ಹುಟ್ಟುಹಬ್ಬದಂದೇ ಗಾಳಿಯಲ್ಲಿ ಗುಂಡು ಹಾರಿಸಲು ಹೋಗಿ ಮಸಣ ಸೇರಿದ ಯುವಕ..!

ರಾಯಪುರದಿಂದ 40 ಕಿ.ಮೀ ದೂರದಲ್ಲಿರುವ ಜವಾಹರನಗರದ ನಿವಾಸದಲ್ಲಿ ರೋಹನ್ ಸಿಂಗ್ ಹುಟ್ಟುಹಬ್ಬ ಆಚರಣೆ ವೇಳೆ ಈ ಘಟನೆ ನಡೆದಿದೆ.

Written by - Puttaraj K Alur | Last Updated : Aug 23, 2021, 04:41 PM IST
  • ತನ್ನ ಹುಟ್ಟುಹಬ್ಬದ ಸಂಭ್ರಮದಂದೇ ಮಸಣ ಸೇರಿದ 18 ವರ್ಷದ ಯುವಕ
  • ಜನ್ಮದಿನದ ಸಂಭ್ರಮದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲು ಹೋಗಿ ದುರಂತ ಅಂತ್ಯ
  • ಛತ್ತೀಸ್​ಗಢದ ದುರ್ಗ್ ಜಿಲ್ಲೆಯ ಜವಾಹರ್‌ ನಗರದಲ್ಲಿ ನಡೆದಿರುವ ಘಟನೆ
ಹುಟ್ಟುಹಬ್ಬದಂದೇ ಗಾಳಿಯಲ್ಲಿ ಗುಂಡು ಹಾರಿಸಲು ಹೋಗಿ ಮಸಣ ಸೇರಿದ ಯುವಕ..! title=
ಹುಟ್ಟುಹಬ್ಬದಂದೇ ದುರಂತ ಅಂತ್ಯ ಕಂಡ ಯುವಕ (Photo Courtesy: Zee News)

ದು‌ರ್ಗ್: ತನ್ನ ಹುಟ್ಟುಹಬ್ಬದ ಆಚರಣೆ(Birthday Party) ವೇಳೆಯೇ ಗಾಳಿಯಲ್ಲಿ ಗುಂಡು ಹಾರಿಸಲು ಹೋಗಿ ಯುವಕನೊಬ್ಬ ಮಸಣ ಸೇರಿರುವ ಘಟನೆ ಛತ್ತೀಸ್​ಗಢ(Chhattisgarh)ದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ. ಮೃತಪಟ್ಟವನನ್ನು ಜವಾಹರ್‌ ನಗರದ 18 ವರ್ಷದ ರೋಹನ್ ಸಿಂಗ್ ಎಂದು ಗುರುತಿಸಲಾಗಿದೆ.

ರೋಹನ್ ಸಿಂಗ್ ತನ್ನ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ 18ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದ. ಈ ವೇಳೆ ತನ್ನ ತಂದೆಯ ಗನ್ ತೆಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಲು ಮುಂದಾಗಿದ್ದಾನೆ. ಆಕಸ್ಮಿಕವಾಗಿ ಗನ್‌ನಿಂದ ಗುಂಡು(Accidentally Shooting) ತಗುಲಿ ಆತ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Gold Price Today : 9000 ರೂ. ಯಷ್ಟು ಅಗ್ಗವಾಯಿತು ಚಿನ್ನ , ಇಂದಿನ ಬೆಲೆ ತಿಳಿಯಿರಿ

ಹುಟ್ಟುಹಬ್ಬದ ಸಂಭ್ರಮ(Birthday Party)ದಲ್ಲಿದ್ದ ರೋಹನ್ ಸಿಂಗ್ ಗಾಳಿಯಲ್ಲಿ ಗುಂಡು ಹಾರಿಸಲು ಹೋಗಿ ತನಗೆ ತಾನೇ ಶೂಟ್ ಮಾಡಿಕೊಂಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ರೋಹನ್ ಸಿಂಗ್ ಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಕುಟುಂಬಸ್ಥರು ಪ್ರಯತ್ನಿಸಿದರು. ಆದರೆ ಆಸ್ಪತ್ರೆಗೆ ತೆರಳುವಷ್ಟರಲ್ಲಿ ಆತ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

‘ರಾಯಪುರ(Raipur)ದಿಂದ 40 ಕಿ.ಮೀ ದೂರದಲ್ಲಿರುವ ಜವಾಹರನಗರದಲ್ಲಿರುವ ನಿವಾಸದಲ್ಲಿ ಭಾನುವಾರ ರಾತ್ರಿ ರೋಹನ್ ಸಿಂಗ್ ಹುಟ್ಟುಹಬ್ಬ ಆಚರಣೆ ವೇಳೆ ಈ ಘಟನೆ ನಡೆದಿದೆ’ ಅಂತಾ ವೈಶಾಲಿ ನಗರ ಪೊಲೀಸ್ ಠಾಣೆಯ ಗೃಹ ಅಧಿಕಾರಿ ಗೋಪಾಲ್ ವೈಶ್ಯ ತಿಳಿಸಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ, ರೋಹನ್ ಸಿಂಗ್ ತನ್ನ ತಂದೆಯ ಗನ್ ಹೊರತೆಗೆದು ಗಾಳಿಯಲ್ಲಿ ಗುಂಡು ಹಾರಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಅದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಅದನ್ನು ಪರೀಕ್ಷಿಸಲು ಮುಂದಾದ ವೇಳೆ ಆತನ ಸೊಂಟಕ್ಕೆ ಗುಂಡು ತಗುಲಿದೆ. ವಿಪರೀತ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಅಂತಾ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Afghanistan Crisis: ಗುರುವಾರದಂದು ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ

ರೋಹನ್ ಸಿಂಗ್ ತಂದೆ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರ ಬಳಿ 12 ಬೋರ್ ಗನ್‌ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವೈಶಾಲಿ ನಗರ ಪೊಲೀಸ್ ಠಾಣೆ(Vaishali Nagar Police)ಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News