ನವದೆಹಲಿ: Richest Indian Cricketer - ಕ್ರಿಕೆಟ್ ಆಡುವ ಆಟಗಾರರು ಸಾಮಾನ್ಯವಾಗಿ ಅಪಾರ ಸಿರಿವಂತಿಕೆಯನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ. ವಿರಾಟ್ ಕೊಹ್ಲಿ (Virat Kohli) ಮತ್ತು ಎಂಎಸ್ ಧೋನಿಯಂತಹ (MS Dhoni) ಆಟಗಾರರ ವಾರ್ಷಿಕ ಗಳಿಕೆ ಕೋಟಿಗಳಲ್ಲಿವೆ. ಇದರ ಹೊರತಾಗಿಯೂ, ಈ ಸ್ಟಾರ್ ಆಟಗಾರರಿಗಿಂತ ಶ್ರೀಮಂತ ಕ್ರಿಕೆಟಿಗ ಕೂಡ ಇದ್ದಾನೆ ಮತ್ತು ಆಶ್ಚರ್ಯಕರವಾಗಿ, ಆ ಆಟಗಾರ ಇಲ್ಲಿಯವರೆಗೆ ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ ಎಂದರೆ ನೀವು ನಂಬುತ್ತೀರಾ?
ಈತನೇ ಆ ಶ್ರೀಮಂತ ಕ್ರಿಕೆಟಿಗ
ಭಾರತೀಯ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ (Kumar Mangalam Birla) ಅವರ ಪುತ್ರ ಆರ್ಯಮಾನ್ ಬಿರ್ಲಾ (Aryaman Birla) ಅತ್ಯಂತ ಶ್ರೀಮಂತ ಭಾರತೀಯ ಕ್ರಿಕೆಟಿಗರಾಗಿದ್ದಾರೆ, ಏಕೆಂದರೆ ಅವರ ನಂದೆಯ ಒಟ್ಟು ಆಸ್ತಿ 70 ಸಾವಿರ ಕೋಟಿಗಳು. ಅವರು ಆದಿತ್ಯ ಬಿರ್ಲಾ ಸಮೂಹವನ್ನು (Aditya Birla Group) ಹೊಂದಿರುವ ಬಿರ್ಲಾ ಕುಟುಂಬದ ಉತ್ತರಾಧಿಕಾರಿ.
ಇದನ್ನೂ ಓದಿ-India vs England: ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಸಂಜಯ್ ಮಾಂಜ್ರೇಕರ್ ಹೇಳಿದ್ದೇನು ಗೊತ್ತಾ..?
ಮಧ್ಯಪ್ರದೇಶ (Madhya Pradesh) ತಂಡದ ವತಿಯಿಂದ ರಣಜಿ (Ranji Trophy) ಆಡುತ್ತಾರೆ
ಆರ್ಯಮಾನ್ ಬಿರ್ಲಾ ಅವರಿಗೆ ಚಿಕ್ಕಂದಿನಿಂದಲೇ ಕ್ರಿಕೆಟ್ ಬಗ್ಗೆ ಒಲವು ಇತ್ತು, ಹೀಗಾಗಿ ಆರ್ಯಮಾನ್ (Aryaman Birla) ವೃತ್ತಿಪರ ಕ್ರಿಕೆಟ್ ಆಟಗಾರನಾಗಲು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ತರಬೇತಿಯನ್ನು ಆರಂಭಿಸಿದ್ದರು. ರಣಜಿ ಟ್ರೋಫಿಗೆ (Ranji Trophy) ಮಧ್ಯಪ್ರದೇಶ ತಂಡದಲ್ಲಿ ಆಯ್ಕೆಯಾದಾಗ ಅವರು ಈ ಕಠಿಣ ಪರಿಶ್ರಮದ ಲಾಭವನ್ನು ಪಡೆದುಕೊಂಡಿದ್ದರು.
ಇದನ್ನೂ ಓದಿ-IPL 15th Season Update: IPL ಹೊಸ ತಂಡಗಳಿಗಾಗಿ Tender ಜಾರಿ, BCCI ಷರತ್ತುಗಳೇನು? ಇಲ್ಲಿದೆ ವರದಿ
ಪ್ರಸ್ತುತ ಆರ್ಯಮಾನ್ ಕ್ರಿಕೆಟ್ ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ
ಆರ್ಯಮಾನ್ ಬಿರ್ಲಾ (Aryaman Birla) ಪ್ರಸ್ತುತ ಕ್ರಿಕೆಟ್ ನಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಮಾಹಿತಿಯ ಪ್ರಕಾರ, ಅವರು ಪ್ರಸ್ತುತ ಇಂಗ್ಸೈಟಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಾಗಿ ಅವರ ತಮ್ಮ ಹೆಚ್ಚಿನ ಗಮನವನ್ನು ಮಾನಸಿಕ ಆರೋಗ್ಯದ ಮೇಲೆ ಹರಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಅವರು ಐಪಿಎಲ್ 2018 (Indian Premier League 2018)ರಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ತಂಡದ ಭಾಗವಾಗಿದ್ದರು.
ಇದನ್ನೂ ಓದಿ-ತಾಲಿಬಾನ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರೀದಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ