ನಷ್ಟ ಮತ್ತು ಹಸಿವಿನ ನಷ್ಟವನ್ನು ಅನುಭವಿಸಬಹುದು. f) ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ ಅಥವಾ ಹೊಟ್ಟೆ ನೋವಿನ ಸಮಸ್ಯೆಹೆಚ್ಚಾಗುತ್ತದೆ.
3. ಫ್ಯಾಟಿ ಲೀವರ್ ಗೆ ಕಾರಣ - ಬೊಜ್ಜು, ಅತಿಯಾದ ಮದ್ಯಪಾನ, ಕಳಪೆ ಆಹಾರ, ಟೈಪ್ -2 ಮಧುಮೇಹ, ಆನುವಂಶಿಕ, ಮಧುಮೇಹ ಅಥವಾ ಅಧಿಕ ಕೊಲೆಸ್ಟ್ರಾಲ್ ಇದಕ್ಕೆ ಸಾಮಾನ್ಯ ಕಾರಣಗಳಾಗಿವೆ.
4. ಸಮಸ್ಯೆಯಿಂದ ಪಾರಾಗಲು ಏನು ಮಾಡಬೇಕು? - ಆರೋಗ್ಯ ತಜ್ಞರ ಹೇಳುವ ಪ್ರಕಾರ, ಫ್ಯಾಟಿ ಲೀವರ್ ಸಮಸ್ಯೆಯಿಂದ ಪಾರಾಗಲು, ಮದ್ಯಪಾನವನ್ನು ತ್ಯಜಿಸಿ, ಥೈರಾಯ್ಡ್ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಿ, ಸ್ಥೂಲಕಾಯವನ್ನು ಕಡಿಮೆ ಮಾಡಬೇಕು. ಸಮಯಕ್ಕೆ ಮಧುಮೇಹವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳಿ. ಇದರೊಂದಿಗೆ ನಿಯಮಿತವಾಗಿ ವ್ಯಾಯಾಮ ಮಾಡಿ.
5. ಫ್ಯಾಟಿ ಲೀವರ್ ಸಮಸ್ಯೆಯಿಂದ ಪಾರಾಗಲು ಆಹಾರ ಹೇಗಿರಬೇಕು? - ಆಹಾರ ತಜ್ಞೆ ಡಾ.ರಂಜನಾ ಸಿಂಗ್ ಅವರ ಪ್ರಕಾರ, ಫ್ಯಾಟಿ ಲಿವರ್ ರೋಗವನ್ನು ತಪ್ಪಿಸಲು, ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಫೈಬರ್ ಭರಿತ ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿ. ನೀವು ಸಕ್ಕರೆ, ಉಪ್ಪು, ಟ್ರಾನ್ಸ್ ಕೊಬ್ಬು, ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡಬೇಕು. ಮದ್ಯಪಾನ ತ್ಯಜಿಸುವುದು ಬಹಳ ಮುಖ್ಯ. ಕಡಿಮೆ ಕೊಬ್ಬಿನ, ಕ್ಯಾಲೋರಿ ಆಹಾರವು ನಿಮ್ಮ ತೂಕವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಕೊಬ್ಬಿನ ಯಕೃತ್ತಿನ ಅಪಾಯ ಕಡಿಮೆಯಾಗುತ್ತದೆ.