Taliban Warns US: ಸಂಪೂರ್ಣ ಆಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ, ಅಲ್ಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅಲ್ಲಿಂದ ಪ್ರಾಣ ಉಳಿಸಿಕೊಂಡು ಓಡಿಹೋಗಲು ಜನ ಪ್ರಯತ್ನಿಸುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣವನ್ನು ನಿಯಂತ್ರಣದಲ್ಲಿಟ್ಟಿರುವ ಯುಎಸ್ ಸೈನಿಕರು ಆಫ್ಘಾನ್ ನಾಗರಿಕರನ್ನು ದೇಶದಿಂದ ಪಲಾಯನ ಮಾಡಲು ನಿರಂತರವಾಗಿ ಸಹಾಯ ಸಹಾಯ ಮಾಡುತ್ತಿದ್ದಾರೆ. ಹೆಚ್ಚಿನ ದೇಶಗಳು ತಮ್ಮ ರಾಯಭಾರ ಕಚೇರಿಯನ್ನು ಮುಚ್ಚಿವೆ ಮತ್ತು ಅಫ್ಘಾನಿಸ್ತಾನಕ್ಕೆ ನೆರವು ನೀಡುವುದನ್ನು ನಿಲ್ಲಿಸಿವೆ. ಏತನ್ಮಧ್ಯೆ, ಅಫ್ಘಾನಿಸ್ತಾನದ ವಿದ್ಯಾವಂತ ಜನರನ್ನು ದೇಶವನ್ನು ತೊರೆಯುವಂತೆ ಪ್ರೇರೇಪಿಸಬೇಡಿ ಎಂದು ತಾಲಿಬಾನ್ ಅಮೆರಿಕಾಗೆ ಹೇಳಿದೆ.
Taliban Spokesperson Zabihullah Mujahid says US should not encourage the Afghan elite to leave the country. He also says that the Taliban are committed to resolving the problem in Panjshir peacefully: TOLOnews
— ANI (@ANI) August 24, 2021
ಈ ಕುರಿತು ಸುದ್ದಿ ಸಂಸ್ಥೆ AFP ವರದಿ ಪ್ರಕಟಿಸಿದ್ದು ಅದರಲ್ಲಿ ತಾಲಿಬಾನ್ ವಕ್ತಾರನ ಹೇಳಿಕೆಯನ್ನು ಉಲ್ಲೇಖಿಸಿದೆ. ಈ ಕುರಿತು ಮಾತನಾಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹೀದ್ ನೈಪುಣ್ಯತೆ ಹೊಂದಿರುವ ಆಫ್ಘಾನಿಸ್ತಾನದ ಜನರನ್ನು ಅಮೇರಿಕಾ ದೇಶದಿಂದ ಹೊರಕ್ಕೆ ತೆಗೆದುಕೊಂಡು ಹೋಗಬಾರದು ಎಂದಿದ್ದಾನೆ. TOLO NEWS ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಪಂಜಶೀರ್ ಕಣಿವೆಯಲ್ಲಿನ (Panjshir Valley) ಪ್ರತಿಭಟನೆಗಳನ್ನು ಶಾಂತಿಯುತವಾಗಿ ಪರಿಹರಿಸಲು ತಾಲಿಬಾನ್ ಬದ್ಧವಾಗಿದೆ ಎನ್ನಲಾಗಿದೆ.
'ಆಗಸ್ಟ್ ಅಂತ್ಯದವರೆಗೆ ಅಮೆರಿಕಾ ತನ್ನ ಜನರನ್ನು ಕೊಂಡೊಯ್ಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು'
ಇನ್ನೊಂದೆಡೆ ಆಗಸ್ಟ್ 31 ರೊಳಗೆ ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಅಮೆರಿಕ ಪೂರ್ಣಗೊಳಿಸಬೇಕು ಮತ್ತು ಗಡುವು ವಿಸ್ತರಿಸಲಾಗುವುದಿಲ್ಲ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ. ಬಿಡೆನ್ ಆಡಳಿತವು ಆಗಸ್ಟ್ 31 ಅನ್ನು ಅಫ್ಘಾನಿಸ್ತಾನದಿಂದ ತನ್ನೆಲ್ಲಾ ಸೈನ್ಯವನ್ನು ಹಿಂಪಡೆದು ಕೊಳ್ಳಲು ದಿನಾಂಕ ನಿಗದಿಪಡಿಸಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-COVID 22!: ಮೊದಲಿಗಿಂತ ಹೆಚ್ಚು ಮಾರಕವಾಗಲಿದೆ ಕೊರೊನಾ? ವಿಜ್ಞಾನಿಗಳಿಗೆ ಕಾಡುತ್ತಿದೆ Covid-22 ಭಯ
ತಮ್ಮ ಗುಂಪು ಗಡುವು ವಿಸ್ತರಣೆಯ ಸಂಗತಿಯನ್ನು ಒಪ್ಪುವುದಿಲ್ಲ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹೀದ್ ಹೇಳಿದ್ದಾನೆ. ದೇಶದಲ್ಲಿ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ ಆದರೆ ವಿಮಾನ ನಿಲ್ದಾಣದಲ್ಲಿನ ಅವ್ಯವಸ್ಥೆ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಮುಜಾಹೀದ್ ಹೇಳಿದ್ದಾನೆ. ತಾಲಿಬಾನ್, ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ಭಾರಿ ಪ್ರಮಾಣದಲ್ಲಿ ಆಫ್ಘನರು ದೇಶ ತೊರೆಯಲು ಹತಾಶರಾಗಿದ್ದಾರೆ.
ಇದನ್ನೂ ಓದಿ-Ukraine Plane Hijacked: ಕಾಬೂಲ್ ನಿಂದ ಹೋರಟ ಉಕ್ರೈನ್ ವಿಮಾನ ಹೈಜಾಕ್! ವಿಮಾನ ಅಪಹರಣ ನಿರಾಕರಿಸಿದ ಕೀವ್ ?
ಇದೇ ವೇಳೆ ತಾಲಿಬಾನ್ ಹಾಗೂ CIA ನಡುವಿನ ಯಾವುದೇ ಸಭೆಯ ಕುರಿತು ತಮಗೆ ಮಾಹಿತಿ ಇಲ್ಲ ಎಂದು ಮುಜಾಹೀದ್ ಹೇಳಿದ್ದಾನೆ. ಆದರೆ, ಈ ರೀತಿಯ ಸಭೆಯನ್ನು ಅಲ್ಲಗಳೆಯಆಗುವುದಿಲ್ಲ ಎಂದು ಕೂಡ ಆತ ಹೇಳಿದ್ದಾನೆ. ಅಮೆರಿಕಾದ ಸಂಸ್ಥೆಯೊಂದರ ನಿರ್ದೇಶಕರೊಬ್ಬರು ಸೋಮವಾರ ಕಾಬುಲ್ ನಲ್ಲಿ ತಾಲಿಬಾನ್ ಉನ್ನತ ರಾಜತಾಂತ್ರಿಕ ಮುಖಂಡರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ -Taliban: ಪಂಜಶೀರ್ ಅನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ ತಾಲಿಬಾನ್ಗೆ ದೊಡ್ಡ ಹಿನ್ನಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.