ನವದೆಹಲಿ : PAN-Aadhaar Link: ಪ್ಯಾನ್-ಆಧಾರ್ ಲಿಂಕ್ ಮಾಡುವ ದಿನಾಂಕ ಸಮೀಪಿಸುತ್ತಿದೆ. SBI, PNB ಯಂತಹ ಅನೇಕ ದೊಡ್ಡ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ PAN- ಆಧಾರ್ ಲಿಂಕ್ ಮಾಡುವಂತೆ ಮನವಿ ಮಾಡಿವೆ. ನೀವು ಇನ್ನೂ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡದಿದ್ದರೆ, ತಕ್ಷಣ ಈ ಕೆಲಸ ಮಾಡಿ. ಏಕೆಂದರೆ ಇದರ ನಂತರ ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವು ಮುಂದುವರಿಯುವುದಿಲ್ಲ. 30 ಸೆಪ್ಟೆಂಬರ್ 2021 ರೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಬ್ಯಾಂಕ್ ಸ್ಪಷ್ಟವಾಗಿ ಹೇಳಿದೆ. ಇಲ್ಲದೆ ಹೋದರೆ ವಹಿವಾಟು ನಿಂತು ಹೋಗುತ್ತದೆ.
ಅಮಾನ್ಯವಾಗಲಿದೆ ಪ್ಯಾನ್ :
ಆದಾಯ ತೆರಿಗೆ ಇಲಾಖೆಯ ಪ್ರಕಾರ, ಪ್ಯಾನ್-ಆಧಾರ್ ಲಿಂಕ್ (PAN Aadhaar link) ಮಾಡದಿದ್ದರೆ, ನಿಮ್ಮ ಪ್ಯಾನ್ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ -139 ಎಎ ಅಡಿಯಲ್ಲಿ ಅಮಾನ್ಯವಾಗುತ್ತದೆ. ಹೀಗಾದಾಗ ಐಟಿಆರ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಪ್ಯಾನ್ ನಿಷ್ಕ್ರಿಯವಾದರೆ, ಯಾವುದೇ ರೀತಿಯ ಹಣದ ವ್ಯವಹಾರವನ್ನು ಮಾಡಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ : SBI Loan Offers: ಎಸ್‌ಬಿಐ ಕಾರ್, ಗೋಲ್ಡ್ ಲೋನ್‌ನಲ್ಲಿ ಸಿಗುತ್ತಿದೆ ಬಂಪರ್ ಕೊಡುಗೆ
ಈ ವಿಷಯಗಳನ್ನು ನೆನಪಿನಲ್ಲಿಡಿ :
1. ಆಲ್ಫಾನ್ಯೂಮರಿಕ್ ಪರ್ಮನೆಂಟ್ ಅಕೌಂಟ್ ನಂಬರ್ (PAN) ಅನ್ನು 12 ಅಂಕಿಗಳ ಆಧಾರ್ ಜೊತೆಗೆ ಆನ್‌ಲೈನ್‌ನಲ್ಲಿ ಇ-ಫೈಲಿಂಗ್ ಪೋರ್ಟಲ್ ಮೂಲಕ ಲಿಂಕ್ ಮಾಡುವುದು ಸುಲಭ.
2. ಎರಡನ್ನೂ ಲಿಂಕ್ ಮಾಡಲು, UIDPAN12digit Aadhaar> 10digitPAN> 567678 ಅಥವಾ 56161 ಗೆ SMS ಕಳುಹಿಸಬಹುದು.
3. ಪ್ಯಾನ್-ಆಧಾರ್ ಆನ್‌ಲೈನ್ ಲಿಂಕ್‌ನಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ, ನೀವು ಅದನ್ನು ಆಫ್‌ಲೈನ್‌ನಲ್ಲಿ NSDL ಮತ್ತು UTITSL ನ ಪ್ಯಾನ್ ಸೇವಾ ಕೇಂದ್ರಗಳಿಂದಲೂ ಮಾಡಬಹುದು.
4. ನೀವು ಕಾಲಮಿತಿಯೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ, ಆದಾಯ ತೆರಿಗೆ ಇಲಾಖೆ ನಿಮ್ಮ ಪ್ಯಾನ್ ಅನ್ನು 'ಅಮಾನ್ಯ' ಎಂದು ಘೋಷಿಸುವ ಸಾಧ್ಯತೆಯಿದೆ.
5. ಇದರ ನಂತರ ನೀವು ITR ಅಥವಾ ಬ್ಯಾಂಕ್ ಖಾತೆಗಳನ್ನು ತೆರೆಯುವಂತಹ ಪ್ರಮುಖ ಕೆಲಸಗಳಿಗೆ ಪ್ಯಾನ್ ಕಾರ್ಡ್ ಬಳಸಲು ಸಾಧ್ಯವಾಗುವುದಿಲ್ಲ.
6. ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 272B ಅಡಿಯಲ್ಲಿ "ನಿಷ್ಕ್ರಿಯ" ಪ್ಯಾನ್ ಅನ್ನು ಬಳಸುವುದರಿಂದ 10,000 ರೂ.ಗಳವರೆಗೆ ದಂಡ ವಿಧಿಸಬಹುದು.
7. ಇದರಲ್ಲಿ ಯಾವುದೇ ಕಾಗುಣಿತ ತಪ್ಪಿದ್ದರೆ ನೀವು ಭಾರೀ ದಂಡ ತೆರಬೇಕಾದೀತು.
8. ನೀವು ಎರಡು ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದರೂ ಸಹ, ದಂಡವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : Gold-Silver Price Today : ಚಿನ್ನಾಭರಣ ಪ್ರಿಯರೆ ಗಮನಿಸಿ : ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ
ಪ್ಯಾನ್ ಕಾರ್ಡ್ ರದ್ದಾದರೆ ನಿರುಪಯುಕ್ತವಾಗುತ್ತದೆ :
ಪ್ಯಾನ್ ಕಾರ್ಡ್ ರದ್ದಾದ ನಂತರ, ಅದನ್ನು ಮತ್ತೆ ಕಾರ್ಯಗತಗೊಳಿಸಬಹುದು. ಆದರೆ, ಈ ಮಧ್ಯೆ ಯಾರಾದರೂ ರದ್ದಾದ ಪ್ಯಾನ್ ಕಾರ್ಡ್ ಬಳಸಿದರೆ ಅದನ್ನು ಆದಾಯ ತೆರಿಗೆ ಕಾಯಿದೆಯಡಿ ಸೆಕ್ಷನ್ 272 ಬಿ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪ್ಯಾನ್ ಹೊಂದಿರುವವರು 10000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ