/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ : ರೈಲಿನಲ್ಲಿ ಪ್ರಯಾಣಿಸುವವರಿಗೆ ಒಂದು ಪ್ರಮುಖ ಸುದ್ದಿ ಇದಾಗಿದೆ. ಭಾರತ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸುತ್ತಿತ್ತು. ಆದರೆ, ದೇಶದ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈ ಸಂಪರ್ಕವನ್ನು ನೀಡಿದ ನಂತರ, ಸರ್ಕಾರ ಅದನ್ನು ಕೈಬಿಟ್ಟಿದೆ.

2019 ರಲ್ಲಿ, ಮಾಜಿ ರೈಲ್ವೆ ಸಚಿವ ಪಿಯೂಷ್ ಗೋಯಲ್(Piyush Goyal) ಅವರು ನಾಲ್ಕೂವರೆ ವರ್ಷಗಳಲ್ಲಿ ರೈಲುಗಳ ಒಳಗೆ ವೈ-ಫೈ ಒದಗಿಸಲು ಕೇಂದ್ರ ಯೋಜಿಸುತ್ತಿದೆ ಎಂದು ಘೋಷಿಸಿದ್ದರು. ಆದರೆ ಅದರಲ್ಲಿ ಹಲವು ಸವಾಲುಗಳಿದ್ದವು, ಈ ಕಾರಣದಿಂದಾಗಿ ಅದನ್ನು ಈಗ ರೈಲ್ವೆ ಯೋಜನೆಯಿಂದ ತೆಗೆದುಹಾಕಲಾಗಿದೆ.

ಇದನ್ನೂ ಓದಿ : Ration Card ನಿಯಮಗಳಲ್ಲಿನ ದೊಡ್ಡ ಬದಲಾವಣೆ, ತಿಳಿದಿರದಿದ್ದರೆ ಎದುರಾಗಬಹುದು ಸಮಸ್ಯೆ

ರೈಲ್ವೇ ಪ್ರಯಾಣಿಕರಿಗೆ ಸಿಗಲ್ಲ ವೈ-ಫೈ ಸೇವೆ 

ಈಗ ಈ ಯೋಜನೆಯನ್ನು ಭಾರತೀಯ ರೈಲ್ವೇ(Indian Railway) ಕೈ ಬಿಟ್ಟಿದೆ. ಪಿಟಿಐ ವರದಿಯ ಪ್ರಕಾರ, ಈ ಯೋಜನೆ ವೆಚ್ಚದಾಯಕವಾದ ಕಾರಣ ರೈಲ್ವೇ ಇಲಾಖೆ ಕೈಬಿಟ್ಟಿದೆ. ಸಂಸತ್ತಿನಲ್ಲಿ ಸರ್ಕಾರವು ಇದನ್ನು ದೃಡೀಕರಿಸಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಪೈಲಟ್ ಯೋಜನೆಯಡಿ ಸರ್ಕಾರವು ಹೌರಾ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಉಪಗ್ರಹ ಸಂವಹನ ತಂತ್ರಜ್ಞಾನದ ಮೂಲಕ ವೈ-ಫೈ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಿದೆ ಎಂದು ಹೇಳಿದರು.

ಪ್ರಾಯೋಗಿಕ ಯೋಜನೆಯ ಸಮಯದಲ್ಲಿ, ತಂತ್ರಜ್ಞಾನದ ತೀವ್ರ ಬಂಡವಾಳ ಮತ್ತು ಮರುಕಳಿಸುವ ವೆಚ್ಚಗಳು ಅಗತ್ಯವೆಂದು ಗಮನಿಸಲಾಗಿದೆ, ಉದಾಹರಣೆಗೆ ಬ್ಯಾಂಡ್‌ವಿಡ್ತ್ ಶುಲ್ಕಗಳು, ಇದು ಯೋಜನೆಯನ್ನು ವೆಚ್ಚ-ಪರಿಣಾಮಕಾರಿಯಾಗಿ ಮಾಡುವುದಿಲ್ಲ. ಅಲ್ಲದೆ, ರೈಲಿನಲ್ಲಿ ಪ್ರಯಾಣಿಕರಿಗೆ ಒದಗಿಸಿದ ಇಂಟರ್ನೆಟ್ ಬ್ಯಾಂಡ್‌ವಿಡ್ತ್ ಸಾಕಾಗಲಿಲ್ಲ. ರೈಲುಗಳಲ್ಲಿ ವೈ-ಫೈ ಇಂಟರ್ನೆಟ್ ಸೇವೆಗಳಿಗೆ(Wi-Fi Internet Service) ಸೂಕ್ತ, ವೆಚ್ಚ-ಪರಿಣಾಮಕಾರಿ ತಂತ್ರಜ್ಞಾನ ಇಲ್ಲ ಎಂದು ರೈಲ್ವೆ ಸಚಿವರು ಹೇಳಿದರು.

ಇದನ್ನೂ ಓದಿ : ಪ್ರಜಾಪ್ರಭುತ್ವದಲ್ಲಿ ನಾಗರಿಕರ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮಹತ್ವದ್ದಾಗಿದೆ-ಅಮಿತ್ ಷಾ

RailTel ನೆಟ್ ವರ್ಕ್ ಸೌಲಭ್ಯ

ಪ್ರಸ್ತುತ ಭಾರತೀಯ ರೈಲ್ವೇ 6,000 ಕ್ಕೂ ಹೆಚ್ಚು ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುತ್ತಿದೆ. ಈ ಸೇವೆಯನ್ನು ರೈಲ್ವೆ ಸಚಿವಾಲಯದ(Ministry of Railways) ಅಡಿಯಲ್ಲಿ ಕಾರ್ಯನಿರ್ವಹಿಸುವ ಪಿಎಸ್ಯು ಅಡಿಯಲ್ಲಿ ರೈಲ್ ಟೆಲ್ ನೆಟ್ ವರ್ಕ್ ಒದಗಿಸುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ, ರೈಲ್‌ಟೆಲ್ ಈ ವೈ-ಫೈ ಸೇವೆಗಳನ್ನು ರೈಲ್ವೇರ್ ಅಡಿಯಲ್ಲಿ ಒದಗಿಸುತ್ತದೆ, ಇದು ಅದರ ಬ್ರಾಡ್‌ಬ್ಯಾಂಡ್ ವಿತರಣಾ ಮಾದರಿಯಾಗಿದೆ. ಈ ಮೊದಲು, ಗೂಗಲ್‌ನ ಸ್ಟೇಷನ್ ಪ್ರೋಗ್ರಾಂ 2016 ರಲ್ಲಿ ಮುಂಬೈ ಸೆಂಟ್ರಲ್ ರೈಲ್ವೇ ಸ್ಟೇಷನ್‌ನಲ್ಲಿ ಆರಂಭವಾಯಿತು ಮತ್ತು 2018 ರಲ್ಲಿ ಅಸ್ಸಾಂನ ದಿಬ್ರುಗಡ್‌ನಲ್ಲಿ ತನ್ನ 400 ನೇ ಸ್ಟೇಷನ್ ಅನ್ನು ಸೇರಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
indian railways rule railway cancels project to provide wi fi service in trains central govt said not cost effective know here
News Source: 
Home Title: 

ರೈಲ್ವೆ ಪ್ರಯಾಣಿಕರಿಗೆ ಬಿಗ್ ಶಾಕ್ : ಈಗ ರೈಲು ಪ್ರಯಾಣದ ಸಮಯದಲ್ಲಿ ಸಿಗುವುದಿಲ್ಲ ಈ ಸೌಲಭ್ಯ! 

Indian Railways : ರೈಲ್ವೆ ಪ್ರಯಾಣಿಕರಿಗೆ ಬಿಗ್ ಶಾಕ್ : ಈಗ ರೈಲು ಪ್ರಯಾಣದ ಸಮಯದಲ್ಲಿ ಸಿಗುವುದಿಲ್ಲ ಈ ಸೌಲಭ್ಯ! 
Yes
Is Blog?: 
No
Tags: 
Facebook Instant Article: 
Yes
Highlights: 

ರೈಲ್ವೆ ಪ್ರಯಾಣಿಕrige ಬಿಗ್ ಶಾಕ್ 

ರೈಲ್ವೆ ಪ್ರಯಾಣದ ಸಮಯದಲ್ಲಿ ಸಿಗಲ್ಲ Wi -Fi ಸೇವೆ

ಪ್ರಸ್ತುತ ಭಾರತೀಯ ರೈಲ್ವೇ 6,000 ಕ್ಕೂ ಹೆಚ್ಚು ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈ

Mobile Title: 
ರೈಲ್ವೆ ಪ್ರಯಾಣಿಕರಿಗೆ ಬಿಗ್ ಶಾಕ್ : ಈಗ ರೈಲು ಪ್ರಯಾಣದ ಸಮಯದಲ್ಲಿ ಸಿಗುವುದಿಲ್ಲ ಈ ಸೌಲಭ್ಯ! 
Channabasava A Kashinakunti
Publish Later: 
No
Publish At: 
Sunday, September 5, 2021 - 10:47
Created By: 
Chennabasava A Kashinakunti
Updated By: 
Chennabasava A Kashinakunti
Published By: 
Chennabasava A Kashinakunti
Request Count: 
2
Is Breaking News: 
No