Reliance Jio News - ರಿಲಯನ್ಸ್ ಜಿಯೋ ತನ್ನ ಅಗ್ಗದ 4G ಸ್ಮಾರ್ಟ್ಫೋನ್ JioPhone Next ಅನ್ನು ದೀಪಾವಳಿಯಲ್ಲಿ ಬಿಡುಗಡೆ ಮಾಡಲಿದೆ. ಇದರ ಹೊರತಾಗಿ, ಕಂಪನಿಯು ತನ್ನ JioBook Laptop ಅನ್ನು ಕೂಡ ಶೀಘ್ರದಲ್ಲೇ ಬಿಡುಗಡೆ ಮಾಡುವ ಇನಿರೀಕ್ಷೆ ಇದೆ. ಇತ್ತೀಚೆಗೆ ಜಿಯೋಬುಕ್ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಇದರೊಂದಿಗೆ, ಭಾರತೀಯ ಮಾರುಕಟ್ಟೆಯಲ್ಲಿ ಅದರ ಆರಂಭಿಕ ಬಿಡುಗಡೆಯ ಸೂಚನೆಗಳು ಸಿಕ್ಕಂತಾಗಿದೆ. ಜಿಯೋನ ಮುಂಬರುವ ಲ್ಯಾಪ್‌ಟಾಪ್‌ನ ಮೂರು ರೂಪಾಂತರಿಗಳು ವೇರಿಯಂಟ್ ಲಿಸ್ಟೆಡ್ ಆಗಿವೆ ಎನ್ನಲಾಗಿದೆ.
ಟಿಪ್ಸ್ಟರ್ ಮುಕುಲ್ ಶರ್ಮಾ ಈ ಲ್ಯಾಪ್‌ಟಾಪ್‌ಗಳನ್ನು ಸ್ಪಾಟ್ ಮಾಡಿದ್ದಾರೆ. ಆಂತರಿಕ ಮಾದರಿಗಳ (NB1118QMW, NB1148QMW, ಮತ್ತು NB1112MM) ಹೆಸರುಗಳ ಹೊರತಾಗಿ, ಈ ಲ್ಯಾಪ್‌ಟಾಪ್‌ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.ಈ ಮೊದಲು ಪ್ರಕಟಗೊಂಡ ವರದಿಗಳು ಜಿಯೋಬುಕ್ ಲ್ಯಾಪ್‌ಟಾಪ್ 4G LTE ಸಂಪರ್ಕ, ಸ್ನಾಪ್‌ಡ್ರಾಗನ್ ಪ್ರೊಸೆಸರ್, 4GB LPDDR4x RAM ಮತ್ತು 64GB ವರೆಗೆ ಆನ್‌ಬೋರ್ಡ್ ಸಂಗ್ರಹದೊಂದಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿತ್ತು. ಜಿಯೋಬುಕ್ ಬಿಡುಗಡೆ ಅದಿಕೃತ ದಿನಾಂಕ ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ-ಹೊಸ ಬಣ್ಣದಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ ವಿವೋ : ಜನರಿಂದ ಭಾರೀ ಮೆಚ್ಚುಗೆ
ಜಿಯೋಬುಕ್ ನ ಸಂಭಾವ್ಯ ವೈಶಿಷ್ಟ್ಯಗಳು (Reliance JioBook Features)
ಈ ಹಿಂದೆ ಸೋರಿಕೆಯಾದ ಮಾಹಿತಿಗಳ ಪ್ರಕಾರ, ಜಿಯೋ ಲ್ಯಾಪ್‌ಟಾಪ್ HD (1,366x768 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿರಬಹುದು ಎಂದು ಸೂಚಿಸುತ್ತದೆ. ಇದು ಸ್ನಾಪ್‌ಡ್ರಾಗನ್ 665 ಪ್ರೊಸೆಸರ್ ಅನ್ನು ಹೊಂದಿರಲಿದೆ. ಇದು ಸ್ನಾಪ್‌ಡ್ರಾಗನ್ X12 4G ಮೋಡೆಮ್‌ಗೆ ಸಂಪರ್ಕಗೊಳ್ಳುತ್ತದೆ. ಇದು 4GB RAM ಮತ್ತು 64GB ವರೆಗಿನ eMMC ಸಂಗ್ರಹಣೆಯನ್ನು ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕನೆಕ್ಟಿವಿಟಿ ವೈಶಿಷ್ಟ್ಯಗಳಲ್ಲಿ ಮಿನಿ HDMI ಕನೆಕ್ಟರ್, ಡ್ಯುಯಲ್-ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ ಸೇರಿವೆ. ಇದು 3-ಅಕ್ಷದ ವೇಗವರ್ಧಕ ಮತ್ತು ಕ್ವಾಲ್ಕಾಮ್ ಆಡಿಯೊ ಚಿಪ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ-WhatsApp Tricks:ಟೈಪ್ ಮಾಡದೇ ಇನ್ನು ನೀವು ಸಂದೇಶಗಳನ್ನು ಕಳುಹಿಸುವುದು ಹೇಗೆ ಗೊತ್ತಾ?
Reliance Jio Update - ಈ ಲ್ಯಾಪ್ಟಾಪ್ ಗಳ ವೈಶಿಷ್ಟ್ಯ ಎಂದರೆ, ರಿಲಯನ್ಸ್ ಜಿಯೋದ ಈ ಲ್ಯಾಪ್ ಟಾಪ್ ನಲ್ಲಿ, ಜಿಯೋ ಸ್ಟೋರ್, ಜಿಯೋಮೀಟ್, ಮತ್ತು ಕಂಪನಿಯ ಜಿಯೋಪೇಜ್ ಗಳಂತಹ ಆಪ್ ಗಳು ಮೊದಲೇ ಇನ್ಸ್ಟಾಲ್ ಇರಲಿವೆ. ಇದಲ್ಲದೇ, ಮೈಕ್ರೋಸಾಫ್ಟ್ ಟೀಮ್ಸ್, ಮೈಕ್ರೋಸಾಫ್ಟ್ ಎಡ್ಜ್ ಮತ್ತು ಆಫೀಸ್ ನಂತಹ ಮೈಕ್ರೋಸಾಫ್ಟ್ ಆಪ್ ಗಳು ಕೂಡ ಮೊದಲೇ ಇನ್ಸ್ಟಾಲ್ ಆಗಿ ಆಗಿರಲಿವೆ. ಕಂಪನಿಯು ಅದನ್ನು ಯಾವ ಬೆಲೆಗೆ ಬಿಡುಗಡೆ ಮಾಡಲಿದೆ ಎಂಬುದನ್ನು ಸದ್ಯಕ್ಕೆ ಹೇಳುವುದು ಸ್ವಲ್ಪ ಕಷ್ಟವೇ. ರಿಲಯನ್ಸ್ ಜಿಯೋ ಇತಿಹಾಸ ಈ ಲ್ಯಾಪ್ಟಾಪ್ ಗಳು ಬಜೆಟ್ ಲ್ಯಾಪ್ ಟಾಪ್ ಗಳಾಗಿರಲಿವೆ ಎಂಬ ಸಾಧ್ಯತೆ ವರ್ತಿಸಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ