ನವದೆಹಲಿ: CBSE Results 2021: ವಿದ್ಯಾರ್ಥಿಗಳ ಬೇಡಿಕೆಯ ಮೇರೆಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಶೀಘ್ರವೇ ಭೌತಿಕ ಅಂಕಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ದೆಹಲಿಯ ಕಾಲೇಜುಗಳು ಮತ್ತು ಅನೇಕ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಗೆ ಮೂಲ ಅಂಕಪಟ್ಟಿಗಳನ್ನು ಒದಗಿಸುವಂತೆ ಕೇಳುತ್ತಿವೆ. ಹೀಗಾಗಿ ಅನೇಕ ವಿದ್ಯಾರ್ಥಿಗಳು ನಕಲು ಅಂಕಪಟ್ಟಿಯನ್ನು ಒದಗಿಸುವಂತೆ CBSE ಪರೀಕ್ಷಾ ಮಂಡಳಿಗೆ ಒತ್ತಾಯಿಸಿದ್ದಾರೆ.
ಈಗಾಗಲೇ ವಿದ್ಯಾರ್ಥಿಗಳಿಗೆ ನಕಲು ಅಂಕಪಟ್ಟಿ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಶೀಘ್ರವೇ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಪೆಡೆದುಕೊಳ್ಳಲಿದ್ದಾರೆ ಎಂದು CBSE ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ಹೇಳಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಆಯಾ ಶಾಲೆಗಳಿಂದಲೂ ಪಡೆದುಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಭೌತಿಕ ಅಂಕಪಟ್ಟಿಗಳು(Physical Mark Sheets)ವಿದ್ಯಾರ್ಥಿಗಳಿಗೆ ತಮ್ಮ ಅಂಗಸಂಸ್ಥೆಗಳಲ್ಲಿ ಲಭ್ಯವಿರುತ್ತವೆ. ಡಿಜಿಲಾಕರ್(DigiLocker) ಮೂಲಕವೂ ಅವರು ತಮ್ಮ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Card Tokenisation Rules: ಆರ್ಬಿಐ ಕಾರ್ಡ್ ಟೋಕನೈಸೇಶನ್ ನಿಯಮ, ಜನವರಿ 1 ರಿಂದ ಬದಲಾಗಲಿದೆ Card Payment Method
ಡಿಜಿಲಾಕರ್ನಲ್ಲಿ ಮಾರ್ಕ್ ಶೀಟ್ಗಳನ್ನು ಡೌನ್ಲೋಡ್ ಮಾಡುವುದ ಹೇಗೆ?
* ಮೊದಲು ಅಭ್ಯರ್ಥಿಗಳು ಡಿಜಿಲಾಕರ್ ವೆಬ್ಸೈಟ್ಗೆ ಭೇಟಿ ನೀಡಿ - www.digilocker.gov.in
* ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಲಿಂಕ್ ಮೇಲೆ ಕ್ಲಿಕ್ ಮಾಡಿ
* SSLCಯವರು 10ನೇ ತರಗತಿ ಉತ್ತೀರ್ಣ ಪ್ರಮಾಣಪತ್ರ ಅಥವಾ 10ನೇ ತರಗತಿ ಅಂಕಪಟ್ಟಿ ಹಾಗೂ 2nd PUCಯವರು 12ನೇ ತರಗತಿ ಪ್ರಮಾಣಪತ್ರ ಅಥವಾ 12ನೇ ತರಗತಿ ಅಂಕಪಟ್ಟಿ ಆಪ್ಶನ್ ಆಯ್ಕೆಮಾಡಿ
* CBSE ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಖಾತೆಗೆ ಲಾಗಿನ್ ಮಾಡಿ ಮತ್ತು ನಿಮ್ಮ ಅಂಕಪಟ್ಟಿಯನ್ನು ಪಡೆದುಕೊಳ್ಳಿ
* ಲಾಗಿನ್ ಆಗಲು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಕೂಡ ಬಳಸಬಹುದು
* ಅಂಕಪಟ್ಟಿಯನ್ನು ಸುಲಭವಾಗಿ ಡೌನ್ಲೋಡ್ ಮಾಡಿ ಮತ್ತು ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ.
2021ನೇ ಸಾಲಿನ 10 ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದ ಕೆಲವು ತಿಂಗಳ ನಂತರ ವಿದ್ಯಾರ್ಥಿಗಳು Original ಅಂಕಪಟ್ಟಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಬಿಜೆಪಿ ಸಂಸದನ ಮನೆ ಸಮೀಪ ಬಾಂಬ್ ದಾಳಿ: ಟಿಎಂಸಿ ವಿರುದ್ಧ ಆಕ್ರೋಶ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.