ನವದೆಹಲಿ: Search Related To Disease - ಇಂಟರ್ನೆಟ್ (Internet) ಇಂದು ನಮ್ಮ ಮೂಲಭೂತ ಅಗತ್ಯತೆಗಳಲ್ಲಿ ಒಂದಾಗಿ ಮಾರ್ಪಟ್ಟಿದೆ. ಮಾಹಿತಿ, ಉಲ್ಲೇಖಗಳನ್ನು ಹುಡುಕಲು ಮತ್ತು ಅಪ್ಡೇಟ್ ಆಗಿರಲು ಅಂತರ್ಜಾಲವನ್ನು (Google Search) ವ್ಯಾಪಕವಾಗಿ ಮತ್ತು ನಿರಂತರವಾಗಿ ಬಳಸಲಾಗುತ್ತಿದೆ. ಆದ್ದರಿಂದ ಇಂಟರ್ನೆಟ್ ನಮ್ಮ ಕೈಯಲ್ಲಿ ಒಂದು ಆಯುಧವಾಗಿ ಮಾರ್ಪಟ್ಟಿದೆ ಎಂದರೆ ಅತಿಶಯೋಕ್ತಿಯಲ್ಲ; ಆದರೆ ಅಂತರ್ಜಾಲದಲ್ಲಿ ಹುಡುಕುವುದು ಕೆಲವು ರೋಗಗಳಿಗೆ ಕಾರಣವಾಗಬಹುದು ಎಂದು ಹೇಳಿದರೆ ನೀವು ನಂಬುವಿರಾ? ಒಂದು ಕಾಯಿಲೆಯ ಲಕ್ಷಣಗಳನ್ನು ತಿಳಿಯಲು, ರೋಗದ ಬಗ್ಗೆ ಮಾಹಿತಿ ಪಡೆಯಲು ಹಾಗೂ ಚಿಕಿತ್ಸೆಯ ಬಗ್ಗೆ ತಿಳಿಯಲು ಅನೇಕ ಜನರು ನಿರಂತರವಾಗಿ ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಾರೆ. ಪ್ರಸ್ತುತ ಕೊರೊನಾ ಅವಧಿಯಲ್ಲಿ ಈ ಅನುಪಾತ ಹೆಚ್ಚಾಗಿದೆ. ಆದರೆ ಅಂತರ್ಜಾಲದಲ್ಲಿ ಕಾಯಿಲೆಗಳ ಬಗ್ಗೆ ನಿರಂತರವಾಗಿ ಮಾಹಿತಿ ಹುಡುಕುವ ಮೂಲಕ, ನೀವು ಇನ್ನಷ್ಟು ಕಾಯಿಲೆಗೆ ಗುರಿಯಾಗಬಹುದು.
ಕಾಯಿಲೆಗಳ ಮಾಹಿತಿಗಾಗಿ ಅಂತರ್ಜಾಲದಲ್ಲಿ ನಿರಂತರವಾಗಿ ಹುಡುಕಾಟ ನಡೆಸುವುದು ಅನಾರೋಗ್ಯಕ್ಕೆ ಕಾರಣವಾಗಬಹುದು. ಅಂತರ್ಜಾಲದಲ್ಲಿ ಮಾಹಿತಿಯನ್ನು ಪಡೆಯುವುದು ಆರೋಗ್ಯದ ಬಗ್ಗೆ ಅನಗತ್ಯ ಚಿಂತೆ ಹೆಚ್ಚಿಸುತ್ತದೆ. ವೈದ್ಯಕೀಯ ವಿಜ್ಞಾನದಲ್ಲಿ ಇದನ್ನು ಸೈಬರ್ ಕಾಂಡ್ರಿಯ (Cyberchondria) ಎಂದು ಕರಯಲಾಗುತ್ತದೆ.
ಸೈಬರ್ ಕಾಂಡ್ರಿಯಾಗೆ ಹೇಗೆ ಗುರಿಯಾಗುತ್ತಾರೆ
ಈ ಕುರಿತು ಹೇಳಿಕೆ ನೀಡುವ ಆರೋಗ್ಯ ತಜ್ಞರು (Health Experts), "ನೀವು ತಲೆನೋವಿನ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಇಂತಹ ಪರಿಸ್ಥಿತಿಯಲ್ಲಿ, ಸಾಮಾನ್ಯ ತಲೆನೋವಿನಿಂದ ಮೆದುಳಿನ ಗೆಡ್ಡೆಯವರೆಗೆ ಅಂತರ್ಜಾಲವು ನಿಮಗೆ ಎಲ್ಲಾ ಮಾಹಿತಿಯನ್ನು ನೀಡುತ್ತದೆ. ನಾವು ಮೆದುಳಿನ ಗೆಡ್ಡೆಯ ರೋಗಲಕ್ಷಣಗಳು ಮತ್ತು ಆ ರೋಗದ ಬಗ್ಗೆ ಮಾಹಿತಿಯನ್ನು ಪಡೆಯಲು ಪ್ರಾರಂಭಿಸುತ್ತೇವೆ ಏಕೆಂದರೆ ಗಂಭೀರ ಪ್ರಕರಣಗಳನ್ನು ಮೊದಲು ಅರ್ಥಮಾಡಿಕೊಳ್ಳುವುದು ಮಾನವ ಸ್ವಭಾವವಾಗಿದೆ. ಈ ಮಾಹಿತಿಯನ್ನು ಓದುವಾಗ ನಾವು ಹೆಚ್ಚು ನರ್ವಸ್ ಆಗುತ್ತೇವೆ, ನಮ್ಮ ನಿದ್ದೆ ಕೆಡುತ್ತದೆ ಮತ್ತು ಇದರಿಂದ ನಮ್ಮ ದೇಹದಲ್ಲಿ ಪಿತ್ತರಸದ ಸಮಸ್ಯೆ ಹೆಚ್ಚಾಗುತ್ತದೆ." ಎನ್ನುತ್ತಾರೆ.
ಇದನ್ನೂ ಓದಿ-Pixel Buds A-Series:ಗೂಗಲ್ ನಿಂದ ಪಿಕ್ಸಲ್ ಬಡ್ಸ್ ಬಿಡುಗಡೆ
"ಸಾಮಾನ್ಯ ನೆಗಡಿ ಮತ್ತು ಕೆಮ್ಮನ್ನು ಕೂಡ ಸೈಬರ್ ಕಾಂಡ್ರಿಯಾದಲ್ಲಿ ಗಂಭೀರ ಅನಾರೋಗ್ಯವೆಂದು ಪರಿಗಣಿಸಲಾಗುತ್ತದೆ. ಯಾವುದೇ ಕಾರಣವಿಲ್ಲದೆ ವೈದ್ಯರ ಬಳಿ ಹೋಗಲು ಮತ್ತು ಹೆಚ್ಚಿನ ಪರೀಕ್ಷೆಗಳನ್ನು ಮಾಡಲು ರೋಗಿಯು ಒಳಗಾಗುತ್ತಾನೆ. ಹಲವು ಜನರು ಗ್ಯಾಸ್ ಸಮಸ್ಯೆ ಹೇಳಿಕೊಂಡು ನಮ್ಮ ಬಳಿಗೆ ಬರುತ್ತಾರೆ ಆದರೆ ಅವರಿಗೆ ಹೃದಯಾಘಾತವಾಗಿದೆ ಎಂದು ಭಾವಿಸಿ, ಯಾವುದೇ ಕಾರಣವಿಲ್ಲದೆ ಇಸಿಜಿ, ಟುಡೆ-ಎಕೋನಂತಹ ಪರೀಕ್ಷೆಗಳನ್ನು ಮಾಡಲು ಅವರು ಮುಂದಾಗುತ್ತಾರೆ" ಎಂದು ತಜ್ಞರು ಹೇಳುತ್ತಾರೆ.
ಸೈಬರ್ ಕಾಂಡ್ರಿಯಾದಿಂದ ಬಚಾವಾಗಲು ಏನು ಮಾಡಬೇಕು?
>> ಇಂಟರ್ನೆಟ್ ನಲ್ಲಿ ಕಾಣಿಸುವ ಎಲ್ಲಾ ಮಾಹಿತಿ ಸರಿಯಾಗಿರುವುದಿಲ್ಲ.
>> ಯಾವುದೇ ರೀತಿಯ ಕಾಯಿಲೆ ಅಥವಾ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ತಜ್ಞರು ಹೇಳುತ್ತಾರೆ.
>> ಕೇವಲ ವೈದ್ಯರೇ ಹೇಳುವ ಸಲಯೆಯ ಮೇಲೆ ಯೋಚನೆ ಮಾಡಿ. ಅವರ ಸಲಹೆ ಇಲ್ಲದೆ ಯಾವುದೇ ಕೆಲಸವನ್ನು ಮಾಡಬೇಡಿ.
ಇದನ್ನೂ ಓದಿ-ಈ ಒಂಭತ್ತು ಆಪ್ ಗಳು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಇದ್ದರೆ ತಕ್ಷಣ ಡಿಲೀಟ್ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ